CONNECT WITH US  

ವಾರದೊಳಗೆ 8.5 ಲಕ್ಷ Toilet ನಿರ್ಮಾಣ ಸಾಧ್ಯವಾ ? ತೇಜಸ್ವಿ ಪ್ರಶ್ನೆ

ಪಟ್ನಾ : ಬಿಹಾರದಲ್ಲಿ ಒಂದೇ ವಾರದೊಳಗೆ 8.5 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿರುವುದರ ಸತ್ಯಾಂಶವನ್ನು ಬಿಹಾರದ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಪ್ರಶ್ನಿಸಿದ್ದಾರೆ. 

ಒಂದು ವಾರದೊಳಗೆ 8.5 ಲಕ್ಷ ಶೌಚಾಲಯವನ್ನು ನಿರ್ಮಿಸಿರುವುದು ನಿಜವೆಂದಾದರೆ ಪ್ರತಿ ತಾಸಿಗೆ 5,059 ಶೌಚಾಲಯಗಳನ್ನು ನಿರ್ಮಿಸಿದಂತಾಗುತ್ತದೆ. ಆದರೆ ಇದು ಸಾಧ್ಯವೇ ? ಎಂದು ತೇಜಸ್ವಿ ಯಾದವ್‌ ಪ್ರಶ್ನಿಸಿದ್ದಾರೆ.

ತೇಜಸ್ವಿ ಈ ಬಗ್ಗೆ ಟ್ವಿಟರ್‌ನಲ್ಲಿ ಕೊಟ್ಟಿರುವ ಲೆಕ್ಕ ಹೀಗಿದೆ : 

1 ವಾರ = 7 ದಿನ; 1 ದಿನ = 24 ತಾಸು, 7 ದಿನ = 168 ತಾಸು, 1 ತಾಸು = 60 ನಿಮಿಷ. ಅಂತಿರುವಾಗ 8,50,000 ಭಾಗಿಸು 168 = 5,059 ಶೌಚಾಲಯಗಳು ಪ್ರತೀ ತಾಸಿಗೆ; 5,059 ಭಾಗಿಸು 60 = 84.31 ಶೌಚಾಲಯಗಳು ಪ್ರತೀ ನಿಮಿಷಕ್ಕೆ.

ಪ್ರಧಾನಿ ಸಾಹೇಬರೇ, ಇದೊಂದು ಮಹಾ ಸುಳ್ಳು. ಬಿಹಾರದ ಮುಖ್ಯಮಂತ್ರಿ ಇಂತಹ ಸುಳ್ಳನ್ನು ಒಪ್ಪುವುದಿಲ್ಲ ಎಂದು ನಾನು ತಿಳಿಯುತ್ತೇನೆ ಎಂದು ತೇಜಸ್ವಿ ಟ್ವೀಟ್‌ ಮಾಡಿದ್ದಾರೆ. 

ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದಲ್ಲಿ ನಡೆದಿರುವ ಸ್ವಚ್ಚ ಭಾರತ ಅಭಿಯಾನದಲ್ಲಿ ಮಹತ್ತರ ಸಾಧನೆಯನ್ನು ಮಾಡಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನಿತೀಶ್‌ ಅವರನ್ನು ಅಭಿನಂದಿಸಿರುವುದಕ್ಕೆ ಪ್ರತಿಯಾಗಿ ತೇಜಸ್ವಿ ಯಾದವ್‌ ಟ್ವಿಟರ್‌ನಲ್ಲಿ "ಶೌಚಾಲಯ ಲೆಕ್ಕಾಚಾರ' ಸಾದರ ಪಡಿಸಿದ್ದಾರೆ. 


Trending videos

Back to Top