CONNECT WITH US  

ನಿತೀಶ್‌ಗಿಂತಲೂ ಅವರ ಮಗನೇ ಶ್ರೀಮಂತ

ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಆಸ್ತಿಗಿಂತಲೂ ಪುತ್ರನ ಆಸ್ತಿಯೇ ಹೆಚ್ಚು ಎಂಬ ಅಚ್ಚರಿಯ ಅಂಶ ಇದೀಗ ಬೆಳಕಿಗೆ ಬಂದಿದೆ. ನಿತೀಶ್‌ರ ಚರಾಸ್ತಿ ಮತ್ತು ಸ್ಥಿರಾಸ್ತಿ ಸೇರಿ ಒಟ್ಟು ಆಸ್ತಿ ಮೌಲ್ಯ 56.23 ಲಕ್ಷ ರೂ. ಕಳೆದ ವರ್ಷಕ್ಕೆ ಹೋಲಿಸಿದರೆ ಅವರ ಆಸ್ತಿ ಮೊತ್ತ 26,000 ರೂ. ಕಡಿಮೆಯಾಗಿದೆ. ಆದರೆ, ಅವರ ಮಗ ನಿಶಾಂತ್‌ ತಮ್ಮ ತಂದೆಗಿಂತಲೂ 4 ಪಟ್ಟು ಹೆಚ್ಚು ಶ್ರೀಮಂತ. ನಿಶಾಂತ್‌ರ ಆಸ್ತಿ ಮೌಲ್ಯ 2.43 ಕೋಟಿ ರೂ. ನಿತೀಶ್‌ ಕುಮಾರ್‌ ಸೇರಿ ಅವರ ಸಂಪುಟ ಸಹೋದ್ಯೋಗಿಗಳು ತಮ್ಮ ಆಸ್ತಿ ಘೋಷಣೆ ಮಾಡಿದ್ದಾರೆ. ಅದು ಸರಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿದೆ. ಅದರಂತೆ ಬಿಹಾರ ಉಪಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಮೋದಿ ಅವರ ಆಸ್ತಿ ಮೊತ್ತ  94.92 ಲಕ್ಷ  ರೂ.

Trending videos

Back to Top