CONNECT WITH US  

ಐಡಿಬಿಐ ಬ್ಯಾಂಕ್‌ಗೆ ಆರ್ಥಿಕ ಸಂಕಷ್ಟ

ಹೊಸದಿಲ್ಲಿ: ಐಡಿಬಿಐ ಬ್ಯಾಂಕ್‌ನ ಆರ್ಥಿಕ ಸ್ಥಿತಿ ಕಳಪೆಯಾಗಿದ್ದು, ಸರಕಾರ ತಕ್ಷಣ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ಹಣಕಾಸು ಸಚಿವಾಲಯಕ್ಕೆ ರಿಸರ್ವ್‌ ಬ್ಯಾಂಕ್‌ ಪತ್ರ ಬರೆದಿದೆ ಎಂದು ಮೂಲಗಳು ತಿಳಿಸಿವೆ. ಬ್ಯಾಂಕ್‌ನ ಅನುತ್ಪಾದಕ ಆಸ್ತಿ ಹೆಚ್ಚಿದೆ. ಅಲ್ಲದೆ ಅನುತ್ಪಾದಕ ಆಸ್ತಿಯನ್ನು ಗುರುತಿಸುವ ಬ್ಯಾಂಕ್‌ನ ವಿಧಾನವೂ ಕಳಪೆ ಯಾಗಿದೆ. ಈಗಾಗಲೇ ವರದಿ ಮಾಡಿದ ಅನುತ್ಪಾದಕ ಸ್ವತ್ತಿಗಿಂತ ವಾಸ್ತವ ಅನುತ್ಪಾದಕ ಸ್ವತ್ತು ಹೆಚ್ಚಿರಬಹುದು ಎಂದು ಆರ್‌ಬಿಐ ತಿಳಿಸಿದೆ ಎನ್ನಲಾಗಿದೆ. 2017ರ ಡಿಸೆಂಬರ್‌ಗೆ ಕೊನೆಯಾದ ತ್ತೈಮಾಸಿಕದಲ್ಲಿ ಬ್ಯಾಂಕ್‌ 1,542 ಕೋಟಿ ರೂ. ನಷ್ಟ ಅನುಭವಿಸಿತ್ತು. ಮರುಪಾವತಿಯಾಗದ ಸಾಲದ ಪ್ರಮಾಣ ಶೇ. 24.22ಕ್ಕೆ ಏರಿಕೆಯಾಗಿತ್ತು. 

Trending videos

Back to Top