CONNECT WITH US  

ಬಿಜೆಪಿಗಿದೆ ಸಾಲು ಸವಾಲು

ತ್ರಿಪುರ ನಾಗಾಲ್ಯಾಂಡ್‌ಗಳಲ್ಲಿ ಅಧಿಕಾರಕ್ಕೇರಲಿರುವ ಬಿಜೆಪಿ ವೈವಿಧ್ಯಮಯ ಸವಾಲುಗಳು ಎದುರಾಗುವುದು ಶತಃಸ್ಸಿದ್ದ. ತ್ರಿಪುರದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಮೊದಲ ಆದ್ಯತೆ. ಮೂಲಸೌಕರ್ಯ ಕೊರತೆಗೆ ಬೇಸತ್ತಿದ್ದರಿಂದಲೇ ಜನರು ಬಿಜೆಪಿಗೆ ಮತ ಹಾಕಿದ್ದಾರೆ. ಆದರೆ ಬಿಜೆಪಿಯಲ್ಲಿ ಆಯ್ಕೆಯಾದ ಬಹುತೇಕರು ಆಡಳಿತದಲ್ಲಿ ಅನನುಭವಿಗಳಾಗಿರುವುದು ಸರಕಾರ ನಡೆಸುವುದು ಸವಾಲಿನ ಕೆಲಸವಾಗಿದೆ.

ಇನ್ನೊಂದೆಡೆ ನಾಗಾಲ್ಯಾಂಡ್‌ ಭ್ರಷ್ಟ ಆಡಳಿತ ವ್ಯವಸ್ಥೆಗೆ ಕುಖ್ಯಾತವಾದದ್ದು. ಇಲ್ಲಿನ ಮೂಲ ಸೌಕರ್ಯವೂ ಕಳಪೆ ಮಟ್ಟದ್ದಾಗಿದೆ. ಇವೆಲ್ಲವನ್ನೂ ಸರಿಪಡಿಸಿದರೂ, ನಾಗಾಲ್ಯಾಂಡ್‌ನ‌ ಜನರು ನಾಗಾ ಬಂಡುಕೋರರ ಉಪಟಳ ತಡೆಯುವುದೂ ದೊಡ್ಡ ಸವಾಲು. 20 ವರ್ಷಗಳಿಂದಲೂ ನಾಗಾ ಸೋಶಿಯ ಲಿಸ್ಟ್‌ ಕೌನ್ಸಿಲ್‌ ಆಫ್ ನಾಗಾಲಿಮ್‌ ಬಂಡುಕೋರ ಸಂಘಟನೆ ಜತೆ ಮಾತುಕತೆ ನಡೆಯುತ್ತಲೇ ಇದೆ. ಮಾಡಿಕೊಂಡ ಒಪ್ಪಂದಗಳು ಮುರಿದು ಬೀಳುತ್ತಲೇ ಇವೆ. 2015ರಲ್ಲಿ ಮೋದಿ ಸರಕಾರ ಒಂದು ಹಂತದ ಮಾತುಕತೆ ನಡೆಸಿ, ಒಂದು ಪಂಗಡವಾದ ಎನ್‌ಎಸ್‌ಸಿಎನ್‌ ಜತೆ ಒಪ್ಪಂದ ಮಾಡಿಕೊಂಡಿತ್ತು. ಆದಾಗ್ಯೂ, ಎಲ್ಲ ಪಕ್ಷಗಳೂ ಚುನಾವಣೆ ನಿಷೇಧಿಸಬೇಕು ಎಂದು ಬಂಡುಕೋರ ಸಂಘಟನೆಗಳು ಆದೇಶಿಸಿದ್ದವು.

ಮೇಘಾಲಯದಲ್ಲಿ ಬಿಜೆಪಿಗೆ ಸರಕಾರ ರಚನೆಯೂ ಒಂದು ಸವಾಲಾಗಿದ್ದರೆ, ನಂತರ ಎಲ್ಲ ಪಕ್ಷಗಳನ್ನೂ ಒಟ್ಟಿಗೇ ಕರೆದೊಯ್ಯವುದು ಮತ್ತು ಆ ಸರ್ಕಸ್‌ ಮಧ್ಯೆಯೇ ರಾಜ್ಯದಲ್ಲಿ ಅತಿ ಹೆಚ್ಚಿರುವ ಶಿಶು ಮರಣ ಪ್ರಮಾಣದಂತಹ ಸಮಸ್ಯೆಯನ್ನು ನಿವಾರಿಸುವುದು ಸವಾಲಾಗಿರಲಿದೆ.

Trending videos

Back to Top