CONNECT WITH US  

ಐಸಿಸ್‌ ಬೆಂಬಲಿಗ ಗಡಿಪಾರು

ಯುಎಇನಿಂದ ಗಡಿಪಾರಾದ ಕಾಶ್ಮೀರಿ ಇಂಜಿನಿಯರ್‌ 

ಶ್ರೀನಗರ: ಐಸಿಸ್‌ ಬೆಂಬಲಿಗ ಕಾಶ್ಮೀರದ ಇರ್ಫಾನ್‌ ಅಹಮದ್‌ ಝರ್ಗರ್‌ ಎಂಬಾತನನ್ನು ಯುನೈಟೆಡ್‌ ಅರಬ್‌ ಎಮಿರೇಟ್ಸ್‌(ಯುಎಇ)ನಿಂದ ಭಾರತಕ್ಕೆ ಗಡಿಪಾರು  ಮಾಡಲಾಗಿದೆ. ಈತ ಕಾಶ್ಮೀರದ ಛತ್ತರಬಲ್‌ ಪ್ರದೇಶದವನಾಗಿದ್ದು, ಯುಎಇಯಲ್ಲಿ ಇಂಜಿನಿಯರ್‌ ಆಗಿದ್ದ. ಈತನನ್ನು ಆಗಸ್ಟ್‌ 14ರಂದು ಗಡಿಪಾರು ಮಾಡಲಾಗಿದ್ದು, ರಾಷ್ಟ್ರೀಯ ತನಿಖಾ ದಳ ಸೇರಿದಂತೆ ವಿವಿಧ ಭದ್ರತಾ ಸಂಸ್ಥೆಗಳು ವಿಚಾರಣೆ ನಡೆಸಿವೆ. ಈತನನ್ನು ಈಗ ಜಮ್ಮು ಕಾಶ್ಮೀರ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ವಿವರವಾದ ತನಿಖೆ ಯ ನ್ನು ಮುಂದುವರಿಸಲಿದ್ದಾರೆ. ಆದರೆ ಜಮ್ಮು ಕಾಶ್ಮೀರದಲ್ಲಿ ಈತನ ವಿರುದ್ಧ ಯಾವುದೇ ಪ್ರಕರಣ ಈ ಹಿಂದೆ ದಾಖಲಾಗಿರಲಿಲ್ಲ.

ದುಬೈನ ಟೆಲಿಕಾಂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಝರ್ಗರ್‌, ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿದ್ದ. ಸಿರಿಯಾ ದಲ್ಲಿ ಐಸಿಸ್‌ನ ಕೃತ್ಯಗಳನ್ನು ಮುಕ್ತವಾಗಿ ಮೆಚ್ಚಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದ. ಏಪ್ರಿಲ್‌ 28ರಂದು ಓಮನ್‌ನಿಂದ ದುಬೈಗೆ ಪ್ರಯಾಣಿ ಸುವಾಗ ದುಬೈ ಅಧಿಕಾರಿಗಳು ಈತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿ ಸಿದ್ದರು. ಓಮನ್‌ನಲ್ಲಿ ಸ್ವಂತ ಉದ್ಯೋಗ ಸ್ಥಾಪನೆ ಮಾಡುವ ಉದ್ದೇಶದಿಂದ ಪ್ರಯಾ ಣಿಸಿದ್ದೆ ಎಂದು ಅಧಿಕಾರಿಗಳಿಗೆ ಈತ ಹೇಳಿ ಕೊಂಡಿದ್ದಾನೆ. ಸಿರಿಯಾ ಮತ್ತು ಇರಾಕ್‌ನಲ್ಲಿ ಐಸಿಸ್‌ ಚಟುವಟಿಕೆಗಳನ್ನು ಬೆಂಬಲಿಸಲು ಕಾರಣ ನೀಡುವಂತೆ ಆತನನ್ನು ಪ್ರಶ್ನಿಸಿದ್ದರು. ಈ ಹಿಂದೆಯೂ ಇಬ್ಬರನ್ನು ಐಸಿಸ್‌ ಬೆಂಬಲಿ ಗರು ಎಂಬ ಕಾರಣಕ್ಕೆ ಭಾರತಕ್ಕೆ ಗಡಿಪಾರು ಮಾಡ ಲಾಗಿದ್ದು, ಈತ ಮೂರನೆಯ ವನಾಗಿದ್ದಾನೆ.


Trending videos

Back to Top