CONNECT WITH US  

ಪೂಂಚ್‌: ಯೋಧರಿಂದ ಉಗ್ರರ ಒಳ ನುಸುಳುವಿಕೆ ಯತ್ನ ವಿಫ‌ಲ

ಜಮ್ಮು : ಜಮ್ಮು ಕಾಶ್ಮೀರದ ಪೂಂಚ್‌ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಭಾರತದೊಳಗೆ ನುಸುಳಿ ಬರಲೆತ್ನಿಸುತ್ತಿದ್ದ ಉಗ್ರರ ಸಮೂಹವೊಂದನ್ನು ಭಾರತೀಯ ಸೇನಾ ಪಡೆ ಹಿಮ್ಮೆಟ್ಟಿಸಿರುವುದಾಗಿ ವರದಿಯಾಗಿದೆ. 

ಉಗ್ರರು ಸುಮಾರು ನಾಲ್ಕರಿಂದ ಐದರ ಸಂಖ್ಯೆಯಲ್ಲಿದ್ದರು. ಪೂಂಚ್‌ ಸೆಕ್ಟರ್‌ನ ಮೇಂಧರ್‌ ನಲ್ಲಿ  ಎಲ್‌ಓಸಿಯಲ್ಲಿ ಶಂಕಾಸ್ಪದ ಚಲನವಲನಗಳು ಕಂಡು ಬಂದಾಗ ಭಾರತೀಯ ಯೋಧರು ಜಾಗೃತರಾದರು. ಆಗ ಗುಂಡಿನ ದಾಳಿ ನಡೆದು ಉಗ್ರರ ಒಳನುಸುಳುವಿಕೆ ಯತ್ನವನ್ನು ವಿಫ‌ಲಗೊಳಿಸಲಾಯಿತು ಎಂದು ಸೇನೆಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಈ ಘಟನೆಯನ್ನು ಅನುಸರಿಸಿ ಭಾರತೀಯ ಯೋಧರು ವ್ಯಾಪಕ ಶೋಧ ಕಾರ್ಯಾಚರಣೆ ಕೈಗೊಂಡು ಅದು ಈಗಲೂ ಮುಂದುವರಿದಿದೆ; ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ಅಧಿಕಾರಿ ಹೇಳಿದರು. 

Trending videos

Back to Top