CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ತಾಳಿಪಾಡಿಗುತ್ತು ಫ್ಯಾಮಿಲಿ ವೆಲ್ಫೇರ್‌ ಟ್ರಸ್ಟ್‌ ರಜತ ವಾರ್ಷಿಕ ಮಹಾಸಭ

ಮುಂಬಯಿ: ತಾಳಿಪಾಡಿಗುತ್ತು ಫ್ಯಾಮಿಲಿ ವೆಲ್ಫೇರ್‌ ಟ್ರಸ್ಟ್‌ ಇದರ ರಜತ ವಾರ್ಷಿಕ ಮಹಾಸಭೆ ಹಾಗೂ ವಾರ್ಷಿಕ ಸ್ನೇಹ ಸಮ್ಮಿಲನ ಸಂಭ್ರಮವು ಫೆ. 19ರಂದು ಪೂರ್ವಾಹ್ನ 9ರಿಂದ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಟಾರಿ ಆಡಿಟೋರಿಯಂನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ನಿಟ್ಟೆ ಯುನಿವರ್ಸಿಟಿಯ ಚಾನ್ಸಲರ್‌, ಲೆಮಿನಾ ಗ್ರೂಪ್‌ ಆಫ್‌ ಕಂಪೆನೀಸ್‌ ಇದರ ಆಡಳಿತ ನಿರ್ದೇಶಕ ಎನ್‌. ವಿನಯ್‌ ಹೆಗ್ಡೆ ಅವರು ಆಗಮಿಸಲಿದ್ದಾರೆ. ಗೌರವ ಅತಿಥಿಗಳಾಗಿ ಬೊರಿವಲಿ ಸಂಸದ ಗೋಪಾಲ್‌ ಶೆಟ್ಟಿ, ಪ್ರಸಿದ್ಧ ವೈದ್ಯ ಡಾ| ಸದಾನಂದ ವಿ. ಶೆಟ್ಟಿ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್‌. ಶೆಟ್ಟಿ, ಬಂಟ್ಸ್‌ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ನ್ಯಾಯವಾದಿ ಯು. ಶೇಖರ್‌ ಶೆಟ್ಟಿ ಅವರು ಆಗಮಿಸಲಿದ್ದಾರೆ.
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈದ ಸಂಸ್ಥೆಯ ಆಡಳಿತ ಟ್ರಸ್ಟಿ ಬಿ. ಆರ್‌. ಶೆಟ್ಟಿ, ಇಂಟರ್‌ನ್ಯಾಷನಲ್‌ ಫುಟ್ಬಾಲ್‌ ಆಟಗಾರ, ಉಪಾಧ್ಯಕ್ಷ ಸುಧಾಕರ ಎಸ್‌. ಶೆಟ್ಟಿ, ಮುಂಬಯಿ ಅಧ್ಯಕ್ಷೆ ಶೋಭಾ ಎಸ್‌. ಶೆಟ್ಟಿ, ಚಲನಚಿತ್ರ ನಿರ್ದೇಶಕ ವಿಪುಲ್‌ ಶಾ, ರಾಷ್ಟ್ರೀಯ ಪ್ರಶಸ್ತಿ ವಿಜೇತೆ, ಚಲನಚಿತ್ರ ನಟಿ ಶೇಫಾಲಿ ವಿಪುಲ್‌ ಶಾ, ಸಮಾಜ ಸೇವಕ, ರಾಜ್ಯಪ್ರಶಸ್ತಿ ಪುರಸ್ಕೃತ ವಿಶ್ವನಾಥ ಶೆಟ್ಟಿ, ಪ್ರಸಿದ್ಧ ವೈದ್ಯ ಡಾ| ವಿಜಯ ಡಿ. ಶೆಟ್ಟಿ, ಡಾ| ಸುರೇಶ್‌ ಶೆಟ್ಟಿ, 2016ನೇ ಸಾಲಿನ ಸುಪ್ರ ನ್ಯಾಷನಲ್‌ ಅವಾರ್ಡ್‌ ವಿನ್ನರ್‌ ಶ್ರೀನಿಧಿ ಆರ್‌. ಶೆಟ್ಟಿ, ಅಥ್ಲೆಟಿಕ್‌ ಪಟು ಸುಚರಿತಾ ಯು. ಶೆಟ್ಟಿ ಕರೇಲಿಯಾ, ಮಾಡೆಲ್‌, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತೆ ಅದಿತಿ ಶೆಟ್ಟಿ, ರಾಜ್ಯ, ಅಂತರಾಷ್ಟ್ರೀಯ ಫುಟ್ಬಾಲ್‌ಪಟು ಅಶ್ವಿ‌ತಾ ಶೆಟ್ಟಿ, ಪ್ರಸಿದ್ಧ ವೈದ್ಯ ವಿದ್ಯಾದಾಯಿನಿ ಆರ್‌. ಶೆಟ್ಟಿ, ರಾಜ್ಯ ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತ ಲಯನ್‌ ಡಾ| ರೋಶನ್‌ ಕುಮಾರ್‌ ಶೆಟ್ಟಿ, ಪ್ರಸಿದ್ಧ ರೇಡಿಯೋಲಾಜಿಸ್ಟ್‌ ಡಾ| ಸಚಿನ್‌ ಕುಮಾರ್‌ ಶೆಟ್ಟಿ, ಭರತನಾಟ್ಯ ಪ್ರವೀಣೆ, ರಾಜ್ಯ ಪ್ರಶಸ್ತಿ ವಿಜೇತೆ ಶ್ರೀಶಾ ಪಿ. ಶೆಟ್ಟಿ, ಕುಟುಂಬದ ಸಮನ್ವಯಕರಾದ ವನಜಾ ಕರುಣಾಕರ ಶೆಟ್ಟಿ ಮತ್ತು ವಾಸಂತಿ ರಾಮ ಶೆಟ್ಟಿ, ಮಾಜಿ ಅಧ್ಯಕ್ಷರಾದ  ರಘುರಾಮ ಪಿ. ಶೆಟ್ಟಿ, ಚಂದ್ರಹಾಸ್‌ ಶೆಟ್ಟಿ, ರತ್ನಾಕರ ಎಸ್‌. ಶೆಟ್ಟಿ, ವಾಸು ಕೆ. ಶೆಟ್ಟಿ, ಗೌರವ ಕಾರ್ಯದರ್ಶಿ ಟಿ. ವಿಶ್ವನಾಥ ಶೆಟ್ಟಿ, ಗೌರವ ಕೋಶಾಧಿಕಾರಿ ವಿಜಯಕುಮಾರ್‌ ಎಸ್‌. ಶೆಟ್ಟಿ ಅವರನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಗುವುದು.

ಪೂರ್ವಾಹ್ನ 9ರಿಂದ 9.30ರವರೆಗೆ ಉಪಾಹಾರ ಹಾಗೂ ಕುಟುಂಬದ ಸದಸ್ಯ ಬಾಂಧವರ ದಾಖಲೀಕರಣ, ಪೂರ್ವಾಹ್ನ 9.30 ರಿಂದ ರಜದ ಮಹೋತ್ಸವ ವಾರ್ಷಿಕ ಮಹಾಸಭೆ, ಪೂರ್ವಾಹ್ನ 10.30ರಿಂದ ಅಶೋಕ್‌ ಕುಮಾರ್‌ ಕೊಡ್ಯಡ್ಕ ಅವರ ನೇತೃತ್ವದತಲ್ಲಿ ತುಳುನಾಡ ವೈಭವ ಸಾಂಸ್ಕೃತಿಕ ವೈಭವ, ಮಧ್ಯಾಹ್ನ 12ರಿಂದ 
ರಜತ ಸಂಭ್ರಮ ಸಮಾರಂಭವನ್ನು ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ಸಂಸ್ಥೆಯ ಫ್ಯಾಮಿಲಿ  ಡೈರೆಕ್ಟರಿಯ ನಾಲ್ಕನೇ ಆವೃತ್ತಿಯನ್ನು ಬಿಡುಗಡೆಗೊಳಿಸಲಾಗುವುದು.

ತಾಳಿಪಾಡಿಗುತ್ತುವಿನ ಹಿನ್ನೆಲೆ ತಾಳಿಪಾಡಿಗುತ್ತು ಮೂಲ್ಕಿ ಸೀಮೆ, ಸಾಮಂತ ಅರಸರ ಮಿತ್ರತ್ವದಲ್ಲಿದ್ದ ಬಹುದೊಡ್ಡ ಗುತ್ತು. ಜೈನ ಮನೆತನದೊಂದಿಗೆ ಉತ್ತಮ ಮಿತ್ರತ್ವ, ಸಾಮರಸ್ಯ ಬೆಳೆಸಿಕೊಂಡಿದ್ದ ಕಾರಣ ಎಲ್ಲಾ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಗಳಿಗೆ ಇಲ್ಲಿ ವಿಶೇಷ ಆಸ್ಪದ ಒದಗಿಸಲಾಯಿತು. ಈ ಎಲ್ಲಾ ಕಾರ್ಯಗಳ ಹಿಂದೆ ಹಿರಿಯರಾದ ದಿ| ಶಂಭು ಶೆಟ್ಟಿ, ದಿ| ಟಿ. ಮುದ್ದು ಶೆಟ್ಟಿ, ದಿ| ಟಿ. ಆರ್‌. ಶೆಟ್ಟಿ ಹಾಗೂ ದಿ| ರಾಜೀವ ಆಳ್ವ ಅವರ ಸೇವೆ ಸ್ಮರಣೀಯವಾಗಿದೆ. ಗುತ್ತು ಪರಿಸರದಲ್ಲಿ ಸಾರ್ವಜನಿಕ ಬಸ್ಸು ತಂಗುದಾಣವನ್ನು, ಗುತ್ತು ವಠಾರದಲ್ಲಿ ಉಚಿತ ವೈದ್ಯಕೀಯ ಪ್ರಾಥಮಿಕ ಚಿಕಿತ್ಸೆ, ದಂತ ಚಿಕಿತ್ಸಾಲಯವನ್ನು ತೆರೆಯಲಾಗಿದೆ. ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಗಳು ಒಂದೇ ವೇದಿಕೆಯಲ್ಲಿ ನಡೆಯಬೇಕು ಎನ್ನುವ ಉದ್ಧೇಶದಿಂದ ತಾಳಿಪಾಡಿಗುತ್ತು  ಜೀರ್ಣೋದ್ಧಾರ ಸಮಿತಿ, ತಾಳಿಪಾಡಿಗುತ್ತು ಜನಕಲ್ಯಾಣ ಸಮಿತಿ ಸಂಯುಕ್ತ ಆಶ್ರಯದಲ್ಲಿ ವೇದಿಕೆಯೊಂದು ನಿರ್ಮಾಣವಾಗಿದೆ. ದೇಶ-ವಿದೇಶಗಳಲ್ಲಿ ಹರಡಿರುವ ಕುಟುಂಬ ಸದಸ್ಯರ ಪರಸ್ಪರ ಪರಿಚಯ ಹಾಗೂ ಕೌಟುಂಬಿಕ ಸಮಸ್ಯೆಗಳ ನಿವಾರಣೆಗಾಗಿ ಸೌಹಾರ್ದ ಕೂಟ, ಫ್ಯಾಮಿಲಿ ಡೈರೆಕ್ಟರಿ ಆರಂಭಿಸುವ ಯೋಜನೆಯನ್ನು ಸಂಸ್ಥೆಯು ಹಮ್ಮಿಕೊಂಡಿದೆ.

ತಾಳಿಪಾಡಿಗುತ್ತು ಫ್ಯಾಮಿಲಿ ವೆಲ್ಫೆàರ್‌ ಟ್ರಸ್ಟ್‌ ಗುತ್ತು ಕುಟುಂಬಿಕರ ಒಡೆತನಕ್ಕೆ ಸೇರಿದ ಹಲವಾರು ಎಕರೆ ಜಮೀನನ್ನು ಆಸುಪಾಸಿನವರು ಅತಿಕ್ರಮಿಸುವುದನ್ನು ತಡೆಹಿಡಿಯಲು ಅಧಿಕೃತ ಸರಕಾರಿ ನಿಯಮಬದ್ಧವಾದ ಸಂಸ್ಥೆಯೊಂದರ ಅಗತ್ಯವನ್ನು ಮನಗಂಡು 2006, ಎಪ್ರಿಲ್‌ 28ರಂದು ಬಹುತೇಕ ಕುಟುಂಬದ ಸದಸ್ಯರ ಸಲಹೆಯಂತೆ ತಾಳಿಪಾಡಿಗುತ್ತು ಫ್ಯಾಮಿಲಿ ವೆಲ್ಫೆàರ್‌ ಟ್ರಸ್ಟ್‌ ಎಂಬ ಕಾರ್ಯನಿರ್ವಾಹಕ ಸಂಸ್ಥೆಯೊಂದನ್ನು ಸ್ಥಾಪಿಸಲಾಗಿದೆ. ಈ ಸಂಸ್ಥೆಯ ಮೂಲಕ ಗುತ್ತು ಕುಟುಂಬಿಕರ ಬಹುತೇಕ ಜಮೀನುಗಳನ್ನು ಸರಕಾರಿ ಮಾಪಕರ ಸಹಾಯದಿಂದ ಜಮೀನುಗಳ ಗಡಿಯುದ್ದಕ್ಕೂ ಅಲ್ಲಲ್ಲಿ ಕಲ್ಲಿನ ಕಂಬಗಳನ್ನು ನೆಟ್ಟು ಗುರುತಿಸಲಾಗಿದೆ. ಮುಂದೆ ಈ ದೃಷ್ಟಿಯಲ್ಲಿ ಹಲವಾರು ಭಗೀರಥ ಯತ್ನಗಳು ಮುಂದುವರಿಯಬೇಕಾಗಿದೆ. ಈ ಸದುದ್ದೇಶಪೂರಿತ ಪ್ರಯತ್ನಕ್ಕೆ ಕುಟುಂಬದ ಸದಸ್ಯರ ಪ್ರಾಮಾಣಿಕ ಸಹಕಾರದ ಅಗತ್ಯವಿದೆ. 

ಇನ್ನೊಂದು ಅಗತ್ಯ ಯೋಜನೆ ಕಾರ್ಯರೂಪಕ್ಕೆ ಬರಬೇಕಾಗಿದೆ. ತಾಳಿಪಾಡಿಗುತ್ತು ಜೀರ್ಣೋದ್ಧಾರ ಸಮಿತಿ ಹಾಗೂ ಜನಕಲ್ಯಾಣ್‌ ಸಮಿತಿ ಜಂಟಿ ಆಶ್ರಯದಲ್ಲಿ ಆರ್ಥಿಕವಾಗಿ ಮುಗ್ಗರಿಸುವ  ವಯೋವೃದ್ಧರಿಗೆ ಹಾಗೂ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡುವ ಯೋಜನೆಯೊಂದನ್ನು ಹಾಕಿಕೊಳ್ಳಲಾಗಿದೆ. ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಶ್ರಮಿಸಿದ ಹಿರಿಯರಾದ ದಿ| ಹಿರಿಯಣ್ಣ ಶೆಟ್ಟಿ ಪುಣೆ ಅವರ ನಿಧನದಿಂದ ತುಂಬಲಾರದ ನಷ್ಟ ಉಂಟಾಗಿದ್ದು, ಅವರ ಸ್ಮೃತಿ ನೆನಪಿಗಾಗಿ ಈ ಯೋಜನೆಯ ಕನಸನ್ನು ನನಸಾಗಿಸುವಲ್ಲಿ ಸದಸ್ಯ ಬಾಂಧವರು ಸಕ್ರಿಯರಾಗಬೇಕಾಗಿದೆ. ತಾಳಿಪಾಡಿಗುತ್ತು ವೆಲ್ಫೆàರ್‌ ಟ್ರಸ್ಟ್‌  ತಾಳಿಪಾಡಿಗುತ್ತುಕಾಡಿನಲ್ಲಿರುವ ಶಾಲೆಯ ಕಟ್ಟಡದಲ್ಲಿ ಒಂದು ಕ್ಲಾಸ್‌ರೂಮ್‌ಗೆ 30 ಸಾವಿರ ರೂ. ದೇಣಿಗೆ ನೀಡಿ ಶಿಕ್ಷಣಕ್ಕೆ ಸಹಕರಿಸಿದೆ. ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ 5 ಲಕ್ಷ ರೂ., ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ 1 ಲಕ್ಷ ರೂ. ಹಾಗೂ ಶಿಮಂತೂರು ಶ್ರೀ ಆದಿಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ 3 ಲಕ್ಷ ರೂ. ದೇಣಿಗೆಯನ್ನು ತೆಂಗಾಳಿ ಕುಟುಂಬದವರು ಕೂಡಿ ನೀಡಿದ್ದಾರೆ.

ಮೆಡಿಕಲ್‌ ಸೆಂಟರ್‌ನ ಕಟ್ಟಡ ವಿಸ್ತರಣೆ ಮಾಡುವಾಗ 5 ಲಕ್ಷ ರೂ. ಗಳನ್ನು ಕೆ. ಎಸ್‌. ಹೆಗ್ಡೆ ಮೆಡಿಕಲ್‌ ಸೆಂಟರ್‌ನಲ್ಲಿದ್ದ ಠೇವಣೆಯ ಹಣವನ್ನು ಹಿಂಪಡೆಯಲಾಗಿದೆ. ಅಲ್ಲದೆ ಆ ಕಾರ್ಯಕ್ಕೆ ತಾಳಿಪಾಡಿಗುತ್ತು ಹೊಸಮನೆಯ ಚಂದ್ರಹಾಸ ಶೆಟ್ಟಿ ಮತ್ತು ಕುಟುಂಬಿಕರು ಹಾಗೂ ಆಲ್‌ ಕಾರ್ಗೋದ ಶಶಿಕಿರಣ್‌ ಶೆಟ್ಟಿ ಅವರ ಆರ್ಥಿಕ ನೆರವು ನೀಡಿ ಸಹಕರಿಸಿದ್ದಾರೆ. ಮೆಡಿಕಲ್‌ ಸೆಂಟರ್‌ನ ಕಂಪೌಂಡ್‌ ಗೋಡೆಯನ್ನು ಹಾಗೂ ಮುಂದೆ ಇರುವ ಸ್ಥಳವನ್ನು ಸಮತಟ್ಟು ಮಾಡುವ ಕಾರ್ಯವನ್ನು ಬ್ರಹ್ಮಾನಂದ ಶೆಟ್ಟಿ ಅವರು ತಮ್ಮ ತಂದೆ ದಿ| ಮುದ್ದು ಶೆಟ್ಟಿ ಸ್ಮರಣಾರ್ಥಕವಾಗಿ ಮಾಡಿದ್ದಾರೆ. ತಾಳಿಪಾಡಿಗುತ್ತುವಿನ ನಾಗಬನ ಮತ್ತು ಜಾರಂದಾಯ ಧೂಮಾವತಿ ಕೋಲದ ಜಾಗದಲ್ಲಿ ತಾಳಿಪಾಡಿಗುತ್ತು ಪಾದೆಮನೆಯ ಮಾಲತಿ ಸಿ. ಶೆಟ್ಟಿ ಅವರಿಗೆ  ಪೈಂಟ್‌ ಮಾಡಿಸಿ ಸಹಕರಿಸಿದ್ದಾರೆ. ಕೋರ್ದಬ್ಬು ದೈವಸ್ಥಾನದ ಕಂಪೌಂಡ್‌ ಗೋಡೆಯನ್ನು ಮತ್ತು ಜಾರಂದಾಯ ಧೂಮಾವತಿ ಕೋಲದ ಅಂಗಣಕ್ಕೆ ಇಂಟರ್‌ಲಾಕ್‌ನ್ನು ದಿ| ಟಿ. ಆರ್‌. ಶೆಟ್ಟಿ ಅವರು ಮಾಡಿ ಸಹಕರಿಸಿದ್ದಾರೆ. ಒಟ್ಟಿನಲ್ಲಿ ಟ್ರಸ್ಟ್‌ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕವಾಗಿ ಉತ್ತಮ ಸಾಧನೆಗಳನ್ನು ಮಾಡುತ್ತಿದ್ದು, ಸೇವಾ ಸಂಸ್ಥೆಯ ಮನೋಭಾವ, ಒಗ್ಗಟ್ಟು, ಔದಾರ್ಯ ನಾಡಿನ ಉದ್ದಗಲ್ಲಕ್ಕೂ ಪಸರಿಸಿ ಇತರ ಕುಟುಂಬಿಕರಿಗೆ ಮಾದರಿಯಾಗಿ ನಿಲ್ಲುವಲ್ಲಿ ಯಶಸ್ವಿಯಾಗಿದೆ.

ಸಂಸ್ಥೆಯ ಆಡಳಿತ ಟ್ರಸ್ಟಿ ಬಿ. ರಘುರಾಮ್‌ ಶೆಟ್ಟಿ, ಟ್ರಸ್ಟಿಗಳಾದ ರಘುರಾಮ ಪಿ. ಶೆಟ್ಟಿ ಪುಣೆ, ಸುಧಾಕರ ಎಸ್‌. ಶೆಟ್ಟಿ, ಚಂದ್ರಹಾಸ ಶೆಟ್ಟಿ, ಬ್ರಹ್ಮಾನಂದ ಎಂ. ಶೆಟ್ಟಿ, ಮಾಜಿ ಅಧ್ಯಕ್ಷರಾದ ಬಿ. ರಘುರಾಮ ಶೆಟ್ಟಿ, ರಘುರಾಮ ಶೆಟ್ಟಿ ಪುಣೆ, ಚಂದ್ರಹಾಸ ಶೆಟ್ಟಿ, ರತ್ನಾಕರ ಎಸ್‌. ಶೆಟ್ಟಿ, ವಾಸು ಕೆ. ಶೆಟ್ಟಿ, ಆಡಳಿತ ಸಮಿತಿಯ ಅಧ್ಯಕ್ಷೆ ಶೋಭಾ ಎಸ್‌. ಶೆಟ್ಟಿ, ಉಪಾಧ್ಯಕ್ಷರಾದ  ಸುಧಾಕರ ಎಸ್‌. ಶೆಟ್ಟಿ,  ಹರೀಶ್‌ ಶೆಟ್ಟಿ, ಭಾಸ್ಕರ ಎಂ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಟಿ. ವಿಶ್ವನಾಥ ಶೆಟ್ಟಿ, ಜತೆ ಕಾರ್ಯದರ್ಶಿಗಳಾದ ಸುರೇಶ್‌ ಅಜಿಲ, ಧನ್‌ಪಾಲ್‌ ಬಿ. ಶೆಟ್ಟಿ, ಕೋಶಾಧಿಕಾರಿ ವಿಜಯಕುಮಾರ್‌ ಎಸ್‌. ಶೆಟ್ಟಿ, ಜತೆ ಕೋಶಾಧಿಕಾರಿ ಸುಕುಮಾರ್‌ ನೈಕ್‌, ಎಕ್ಸ್‌ ಅಫೀಶಿಯೋ ವಾಸು ಕೆ. ಶೆಟ್ಟಿ ಹಾಗೂ ಕುಟುಂಬದ ಸದಸ್ಯ ಬಾಂಧವರ ಉಪಸ್ಥಿತಿಯಲ್ಲಿ ಸಮಾರಂಭವು ಜರಗಲಿದ್ದು, ಸದಸ್ಯ ಬಾಂಧವರು ಪಾಲ್ಗೊಂಡು ಸಹಕರಿಸುವಂತೆ ಪ್ರಕಟನೆ ತಿಳಿಸಿದೆ.

ಇಂದು ಹೆಚ್ಚು ಓದಿದ್ದು

Back to Top