CONNECT WITH US  

ರಫೇಲ್‌: ಬಿಜೆಪಿಗೆ ಚ್ಯಾಲೆಂಜ್‌ ಹಾಕಿರುವ ರಾಹುಲ್‌ core group ಸಭೆ

ಹೊಸದಿಲ್ಲಿ : ಫ್ರಾನ್ಸ್‌ ಮತ್ತು ಭಾರತ ನಡುವಿನ ವಿವಾದಾತ್ಮಕ ರಫೇಲ್‌ ಫೈಟರ್‌ ಜೆಟ್‌ ಹಗರಣವನ್ನು ಬಯಲಿಗೆಳೆವ ವಿಷಯದಲ್ಲಿ ಬಿಜೆಪಿಗೆ 24 ತಾಸುಗಳ ಚ್ಯಾಲೆಂಜ್‌ ಹಾಕಿರುವ  ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಇಂದು ಗುರುವಾರ ಪಕ್ಷದ ಕೋರ್‌ ಗ್ರೂಪ್‌ ಜತೆ ಮಾತುಕತೆ ನಡೆಸಲಿದ್ದಾರೆ. 

"ಗ್ರೇಟ್‌ ರಫೇಲ್‌ ರಾಬರಿ'' ಎಂದೇ ಈ ವಿವಾದಾತ್ಮಕ ಹಗರಣಕ್ಕೆ ಹೆಸರಿಟ್ಟಿರುವ ಕಾಂಗ್ರೆಸ್‌ ಪಕ್ಷ, ಇಂದು ನಡೆಯಲಿರುವ ಪಕ್ಷದ ಕೋರ್‌ ಗ್ರೂಪ್‌ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ  ದಾಳಿಯನ್ನು ಸಂಘಟಿಸುವ ಮತ್ತು ತಂತ್ರಗಾರಿಕೆಯನ್ನು ರೂಪಿಸುವ ದಿಶೆಯಲ್ಲಿ ಚರ್ಚೆ ನಡೆಸಲಿದೆ. ರಾಹುಲ್‌ ಗಾಂಧಿ ಕೋರ್‌ ಗ್ರೂಪ್‌ ಚರ್ಚೆಯ ರೂವಾರಿಯಾಗಲಿದ್ದಾರೆ. 

ಕೋರ್‌ ಗ್ರೂಪ್‌ ಸಭೆಯ ಬಳಿಕ ಪಕ್ಷದ ಕೆಲವು ಉನ್ನತ ನಾಯಕರು ಇಲ್ಲಿನ ಎಐಸಿಸಿ ಪ್ರಧಾನ ಕಾರ್ಯಾಲಯದಿಂದ ಪ್ರಧಾನಿ ನಿವಾಸದಡೆಗೆ ನಡೆಸುವ ಮೋರ್ಚಾ ದಲ್ಲಿ ಪಾಲ್ಗೊಳ್ಳಲಿದ್ದಾರೆ ಎದು ಮೂಲಗಳು ತಿಳಿಸಿವೆ. 

ಹೊಸದಾಗಿ ರೂಪಿತವಾಗಿರುವ ಕಾಂಗ್ರೆಸ್‌ ಕೋರ್‌ ಗ್ರೂಪ್‌ ನ ಇಂದಿನ ಸಭೆಯು ಅಧ್ಯಕ್ಷ ರಾಹುಲ್‌ ಗಾಂಧಿ ಅವರ ನಿವಾಸದಲ್ಲಿ ನಡೆಯಲಿದೆ. 

ರಫೇಲ್‌ ಫೈಟ್‌ ಜೆಟ್‌ ಖರೀದಿ ವ್ಯವಹಾರದ ಬಗ್ಗೆ ಜಂಟಿ ಸಂಸದೀಯ ಸಮಿತಿಯಿಂದ ತನಿಖೆಯಾಗಬೇಕೆಂದು ಕಾಂಗ್ರೆಸ್‌ ಸದನದ ಒಳ - ಹೊರಗೆ ಆಗ್ರಹಿಸುತ್ತಲೇ ಬಂದಿದೆ. 

ರಫೇಲ್‌ ಫೈಟರ್‌ ಜೆಟ್‌ ಖರೀದಿಯ ವಿಷಯದಲ್ಲಿ ಕಾಂಗ್ರೆಸ್‌ ಪಕ್ಷ ಸುಳ್ಳು ಪ್ರಚಾರಾಭಿಯಾನ ಕೈಗೊಳ್ಳುತ್ತಿದ್ದು ಅದು ಬಿಜೆಪಿಯ 15 ಮೂಲಭೂತ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ನಿನ್ನೆ ಬುಧವಾರವಷ್ಟೇ ಕೇಂದ್ರ ವಿತ್ತ ಸಚಿವ ಅರುಣ್‌ ಜೇತ್ಲಿ ಆಗ್ರಹಿಸಿ ಆ ಪ್ರಶ್ನೆಗಳನ್ನು ಕಾಂಗ್ರೆಸ್‌ಗೆ ಎಸೆದಿದ್ದರು. 

Trending videos

Back to Top