CONNECT WITH US  

ಹೊಸ ಸಾರ್ವಕಾಲಿಕ ಎತ್ತರವನ್ನು ತಲುಪಿದ ಸೆನ್ಸೆಕ್ಸ್‌, ನಿಫ್ಟಿ

ಮುಂಬಯಿ : ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಹಾಗೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ  ಹೊಸ ಸಾರ್ವಕಾಲಿಕ ಎತ್ತರದ ಮಟ್ಟವನ್ನು ತಲುಪಿದವು. 

ಸೆನ್ಸೆಕ್ಸ್‌ ಇಂದಿನ ಆರಂಭಿಕ ವಹಿವಾಟಿನಲ್ಲಿ 209.35 ಅಂಕಗಳ ಜಿಗಿತವನ್ನು ಪಡೆದು ಹೊಸ ಸಾರ್ವಕಾಲಿಕ ಎತ್ತರದ 34,801.74 ಅಂಕಗಳ ಮಟ್ಟವನ್ನು ತಲುಪಿತು. ಕಳೆದ ಜನವರಿ 12ರಂದು ಸೆನ್ಸೆಕ್ಸ್‌ ವಹಿವಾಟಿನ ನಡುವೆ 34,638.42 ಅಂಕಗಳ ಎತ್ತರವನ್ನು ತಲುಪಿತ್ತು.

ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲಿ 52.15 ಅಂಕಗಳ ಏರಿಕೆಯನ್ನು ಪಡೆದುಕೊಂಡು ಸಾರ್ವಕಾಲಿಕ ಎತ್ತರದ 10,733.40 ಅಂಕಗಳ ಮಟ್ಟವನ್ನು ತಲುಪಿತು. ನಿಫ್ಟಿ ಕಳೆದ ಜನವರಿ 12ರಂದು ವ್ಯವಹಾರದ ನಡುವೆ 10,690.40 ಅಂಕಗಳ ಸಾರ್ವಕಾಲಿಕ ಎತ್ತರದ ಮಟ್ಟವನ್ನು ತಲುಪಿತ್ತು. 

ಸೆನ್ಸೆಕ್ಸ್‌ ಮತ್ತು ನಿಫ್ಟಿ ಇಂದು ಈ ಸಾರ್ವಕಾಲಿಕ ದಾಖಲೆಯ ಹೊಸ ಎತ್ತರವನ್ನು ತಲುಪಲು ಮುಖ್ಯ ಕಾರಣವಾದದ್ದು ಆರ್ಥಿಕ ಪ್ರಗತಿ ಬಿಂಬಿಸುವ ಅಂಕಿ ಅಂಶಗಳು ಆಶಾದಾಯಕವಾಗಿರುವುದು, ಡಾಲರ್‌ ಎದುರು ರೂಪಾಯಿ 23 ಪೈಸೆ ಚೇತರಿಸಿಕೊಂಡಿರುವುದು, ಕಂಪೆನಿಗಳ ಡಿಸೆಂಬರ್‌ ತ್ತೈಮಾಸಿಕ ಫ‌ಲಿತಾಂಶಗಳು ಉತ್ತಮವಾಗಿರುವುದು.

ಇಂದಿನ ಆರಂಭಿಕ ವಹಿವಾಟಿನಲ್ಲಿ  ಐಸಿಐಸಿಐ ಬ್ಯಾಂಕ್‌, ಎಚ್‌ ಡಿ ಎಫ್ ಸಿ, ಇನ್‌ಫೋಸಿಸ್‌, ರಿಲಯನ್ಸ್‌, ಟಾಟಾ ಸ್ಟೀಲ್‌ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು. 

Trending videos

Back to Top