CONNECT WITH US  

ಕಾಶ್ಮೀರದಲ್ಲಿ ಹಿಮಪಾತ: ಐವರು ಯೋಧರು ಕಣ್ಮರೆ

ಶ್ರೀನಗರ: ಕಾಶ್ಮೀರದ ಗಡಿ ನಿಯಂತ್ರಣ ರೇಖೆಗಂಟಿ ಕೊಂಡಿರುವ ಗುರೆಜ್‌ ಮತ್ತು ನೌಗಮ್‌ ಸೆಕ್ಟರ್‌ಗಳಲ್ಲಿ ಮಂಗಳವಾರ ಸಂಭವಿಸಿದ ಹಿಮಪಾತದಿಂದ ಐವರು ಯೋಧರು ಕಾಣೆಯಾಗಿದ್ದಾರೆ. 

ಕುಪ್ವಾರ ಜಿಲ್ಲೆಯ ನೌಗಮ್‌ ವಲಯದಲ್ಲಿ ಇಬ್ಬರು ಯೋಧರು ಕಾಲುಜಾರಿ ಬಿದ್ದು ಕಾಣೆಯಾಗಿದ್ದಾರೆ. ಬಂಡಿಪೋರ ಜಿಲ್ಲೆಯ ಉಪವಲಯದಲ್ಲಿ ತೀವ್ರ ಸ್ವರೂಪದ ಹಿಮಪಾತವಾಗುತ್ತಿದ್ದ ವೇಳೆ ಮೂವರು ಯೋಧರು ಕಣ್ಮರೆ ಯಾದ್ದಾರೆ. ಭಾರೀ ಪ್ರಮಾಣದಲ್ಲಿ ಹಿಮ ಬೀಳುತ್ತಿರುವ ಕಾರಣ ರಕ್ಷಣಾ ಕಾರ್ಯಾಚರಣೆಗೂ ಅಡ್ಡಿಯಾಗಿದೆ ಎಂದು ರಕ್ಷಣಾ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ಇದಕ್ಕೂ ಮೊದಲು ಈ ಕುರಿತು ಮಾಹಿತಿ ನೀಡಿದ್ದ ಪೊಲೀಸ್‌ ಅಧಿಕಾರಿ, ಗುರೆಜ್‌ನ ತಮ್ಮ ಸೇನಾ ನೆಲೆ ಮೇಲೆ ಹಠಾತ್‌ ಹಿಮಪಾತವಾದ ಬಳಿಕ ಮೂವರು ಯೋಧರು ಕಾಣೆಯಾಗಿ ದ್ದಾರೆ ಎಂದಿದ್ದರು. 

ಜಮ್ಮು ಕಾಶ್ಮೀರದಾದ್ಯಂತ ಹಿಮಪಾತವಾಗುತ್ತಿದ್ದು, ಇದೇ ಸ್ಥಿತಿ ಗುರುವಾರದವರೆಗೂ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. 

Trending videos

Back to Top