CONNECT WITH US  

ಕೊಲೆ ಅಪರಾಧ: ಸೇನಾ ಜವಾನನಿಗೆ ಜೀವಾವಧಿ ಜೈಲು ಶಿಕ್ಷೆ

ಮುಜಫ‌ರನಗರ : 2010ರಲ್ಲಿ ಹಣಕಾಸು ವಿವಾದದಲ್ಲಿ ಅಂಗಡಿ ಮಾಲಕನೊಬ್ಬನನ್ನು ಕೊಲೆಗೈದುದಕ್ಕಾಗಿ ನ್ಯಾಯಾಲಯವು ಸೇನಾ ಜವಾನನೊಬ್ಬನಿಗೆ ಜೀವಾವಧಿ ಜೈಲು ಶಿಕ್ಷೆಯನ್ನು ವಿಧಿಸಿದೆ.

ಕೊಲೆ ಪ್ರಕರಣದಲ್ಲಿ ಕೋರ್ಟಿಗೆ ಶರಣಾಗಿದ್ದ ಸೇನಾ ಜವಾನ ಯೋಗೇವ್‌ ಕುಮಾರ್‌ಗೆ ಹೆಚ್ಚುವರಿ ಜಿಲ್ಲಾ ಸೆಶನ್ಸ್‌ ನ್ಯಾಯಾಧೀಶೆ ಪೂನಮ್‌ ರಜಪೂತ್‌ ಅವರು ಜೀವಾವಧಿ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದರು. ಜತೆಗೆ 2,000 ರೂ. ದಂಡವನ್ನೂ ವಿಧಿಸಿದರು. 

ಈ ಕೊಲೆ ಪ್ರಕರಣದಲ್ಲಿ ಇನ್ನಿಬ್ಬರು ಆರೋಪಿಗಳಾದ ಅಖೀಲೇಶ್‌ ಮತ್ತು ಕಮಲ್‌ ಅವರಿಗೆ ನ್ಯಾಯಾಲಯ ಕಳೆದ ಜನವರಿ 30ರಂದು ಜೀವಾವಧಿ ಜೈಲು ಶಿಕ್ಷೆ ವಿಧಿಸಿತ್ತು. ಕೋರ್ಟಿಗೆ ಹಾಜರಾಗದಿದ್ದ ಯೋಗೇಶ್‌ ವಿರುದ್ಧ ಜಾಮೀನು ರಹಿತ ವಾರೆಂಟ್‌ ಜಾರಿಮಾಡಿತ್ತು. 

ಸೇನಾ ಜವಾನ ಯೋಗೇಶ್‌ ನಿನ್ನೆ ಬುಧವಾರ ಸಂಜೆ ಕೋರ್ಟಿಗೆ ಶರಣಾಗಿದ್ದ. 

ಇಂದು ಹೆಚ್ಚು ಓದಿದ್ದು

ಬೆಂಗಳೂರಿನಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಬಂಧಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಚಿವ ರಮೇಶ ಜಾರಕಿಹೊಳಿ.

Nov 19, 2018 06:00am

ಬಾಗಲಕೋಟೆಯಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ ಬೆಂಕಿಗೆ ಆಹುತಿ.

Nov 19, 2018 06:00am

Trending videos

Back to Top