CONNECT WITH US  

ಗುಟ್ಕಾ ಹಗರಣ: ತ.ನಾ.ಸಚಿವ, ಡಿಜಿಪಿ ನಿವಾಸ ಸೇರಿ 40 ಕಡೆ ಸಿಬಿಐ ದಾಳಿ

ಹೊಸದಿಲ್ಲಿ : ಗುಟ್ಕಾ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಇಂದು ತಮಿಳು ನಾಡಿನ ಆರೋಗ್ಯ ಸಚಿವ ಮತ್ತು ಪೊಲೀಸ್‌ ಮಹಾ ನಿರ್ದೇಶಕರ ನಿವಾಸ ಸೇರಿ, ಸುಮಾರು 40 ತಾಣಗಳ ಮೇಲೆ ದಾಳಿ ನಡೆಸಿ ವ್ಯಾಪಕ ಶೋಧ ಕಾರ್ಯಾಚರಣೆ ಕೈಗೊಂಡಿತು.

ತಮಿಳು ನಾಡು ಆದ್ಯಂತ ಸಿಬಿಐ ದಾಳಿ ನಡೆಯುತ್ತಿದೆ ಎಂದಿರುವ ಅಧಿಕಾರಿಗಳು, ದಾಳಿಗೀಡಾಗಿರುವ ತಾಣಗಳ ವಿವರ ನೀಡಲು ನಿರಾಕರಿಸಿದರು. ಈ ಹಂತದಲ್ಲಿ ಹೆಚ್ಚಿನ ಮಾಹಿತಿ ನೀಡಿದರೆ ದಾಳಿ ಕಾರ್ಯಾಚರಣೆಗೆ ಅಡಚಣೆ ಉಂಟಾಗುವುದೆಂದು ಅಧಿಕಾರಿಗಳು ಹೇಳಿದರು. 

ತಮಿಳು ನಾಡು ಸರಕಾರದ ಸ್ವಾಸ್ಥ್ಯ ಸಚಿವ ಸಿ ವಿಜಯಭಾಸ್ಕರ್‌, ಡಿಜಿಪಿ ಟಿ ಕೆ ರಾಜೇಂದ್ರನ್‌ ಮಾತ್ರವಲ್ಲದೆ ಅನೇಕ ಮಾಜಿ ಪೊಲೀಸ್‌ ಅಧಿಕಾರಿಗಳು ಸೇರಿದಂತೆ ಹಲವಾರು ಪ್ರಮುಖರ ನಿವಾಸಗಳ ಮೇಲೆ ಸಿಬಿಐ ದಾಳಿ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

ತಮಿಳು ನಾಡಿನಲ್ಲಿ ಗುಟ್ಕಾ ಹಗರಣ ಬೆಳಕಿಗೆ ಬಂದದ್ದು 2017ರ ಜುಲೈ 8ರಂದು. ಅಂದು ಆದಾಯ ತೆರಿಗೆ ಇಲಾಖಾಧಿಕಾರಿಗಳು ತಮಿಳು ನಾಡಿನ ಪಾನ್‌ ಮಸಾಲಾ ಮತ್ತು ಗುಟ್ಕಾ ಉತ್ಪಾದಕರ ಗೋದಾಮು, ಕಚೇರಿ ಮತ್ತು ನಿವಾಸಗಳ ಮೇಲೆ ದಾಳಿ ನಡೆಸಿ 250 ಕೋಟಿ ರೂ. ತೆರಿಗೆ ವಂಚನೆ ಹಗರಣವನ್ನು ಬಯಲುಗೊಳಿಸಿದ್ದರು. 

ಅಂದಿನ ದಾಳಿಯಲ್ಲಿ ಆದಾಯ ತೆರಿಗೆ ಇಲಾಖಾಧಿಕಾರಿಗಳಿಗೆ ಸಿಕ್ಕಿದ ಡೈರಿಯೊಂದರಲ್ಲಿ ಯಾವೆಲ್ಲ ಉನ್ನತ ಅಧಿಕಾರಿಗಳಿಗೆ, ಸಚಿವರಿಗೆ ಲಂಚದ ಹಣ ಪಾವತಿಯಾಗಿದೆ ಎಂಬ ವಿವರಗಳು ಇದ್ದವೆನ್ನಲಾಗಿದೆ. 

ಈ ವರ್ಷ ಎಪ್ರಿಲ್‌ ನಲ್ಲಿ ಡಿಎಂಕೆ ಕೋರಿಕೆಯ ಪ್ರಕಾರ ಮದ್ರಾಸ್‌ ಹೈಕೋರ್ಟ್‌ ಈ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿತ್ತು. ಅಂತೆಯೇ ಸಿಬಿಐ ತನಿಖೆಯನ್ನು ಆರಂಭಿಸಿ ತಮಿಳು ನಾಡು ಸರಕಾರ, ಕೇಂದ್ರ ಅಬಕಾರಿ ಇಲಾಖೆ ಮತ್ತು ಆಹಾರ ಭದ್ರತೆ ಇಲಾಖೆಯ ಅಪರಿಚಿತ ಅಧಿಕಾರಿಗಳ ವಿರುದ್ಧ ಈ ವರ್ಷ ಮೇ ತಿಂಗಳಲ್ಲಿ ಎಫ್ಐಆರ್‌ ದಾಖಲಿಸಿತ್ತು. 

ಇಂದು ಹೆಚ್ಚು ಓದಿದ್ದು

ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ ಮಾತನಾಡಿದರು.

Nov 19, 2018 12:42pm

ಬೆಳಗಾವಿ: ಹಿಂಡಲಗಾ ಜೈಲಿನಲ್ಲಿ ಕೈದಿಗಳು ಸಮವಸ್ತ್ರ ತಯಾರಿಸುವ ಕೇಂದ್ರ.

Nov 19, 2018 05:29pm

ಧಾರವಾಡ: ಕೃಷಿ ವಿವಿಯ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ರವಿವಾರ ಹಮ್ಮಿಕೊಂಡಿದ್ದ ಶರೀಫರು ಮತ್ತು ಗೋವಿಂದ ಭಟ್ಟರ ತತ್ವಪದಗಳ ಆಧಾರಿತ 'ತತ್ವ ರಸಾಯನ' ಸಂಗೀತ-ನೃತ್ಯ ಕಾರ್ಯಕ್ರಮವನ್ನು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಉದ್ಘಾಟಿಸಿದರು.

Nov 19, 2018 05:11pm

Trending videos

Back to Top