CONNECT WITH US  

ಮೀರಾ-ಭಾಯಂದರ್‌ ಯುವ ಬ್ರಿಗೇಡ್‌: ಶ್ರೀಕೃಷ್ಣ ಜನ್ಮಾಷ್ಟಮಿ 

ಮುಂಬಯಿ: ಮೀರಾರೋಡ್‌ ಪೂರ್ವದ ಮಹಾರಾಜ ಬ್ಯಾಂಕ್ವೆಟ್‌ ಸಭಾಗೃಹ ದಲ್ಲಿ ಸೆ. 2 ರಂದು ಬೆಳಗ್ಗೆಯಿಂದ ಸಂಜೆಯವರೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಯುವ ಬ್ರಿಗೇಡ್‌ ಮೀರಾ-ಭಾಯಂದರ್‌ ಆಶ್ರಯದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಮಕ್ಕಳಿಗೆ ಮುದ್ದು ಕೃಷ್ಣ ಸ್ಪರ್ಧೆ, ಮುದ್ದು ರಾಧೆ ಸ್ಪರ್ಧೆ ಹಾಗೂ ಶಾಸ್ತ್ರೀಯ ನೃತ್ಯ ಸ್ಪರ್ಧೆಯು ಅದ್ದೂರಿಯಾಗಿ ನೆರವೇರಿತು. ಈ ಕಾರ್ಯಕ್ರಮವನ್ನು ಬೆಳಗ್ಗೆ ಸಾಣೂರು ಸಾಂತಿಂಜ ಜನಾರ್ಧನ ಭಟ್‌ ಹಾಗೂ ಮೀರಾರೋಡ್‌ ಪಲಿಮಾರು ಮಠದ ರಾಧಾಕೃಷ್ಣ ಭಟ್‌ ಅವರು ದೀಪಪ್ರಜ್ವಲಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಯುವ ಬ್ರಿಗೇಡ್‌ನ‌ ಅಧ್ಯಕ್ಷ ಅರುಣ್‌ ಶೆಟ್ಟಿ ಪಣಿಯೂರು, ಸಂಚಾಲಕ ರಾಜೇಶ್‌ ಶೆಟ್ಟಿ ಕಾಪುಕಲ್ಯಾ, ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿದ್ದ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿಗುತ್ತು, ಮುಖ್ಯ ಅತಿಥಿ ಹರೀಶ್‌ ನಾಯರ್‌, ಶಿವರಾಮ ಶೆಟ್ಟಿ, ದಿವಾಕರ ಶೆಟ್ಟಿ ಪೊಸ್ರಾಲ್‌, ರವೀಂದ್ರ ಶೆಟ್ಟಿ ಕೊಟ್ರಪಾಡಿ, ರವಿ ಶೆಟ್ಟಿ ದೇರಳಕಟ್ಟೆ, ಸಂಪತ್‌ ಶೆಟ್ಟಿ  ಪಂಜದಗುತ್ತು, ಜಯಪ್ರಕಾಶ್‌ ಶೆಟ್ಟಿ ಹಾಗೂ ಸಂಘದ ಸದಸ್ಯರುಗಳಾದ ಜಗದೀಶ್‌ ಶೆಟ್ಟಿ ಪಂಜಿನಡ್ಕ, ಸಾಯಿ ಪೂಂಜಾ, ಸಂತೋಷ್‌ ಶೆಟ್ಟಿ, ಗೀತಾ ಶೆಟ್ಟಿ, ಮಲ್ಲಿಕಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು.

ಮುದ್ದು ಕೃಷ್ಣ ಸ್ಪರ್ಧೆಯ 1-2 ವರ್ಷ ವಯೋಮಿತಿಯೊಳಗಿನ ವಿಭಾಗದಲ್ಲಿ ಆದ್ಯ ಶೆಟ್ಟಿ ಪ್ರಥಮ, ಜಿನಿತ್‌ ಶೆಟ್ಟಿ ದ್ವಿತೀಯ, ಐಸ್ನಾಯ ಶೆಟ್ಟಿ ತೃತೀಯ, ಮುದ್ದುಕೃಷ್ಣ 2 ರಿಂದ 6 ವರ್ಷದೊಳಗಿನ ಮಕ್ಕಳ ವಿಭಾಗದಲ್ಲಿ ಆರ್ವಿ ಶೆಟ್ಟಿ ಪ್ರಥಮ, ದೃಥಿ ಶೆಟ್ಟಿ ದ್ವಿತೀಯ, ರಿದ್ದಿ ಶೆಟ್ಟಿ ತೃತೀಯ, ಮುದ್ದು ಕೃಷ್ಣ 6 ರಿಂದ 11 ವರ್ಷದೊಳಗಿನವರ ವಿಭಾಗದಲ್ಲಿ ಮಾನ್ವಿತಾ ಪೂಜಾರಿ ಪ್ರಥಮ, ಶ್ಲೋಕಾ ಸಾಲ್ಯಾನ್‌ ದ್ವಿತೀಯ, ಧನ್ಯಾ ಶೆಟ್ಟಿ ತೃತೀಯ ಬಹುಮಾನ ಪಡೆದರು. 

ಮುದ್ದು ರಾಧೆ ಸ್ಪರ್ಧೆಯ 4-11 ವರ್ಷದೊಳಗಿನ ವಿಭಾಗದಲ್ಲಿ ಕೈಸಾ ಶೆಟ್ಟಿ ಪ್ರಥಮ, ಸಾನ್ವಿ ಶೆಟ್ಟಿ ದ್ವಿತೀಯ, ಗ್ರಿಷ್ಮಾ  ಕುಂದರ್‌ ತೃತೀಯ ಬಹುಮಾನ ಪಡೆದರು.ಪ್ರತಿ ವಿಭಾಗದಲ್ಲೂ ಪ್ರಥಮ ತಲಾ 3500 ರೂ., ದ್ವಿತೀಯ 2500 ರೂ. ಹಾಗೂ ತೃತೀಯ 1500 ರೂ. ನಗದು ಬಹುಮಾನವನ್ನು ನೀಡಲಾಯಿತು.  ಶಾಸ್ತ್ರೀಯ ನೃತ್ಯ ಸ್ಪರ್ಧೆಯಲ್ಲಿ ಅಮಿತಾ ಕಲಾ ಮಂದಿರ ಮೀರಾರೋಡ್‌ ಪ್ರಥಮ ಹಾಗೂ ರಾಧಾಕೃಷ್ಣ ನೃತ್ಯ ಅಕಾಡೆಮಿ ದ್ವಿತೀಯ ಬಹುಮಾನಕ್ಕೆ ಪಾತ್ರವಾಯಿತು. ವಿಜೇತ ಸ್ಪರ್ಧಿಗಳಿಗೆ ಗಣ್ಯರು ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನಿಸಿ ಗೌರವಿಸಿ ಶುಭಹಾರೈಸಿದರು.


Trending videos

Back to Top