CONNECT WITH US  

ಶ್ರೀನಿವಾಸ ಜೋಕಟ್ಟೆ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ

ಮುಂಬಯಿ: ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು 2012ನೇ ಸಾಲಿನ ವರ್ಷದ ಹದಿನೇಳು ಪ್ರಕಾರದ ಅತ್ಯುತ್ತಮ  ಕೃತಿಗಳನ್ನು ಪುಸ್ತಕ ಬಹುಮಾನಕ್ಕೆ ಆಯ್ಕೆ ಮಾಡಿದೆ.

ಕಳೆದ ಶನಿವಾರ ಬೆಂಗಳೂರಿನಲ್ಲಿ ಜರಗಿದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ| ಮಾಲತಿ ಪಟ್ಟಣ ಶೆಟ್ಟಿ ಕೃತಿಗಳನ್ನು ಮತ್ತು ಅಕಾಡೆಮಿಯ ಗೌರವ ಪ್ರಶಸ್ತಿಗಳನ್ನು ಪ್ರಕಟಿಸಿದರು.

2012ನೇ ಸಾಲಿನ ಅತ್ಯುತ್ತಮ ಕೃತಿಗಳಲ್ಲಿ ಮುಂಬಯಿ ಸಾಹಿತಿ, ಪತ್ರಕರ್ತ  ಶ್ರೀನಿವಾಸ  ಜೋಕಟ್ಟೆ ಅವರ ಮಾವೋವಾದಿಗಳ ಹಿಂದೂ ರಾಷ್ಟ್ರ ನೇಪಾಲ ಕೃತಿಯು ಪ್ರವಾಸ ಸಾಹಿತ್ಯ ವಿಭಾಗದಲ್ಲಿ ಆಯ್ಕೆಗೊಂಡಿದೆ.
ಕರ್ನಾಟಕ ಮಲ್ಲ ದೈನಿಕದಲ್ಲಿ ಉಪ ಸಂಪಾದಕರಾಗಿ, ಕರ್ನಾಟಕ ಸಂಘ ಮುಂಬಯಿ ಇದರ ಮುಖವಾಣಿ ಸ್ನೇಹ ಸಂಬಂಧ ಮಾಸಿಕದ ಸಂಪಾದಕರಾಗಿರುವ ಶ್ರೀನಿವಾಸ ಜೋಕಟ್ಟೆ ಅವರು ಈಗಾಗಲೇ ಇಪ್ಪತ್ತೆರಡು ಕೃತಿಗಳನ್ನು ಪ್ರಕಟಿಸಿದ್ದಾರೆ.
2000 ಮತ್ತು 2011ರಲ್ಲಿ ಹೀಗೆ ಒಂದು ದಶಕದಲ್ಲಿ ಎರಡು ಬಾರಿ ನೇಪಾಲಕ್ಕೆ ಪ್ರವಾಸ ಮಾಡಿ ಬಂದಿರುವ ಶ್ರೀನಿವಾಸ ಜೋಕಟ್ಟೆ ಅವರ ಈ ಕೃತಿಯನ್ನು ಬೆಂಗಳೂರಿನ ಶ್ರೀನಿವಾಸ ಪುಸ್ತಕ ಪ್ರಕಾಶನದವರು ಪ್ರಕಟಿಸಿದ್ದಾರೆ. 

ಇತರ ಪ್ರಶಸ್ತಿಗಳು
ಈಗಾಗಲೇ ತನ್ನ ಕೃತಿಗಳಿಗೆ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ, ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ, ಸಾಹಿತ್ಯ ಸೇತು ಪ್ರಶಸ್ತಿ, ಕಾಸರಗೋಡು ಸಾಂಸ್ಕೃತಿಕ ಪ್ರತಿಷ್ಠಾನದ ಸಾಹಿತ್ಯ ಪ್ರಶಸ್ತಿ ಇತ್ಯಾದಿಗಳನ್ನು ಪಡೆದಿರುವ ಜೋಕಟ್ಟೆ ಅವರು "ಹೂಗಾರ ಸ್ಮಾರಕ ಮಾಧ್ಯಮ ಪ್ರಶಸ್ತಿ'ಯ ಸಹಿತ ಹಲವು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ.

Trending videos

Back to Top