CONNECT WITH US  

ಆಪ್‌ ರಾಲಿಗೆ ಕರೆತಂದಿದ್ದ ಕಾರ್ಮಿಕರಿಗೆ ಹಣವೂ ಇಲ್ಲ, ಆಹಾರವೂ ಇಲ್ಲ

ಹೊಸದಿಲ್ಲಿ : ನಿನ್ನೆ ಭಾನುವಾರ ಹರಿಯಾಣದ ಹಿಸ್ಸಾರ್‌ನಲ್ಲಿ ನಡೆದಿದ್ದ ಆಮ್‌ ಆದ್ಮಿ ಪಕ್ಷದ ರಾಲಿಗೆ ಹಣ, ಆಹಾರ ನೀಡುವ ಆಮಿಷ ಒಡ್ಡಿ ಕರೆ ತಂದಿದ್ದ ನಮಗೆ 'ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಪ್‌ ಪಕ್ಷ ಏನನ್ನೂ ಕೊಡದೆ ವಂಚಿಸಿದೆ' ಎಂದು ಹರಿಯಾಣದ ಅನೇಕ ಕೂಲಿ ಕಾರ್ಮಿಕರು ಆಪಾದಿಸಿದ್ದಾರೆ.

'ರಾಲಿಯಲ್ಲಿ ಭಾಗವಹಿಸಿದರೆ ನಮಗೆ ಆಹಾರ ಮಾತ್ರವಲ್ಲದೆ ತಲಾ 350 ರೂ. ಕೊಡಲಾಗುವುದೆಂದು ಆಮ್‌ ಆದ್ಮಿ ಪಕ್ಷ ಹೇಳಿತ್ತು. ಆದರೆ ನಮಗೆ ಏನನ್ನೂ ಕೊಡದೆ ವಂಚಿಸಿದ್ದಾರೆ' ಎಂದು ಕೂಲಿ ಕಾರ್ಮಿಕರು ತಮ್ಮ ಅಳಲನ್ನು ಮಾಧ್ಯಮದ ಮುಂದೆ ತೋಡಿಕೊಂಡರು. 

2019ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷ ಸ್ಪರ್ಧಿಸುವುದೆಂಬ ಘೋಷಣೆಯನ್ನು ಪಕ್ಷದ ಮುಖ್ಯಸ್ಥರಾಗಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಘೋಷಿಸಿದ್ದರು. 

ತಮ್ಮ ಭಾಷಣದಲ್ಲಿ ಕೇಜ್ರಿವಾಲ್‌ ಅವರು ಹಿಂದಿನ ಭೂಪೀಂದರ್‌ ಸಿಂಗ್‌ ಹೂಡಾ ನೇತೃತ್ವದ ಸರಕಾರ ಮತ್ತು ಈಗಿನ ಮನೋಹರ್‌ ಲಾಲ್‌ ಖಟ್ಟರ್‌ ಸರಕಾರವನ್ನು ತೀವ್ರವಾಗಿ ಟೀಕಿಸಿ ವಾಗ್ಧಾಳಿ ನಡೆಸಿದರು.

Trending videos

Back to Top