ಮುಂಬಯಿ ಶೇರು: 2 ದಿನಗಳ ಸೋಲಿನ ಬಳಿಕ 150 ಅಂಕ ಜಿಗಿತ

ಮುಂಬಯಿ : ನಿರಂತರ ಎರಡು ದಿನಗಳ ಕಾಲ ನಷ್ಟಕ್ಕೆ ಗುರಿಯಾಗಿದ್ದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 150 ಅಂಕಗಳ ಜಿಗಿತವನ್ನು ದಾಖಲಿಸಿತು.
ಲೋಕಸಭೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಎನ್ಡಿಎ ಸರಕಾರದ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿರುವ ಅವಿಶ್ವಾಸ ಗೊತ್ತುವಳಿ ಮೇಲಿನ ಚರ್ಚೆ, ಮತದಾನ ಇಂದು ನಡೆಯಲಿದ್ದು ಅದಕ್ಕೆ ಪೂರ್ವಭಾವಿ ಎಂಬಂತೆ ಭರ್ಜರಿ ಶೇರು ಖರೀದಿ ಕಂಡು ಬಂತು.
ಕಳೆದ ಎರಡು ದಿನಗಳ ವಹಿವಾಟಿನಲ್ಲಿ 168.73 ಅಂಕಗಳ ನಷ್ಟಕ್ಕೆ ಗುರಿಯಾಗಿದ್ದ ಸೆನ್ಸೆಕ್ಸ್ ಇಂದು ಬೆಳಗ್ಗೆ 10.40ರ ಹೊತ್ತಿಗೆ 125.47 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 36,476.70 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 39.40 ಅಂಕಗಳ ಮುನ್ನಡೆಯೊಂದಿಗೆ 10,996.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ ಏಳು ಪೈಸೆ ಕುಸಿದು ದಾಖಲೆಯ ತಳ ಮಟ್ಟವಾಗಿ 69.12 ರೂ. ಗೆ ಕುಸಿಯಿತು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಬಜಾಜ್ ಫಿನಾನ್ಸ್, ರಿಲಯನ್ಸ್, ಇನ್ಫೋಸಿಸ್, ಬಜಾಜ್ ಫಿನ್ಸರ್ವ್, ಎಚ್ ಡಿ ಎಫ್ ಸಿ ಬ್ಯಾಂಕ್ ಶೇರುಗಳು ಸಕ್ರಿಯವಾಗಿದ್ದವು.
ಟಾಪ್ ಗೇನರ್ಗಳು : ಬಜಾಜ್ ಫಿನ್ ಸರ್ವ್ , ಬಜಾಜ್ ಫಿನಾನ್ಸ್, ಇನ್ಫೋಸಿಸ್, ಟೆಕ್ ಮಹೀಂದ್ರ, ಐಸಿಐಸಿಐ ಬ್ಯಾಂಕ್; ಟಾಪ್ ಲೂಸರ್ಗಳು : ಬಿಪಿಸಿಎಲ್, ಒಎನ್ಜಿಸಿ, ವೇದಾಂತ, ಎಚ್ ಪಿ ಸಿ ಎಲ್, ಪವರ್ ಗ್ರಿಡ್.