CONNECT WITH US  

ಜಲಾಲಾಬಾದ್‌ ಪ್ರಸೂತಿ ತರಬೇತಿ ಕೇಂದ್ರದ ಮೇಲೆ ISIS ದಾಳಿ,ಮೂವರಿಗೆ ಗಾಯ

ಕಾಬೂಲ್‌ : ಪೂರ್ವ ಅಫ್ಘಾನಿಸ್ಥಾನದ ಪ್ರಸೂತಿ ತರಬೇತಿ ಕೇಂದ್ರದ ಮೇಲೆ ಬಂದೂಕುಧಾರಿ ಉಗ್ರರು ನಡೆಸಿರುವ ದಾಳಿಯಲ್ಲಿ ಮೂವರು ಗಾಯಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರದ ಆವರಣದಲ್ಲಿ ಉಗ್ರರು ನಡೆಸಿರವ ಸ್ಫೋಟದಿಂದ ಭಾರೀ ದಟ್ಟ ಕಪ್ಪು ಹೊಗೆ ಮೇಲೆಳ್ಳುತ್ತಿರುವುದು ಕಂಡು ಬಂದಿದೆ. 

ನಂಗರ್‌ಹಾರ್‌ ಪ್ರಾಂತ್ಯದ ಜಲಾಲಾಬಾದ್‌ ನಲ್ಲಿರುವ ಈ ಕೇಂದ್ರವನ್ನು ಉಗ್ರರಿಂದ ಮುಕ್ತಗೊಳಿಸಲು ಅಫ್ಘಾನ್‌ ಭದ್ರತಾ ಪಡೆಗಳು ಒಳನುಗ್ಗಿದ್ದಾರೆ. ಕಟ್ಟಡದ ಒಳಗಿಂದ ಗುಂಡಿನ ಸದ್ದು ಆಗೀಗ ಎಂಬಂತೆ ಕೇಳಿ ಬರುತ್ತಿದೆ ಎಂದು ಪ್ರತ್ಯಕ್ಷದರ್ಶಿಗಳು, ಅಧಿಕಾರಿಗಳನ್ನು ಉಲ್ಲೇಖೀಸಿ ಎಎಫ್ಪಿ ವರದಿ ಮಾಡಿದೆ. 

ಈ ದಾಳಿಯನ್ನು ಯಾವ ಉಗ್ರ ಸಂಘಟನೆ ಮಾಡಿದ್ದೆಂದು ಗೊತ್ತಾಗಿಲ್ಲ; ಹಾಗಿದ್ದರೂ ನಂಗರ್‌ಹಾರ್‌ ಪ್ರಾಂತ್ಯವು ಐಸಿಸ್‌ ಉಗ್ರರ ಭದ್ರ ಕೋಟೆಯಾಗಿರುವುದರಿಂದ ಐಸಿಸ್‌ ಉಗ್ರರೇ ಈ ದಾಳಿ ಎಸಗಿರುವುದಾಗಿ ತಿಳಿಯಲಾಗಿದೆ. 


Trending videos

Back to Top