ಕಾರ್ಕಳದ ಶಾಸಕ ಸುನಿಲ್‌  ಕುಮಾರ್‌ ಪುಣೆ ಸ್ನೇಹಮಿಲನ -2017


Team Udayavani, Mar 7, 2017, 5:23 PM IST

06-Mum09.jpg

ಪುಣೆ: ಶ್ರೇಷ್ಠ  ಇತಿಹಾಸವನ್ನು ಹೊಂದಿದ, ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಮೈದುಂಬಿಕೊಂಡ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಪ್ರಸಿದ್ಧಿಯನ್ನು ಪಡೆದ ಧಾರ್ಮಿಕವಾಗಿ ಜಗತ್ತಿನಲ್ಲಿಯೇ ಗುರುತಿಸಿಕೊಂಡ, ಅನನ್ಯ ಸಾಧಕರುಗಳ ಸಾಧನೆಯೊಂದಿಗೆ ಕೀರ್ತಿ ಪಡೆದುಕೊಂಡ ಕ್ಷೇತ್ರವೊಂದಿದ್ದರೆ  ಅದು ನಮ್ಮ ಕಾರ್ಕಳ ಕ್ಷೇತ್ರವಾಗಿದೆ. ಇಂತಹ ಕ್ಷೇತ್ರದ ಶಾಸಕ ನಾಗಿದ್ದುಕೊಂಡು ಕ್ಷೇತ್ರದ ಜನರನ್ನು ನಿರಂತರವಾಗಿ ಸಂಪರ್ಕಿಸುತ್ತಾ   ರಸ್ತೆ, ನೀರು, ಶಿಕ್ಷಣ, ಆರೋಗ್ಯ ಗಳೆಲ್ಲದರ ಪ್ರಾಥಮಿಕ ಅಗತ್ಯಗಳನ್ನು ಪರಿಪೂರ್ಣಗೊಳಿಸುವಲ್ಲಿ, ಭವ್ಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ, ತಮ್ಮ ನಾಡಿನ ಬಗೆಗೆ ಎಲ್ಲರಲ್ಲೂ ಅಭಿಮಾನವನ್ನು ಹೊಂದುವಲ್ಲಿ  ಹೊರನಾಡಿನಲ್ಲಿರುವ ಕಾರ್ಕಳದ ಜನರ ದುಃಖ ದುಮ್ಮಾನಗಳನ್ನು ಆಲಿಸಿ ಅವರೊಂದಿಗೆ ಪ್ರೀತಿಯಿಂದ ಬೆರೆತು ಸಲಹೆ ಸೂಚನೆಗಳನ್ನು ಪಡೆದುಕೊಂಡು ಸಮಗ್ರ ಅಭಿವೃದ್ಧಿಯ ಪರಿಕಲ್ಪನೆಯೊಂದಿಗೆ ಕಾರ್ಕಳವನ್ನು ವಿಶ್ವದಲ್ಲೇ ಗುರುತಿಸುವಂತಹ ಕ್ಷೇತ್ರವನ್ನಾಗಿ ರೂಪಿಸುವಲ್ಲಿ  ಪೂರಕ ಹೆಜ್ಜೆಯೇ ಸ್ನೇಹಮಿಲವಾಗಿದೆ ಎಂದು ಕಾರ್ಕಳದ  ಶಾಸಕ ವಿ. ಸುನಿಲ್‌ ಕುಮಾರ್‌ ಅವರು  ನುಡಿದರು.

ಮಾ. 5ರಂದು ಕೃಷ್ಣ ಸುಂದರ್‌ ಗಾರ್ಡನ್‌ನಲ್ಲಿ ಹಮ್ಮಿಕೊಂಡ ಕಾರ್ಕಳದ ಬಂಧುಗಳ ಸ್ನೇಹಮಿಲನ ಪುಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಾಸಕನಾಗಿದ್ದುಕೊಂಡು ಕ್ಷೇತ್ರದ ಪ್ರತಿಯೊಂದು ಗ್ರಾಮಗಳನ್ನೂ ಸಂಪರ್ಕಿಸಿ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಿ ಆ ಮೂಲಕ ಪ್ರಾಮಾಣಿಕವಾಗಿ ಕಾರ್ಕಳದ ಅಭಿವೃದ್ಧಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಅದೇ ರೀತಿ ಕಾರ್ಕಳ ತಾಲೂಕು ರಚನೆಗೊಂಡು ನೂರು ವರ್ಷಗಳು ಆಗುತ್ತಿರುವ ಸಂದರ್ಭ ವರ್ಷವಿಡೀ ನೂರರ ಸಂಭ್ರಮವನ್ನು ಅಭಿವೃದ್ಧಿಯ ವರ್ಷವಾಗಿ ಆಚರಿಸುತ್ತಿದ್ದೇವೆ. ಆದರೂ ಶೇ. 100 ರಷ್ಟು ಅಭಿವೃದ್ಧಿ ಒಮ್ಮೆಲೇ ಸಾಧ್ಯವಿಲ್ಲ. ಭವಿಷ್ಯದಲ್ಲಿ ಯಾವ ರೀತಿಯ ಬದಲಾವಣೆಗಳನ್ನು ತರಬೇಕಾಗಿದೆ, ಯಾವ ರೀತಿಯ ಪ್ರಗತಿಯ ಅಗತ್ಯವಿದೆ ಎಂಬ ಬಗ್ಗೆ ನೀವು ನೀಡಿದ ಸಲಹೆಗಳನ್ನು ತುಂಬು ಹೃದಯದಿಂದ ಸ್ವೀಕರಿಸಿ ಅನುಷ್ಠಾನಗೊಳಿಸುವಲ್ಲಿ ಪ್ರಯತ್ನಿಸಲಾಗುವುದು.  ಊರಿನ ದೈವ, ದೇವಸ್ಥಾನಗಳ ಜೀಣೊìàದ್ಧಾರವೇ ಇರಲಿ, ಬ್ರಹ್ಮಕಲಶವೇ  ಇರಲಿ, ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಯೇ ಆಗಲಿ ಪುಣೆ ಮುಂಬಯಿಯ ಬಂಧುಗಳ ಕೊಡುಗೆಮಹತ್ತರವಾಗಿದೆ. ಅದೇ ರೀತಿ ಕಾರ್ಕಳದ ಅಭಿವೃದ್ಧಿ ಎಂಬ ಬ್ರಹ್ಮಕಲಶಕ್ಕೆ ಎಲ್ಲರೂ ಸಹಕಾರ ನೀಡಿ ಎಂದರು.  

ಇಂದಿನ ಯುವ ಪೀಳಿಗೆಗೆ ನಮ್ಮ ನಾಡಿನ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಲು ಆ ಮೂಲಕ ನಮ್ಮ ಸಾಂಸ್ಕೃತಿಕ, ಸಾಮಾಜಿಕ ಬೆಳವಣಿಗೆಯನ್ನು ಮಾಡಲು ನನ್ನೊಂದಿಗೆ ಕಾರ್ಕಳದ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ. ಕ್ಷೇತ್ರದ ಅಭಿವೃದ್ಧಿ ಕೇವಲ ಶಾಸಕ, ಸರಕಾರದಿಂದ ಮಾತ್ರ ಸಾಧ್ಯವಿಲ್ಲ ಜನರ ಸಹಭಾಗಿತ್ವವೂ ಮುಖ್ಯವಾಗಿದೆ. ಪುಣೆಯಲ್ಲಿ ಇಂದು ನಡೆದ ಈ ಕಾರ್ಯಕ್ರಮವನ್ನು ನಿರೀಕ್ಷೆಗೂ ಮೀರಿ ಯಶಸ್ವಿಗೊಳಿಸುವಲ್ಲಿ ಸಹಕಾರ ನೀಡಿದ ಪುಣೆಯ ಎಲ್ಲ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ, ಉತ್ತಮವಾಗಿ ಸಂಘಟಿಸುವಲ್ಲಿ ನೆರವಾದ ಸಂಘಟಕರಿಗೆ ಹಾಗೂ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಬಂಧುಗಳಿಗೆ ಕೃತಜ್ಞತೆಗಳು.   ಕಾರ್ಕಳವನ್ನು ಮಾದರಿ ಕ್ಷೇತ್ರವಾಗಿ ರೂಪಿಸಲು ಒಟ್ಟಾಗಿ ಶ್ರಮಿಸೋಣ ಎಂದರು.

ಪುಣೆ  ಬಂಟರ ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಅಭಿವೃದ್ಧಿಯ ಒಬ್ಬ ಮಹಾಶಕ್ತಿಯೆಂದರೆ ಅದು ಸುನಿಲ… ಕುಮಾರ್‌. ಅವರ ಶಿಸ್ತುಬದ್ಧತೆ, ಸಾಧನೆ ಎಲ್ಲರಿಗೂ ಪ್ರೇರಣೆಯಾಗಿದೆ. ಪುಣೆಯ ಈ ಸ್ನೇಹಮಿಲನ ಕಾರ್ಕಳದ ಸಮಸ್ಯೆಗಳನ್ನು ಅರಿತು ಕಾರ್ಯಗತ ಮಾಡುವಲ್ಲಿ ಉತ್ತಮ ವೇದಿಕೆಯಾಗಿದೆ. ಒಬ್ಬ ಶಾಸಕರಾಗಿ ನಮ್ಮಲ್ಲಿಗೆ ಸ್ವತಃ ಬಂದು ನಮ್ಮನ್ನು ಭೇಟಿಯಾಗುತ್ತಿರುವುದು ನಮ್ಮ ಪುಣ್ಯ. ನಾವೆಲ್ಲಾ ಅವರ ಕಾರ್ಯಕ್ಕೆ ಸಹಕಾರ ನೀಡೋಣ ಎಂದರು.

ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ಮಣಿರಾಜ್‌ ಶೆಟ್ಟಿ ಮಾತನಾಡಿ,  ಪûಾತೀತ ನಾಯಕನಾಗಿ ಕಾರ್ಕಳದ ಸಂಪೂರ್ಣ ಏಳಿಗೆಯಲ್ಲಿ ತೊಡಗಿಕೊಂಡವರು ಸುನಿಲ್‌ ಕುಮಾರ್‌. ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆ ಯಲ್ಲಿ ಅವರ ಕಾರ್ಯ ಸ್ತುತ್ಯರ್ಹ ಎಂದರು.

ಪುಣೆ ಬಂಟರ ಸಂಘದ ಗೌರವಾಧ್ಯಕ್ಷ ಜಗನ್ನಾಥ ಶೆಟ್ಟಿ ಓಣಿಮಜಲು, ಪುಣೆ ಕನ್ನಡ ಸಂಘದ ಅಧ್ಯಕ್ಷ ಕುಶಲ್‌ ಹೆಗ್ಡೆ, ಕಾಪು ಕ್ಷೇತ್ರದ ಮಾಜಿ ಶಾಸಕ ಲಾಲಾಜಿ  ಮೆಂಡನ್‌, ಪುಣೆ ತುಳುಕೂಟದ ಗೌರವಾಧ್ಯಕ್ಷ ಮಿಯ್ನಾರು ರಾಜ್‌ಕುಮಾರ್‌ ಎಂ. ಶೆಟ್ಟಿ, ಪುಣೆ ಬಂಟ್ಸ್‌ ಅಸೋಸಿಯೇಶನ್‌ ನಿಕಟಪೂರ್ವ ಅಧ್ಯಕ್ಷ ಮಿಯ್ನಾರು ಜಯ ಶೆಟ್ಟಿ, ಪುಣೆ ಬಿಲ್ಲವ ಸಮಾಜ ಸೇವಾ ಸಂಘದ ನಿಕಟಪೂರ್ವ ಅಧ್ಯಕ್ಷ ಸದಾಶಿವ ಸಾಲ್ಯಾನ್‌, ಪುಣೆ ರೆಸ್ಟೋರೆಂಟ್‌ ಹೊಟೇಲಿಯರ್ಸ್‌ ಅಸೋಸಿಯೇಶನ್‌  ಅಧ್ಯಕ್ಷ ಗಣೇಶ್‌  ಶೆಟ್ಟಿ, ಪಿಂಪ್ರಿ ಚಿಂಚಾÌಡ್‌ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ದಿನೇಶ್‌ ಶೆಟ್ಟಿ ಬಜಗೋಳಿ, ಮುಂಬಯಿ  ಉದ್ಯ ಮಿಗಳಾದ  ರತ್ನಾಕರ ಶೆಟ್ಟಿ, ಮಹೇಶ್‌  ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಉಳೆಪಾಡಿ, ತುಳು ಚಲನಚಿತ್ರ ನಿರ್ಮಾಪಕ ಉದಯ ಶೆಟ್ಟಿ ಕಾಂತಾವರ, ಶ್ರೀಧರ ಪೂಜಾರಿ ಲೋನಾವಾಲ, ಪುಣೆ ಕುಲಾಲ ಸುಧಾರಕ ಸಂಘದ ಅಧ್ಯಕ್ಷ ಹರೀಶ್‌ ಕುಲಾಲ್‌, ಪುಣೆ ತುಳುಕೂಟದ  ಪಿಂಪ್ರಿ – ಚಿಂಚಾÌಡ್‌ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಶ್ಯಾಮ್‌  ಸುವರ್ಣ ಉಪಸ್ಥಿತರಿದ್ದರು.

ಜಗನ್ನಾಥ ಶೆಟ್ಟಿ  ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಉಪಸ್ಥಿತರಿದ್ದ ಕಾರ್ಕಳದ ಬಂಧುಗಳು ತಮ್ಮೂರಿನ ಸಮಸ್ಯೆಗಳ ಬಗ್ಗೆ  ಶಾಸಕರಿಗೆ ತಿಳಿಸಿದರು. ರೇಶ್ಮಾ ಉದಯ ಶೆಟ್ಟಿ ಇನ್ನ ಪ್ರಾರ್ಥಿಸಿದರು. ಅತಿಥಿ-ಗಣ್ಯರನ್ನು ಶಾಲು ಮತ್ತು  ಪುಷ್ಪಗುತ್ಛವನ್ನಿತ್ತು ಶಾಸಕ ಸುನಿಲ್‌ ಕುಮಾರ್‌  ಸತ್ಕರಿಸಿದರು. ಕಾರ್ಯಕ್ರಮವನ್ನು ಅರ್ಪಿತಾ ಪ್ರಶಾಂತ್‌ ಶೆಟ್ಟಿ ಕಟಪಾಡಿ ನಿರೂಪಿಸಿದರು. ವಿಶ್ವನಾಥ ಪೂಜಾರಿ ಕಡ್ತಲ ಸ್ವಾಗತಿಸಿದರು. ಸಂತೋಷ್‌ ಶೆಟ್ಟಿ ಎಣ್ಣೆಹೊಳೆ  ವಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ  ಉಮೇಶ್‌ ಹೆಗ್ಡೆ ಕಡ್ತಲ ನೇತೃತ್ವದಲ್ಲಿ ಖ್ಯಾತ ಗಾಯಕ ಎರ್ಮಾಳ್‌ ಹರೀಶ್‌ ಶೆಟ್ಟಿ ಮತ್ತು ಪ್ರಸಿದ್ಧ ಹಾಸ್ಯ ಕಲಾವಿದರುಗಳ ಕೂಡುವಿಕೆಯೊಂದಿಗೆ ರಾಗ ರಸೊಕು ತೆಲಿಕೆದ ನೆಸಲ…  ಎನ್ನುವ ವಿನೂತನ  ಹಾಸ್ಯ ಹಾಗೂ ಸಂಗೀತದ ಕಾರ್ಯಕ್ರಮ, ಶಂಕರ ಪೂಜಾರಿಯವರಿಂದ ಗಾಯನ, ಮಕ್ಕಳಿಂದ ನೃತ್ಯ ಪ್ರದರ್ಶನ ನಡೆಯಿತು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ತುಳು-ಕನ್ನಡಿಗರು ಪಾಲ್ಗೊಂಡಿದ್ದರು.

ನಾಡಿನ ಅಭಿವೃದ್ಧಿಯ ಮಂತ್ರದೊಂದಿಗೆ ನಿಸ್ವಾರ್ಥ ಮನೋಭಾವದ ಸುನಿಲ… ಕುಮಾರ್‌ ಅವರು ನಮ್ಮನ್ನು ಭೇಟಿಯಾಗಿ ಸಲಹೆ ಪಡೆಯಲು ಆಗಮಿಸಿರುವುದು ನಮಗೆಲ್ಲಾ ಅಭಿಮಾನದ ಸಂಗತಿಯಾಗಿದೆ. ಇಂತಹ  ವ್ಯಕ್ತಿತ್ವದ ಅಪರೂಪದ ಶಾಸಕರು ಕೇವಲ ಸುನಿಲ್‌ ಕುಮಾರ್‌ ಮಾತ್ರ.  ಅವರ ಉದ್ದೇಶಕ್ಕೆ ಸಹಕರಿಸುವ  ಕರ್ತವ್ಯ ನಮ್ಮದಾಗಿದೆ 
– ವಿಶ್ವನಾಥ ಪೂಜಾರಿ ಕಡ್ತಲ (ಉಪಾಧ್ಯಕ್ಷರು : ಪುಣೆ ರೆಸ್ಟೋರೆಂಟ್‌  ಹೊಟೇಲಿಯರ್ಸ್‌ ಅಸೋಸಿಯೇಶನ್‌).

ಇಂದು ಕಾರ್ಕಳದ ಪ್ರತಿಯೊಬ್ಬ ನಾಗರಿಕರಿಗೂ ಸುನಿಲ್‌ ಕುಮಾರ್‌ ಅವರ ಕಾರ್ಯದ ಬಗ್ಗೆ ಹೆಮ್ಮೆಯಿದೆ. ರಸ್ತೆ, ನೀರು, ಆಸ್ಪತ್ರೆ, ಶಾಲೆ ಇವುಗಳ ಬಗ್ಗೆ ವಿಶೇಷ ಆಸ್ಥೆ ವಹಿಸಿ ಜನರಿಗೆ ಸೌಲಭ್ಯವನ್ನು ಕಲ್ಪಿಸಿದ್ದಾರೆ . ಇವರ ನೇತೃತ್ವದಲ್ಲಿ ಭವಿಷ್ಯದಲ್ಲಿ ಮಾದರಿ ಕ್ಷೇತ್ರವಾಗಿ ಕಾರ್ಕಳ ರೂಪುಗೊಳ್ಳಲಿ 
– ಪುರಂದರ ಪೂಜಾರಿ (ಪುಣೆ ಉದ್ಯಮಿ).

ಸುನಿಲ್‌ ಕುಮಾರ್‌ ಅವರ ಅಭಿವೃದ್ಧಿಯ ಬಗ್ಗೆ ಎಲ್ಲರಿಗೂ ತಿಳಿದಿದೆ. ಪುಣೆಯ ಕನ್ನಡಿಗರಿಗಾಗಿ ಮಂಗಳೂರಿಗೆ ವಿಮಾನಸೇವೆ ಒದಗಿಸಲು ನಮ್ಮೆಲ್ಲರ ಮನವಿಯಾಗಿದೆ. ಪುಣೆಯಿಂದ ಮಂಗಳೂರಿಗೆ ತೆರಳುವ  ಐರಾವತ ಬಸ್ಸುಗಳ ಸೇವೆಯನ್ನು ಉತ್ತಮಗೊಳಿಸಬೇಕಾಗಿದೆ. ಅದೇ ರೀತಿ ಮಿಯ್ನಾರಿನಲ್ಲಿ ನಿರ್ಮಾಣಗೊಳ್ಳುವ ಕೈಗಾರಿಕಾ ವಲಯದಲ್ಲಿ ಹೊರನಾಡಿನ ಕನ್ನಡಿಗರಿಗೆ ಆದ್ಯತೆ ನೀಡಬೇಕು 
– ಡಾ| ಬಾಲಜಿತ್‌ ಶೆಟ್ಟಿ (ವಿಶ್ವಸ್ಥರು :  ಪುಣೆ ಕನ್ನಡ ಸಂಘ).

ಕಾರ್ಕಳದ ಅಭಿವೃದ್ಧಿಯ ಕಡೆಗೆ ಆದ್ಯತೆ ನೀಡುತ್ತಿರುವ ಸುನಿಲ್‌ ಕುಮಾರ್‌ ಅವರು ವಿಧಾನ ಸಭೆಯಲ್ಲಿಯೂ ಉತ್ತಮ ಹೋರಾಟ ಸಂಘಟಿಸುತ್ತಿರುವುದು ಶ್ಲಾಘನೀಯ. ಕಾರ್ಕಳದಲ್ಲಿ ಕೈಗಾರಿಕೀಕರಣಕ್ಕೆ ಪ್ರಾಧಾನ್ಯತೆ ನೀಡಿದರೆ ಯುವ ಜನಾಂಗಕ್ಕೆ ಪೊ›àತ್ಸಾಹ  ಸಿಗಬಹುದು 
– ಸದಾನಂದ ನಾಯಕ್‌ (ಅಧ್ಯಕ್ಷರು : ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘ).

ಸುನಿಲ… ಅವರು ಮಾಡುತ್ತಿರುವ ಪ್ರಗತಿಯ ನಡೆಯಿಂದ ನಾನು ಪ್ರೇರಿತನಾಗಿ ಅವರ ಅಭಿಮಾನಿ ಯಾಗಿ ದ್ದೇನೆ. ಇಂದು ಅವರ ಬದ್ಧತೆಯಿಂದ ಊರಿನ ಹಳ್ಳಿಗಳ ರಸ್ತೆಗಳೂ ಹೆದ್ದಾರಿಯಂತೆ ಅಭಿವೃದ್ಧಿಯಾಗಿದೆ 
– ಸದಾನಂದ ಶೆಟ್ಟಿ (ಗೋವಾದ ಉದ್ಯಮಿ).

ಸುನಿಲ… ಕುಮಾರ್‌ ಅವರ ವ್ಯಕ್ತಿತ್ವವನ್ನು ವರ್ಣಿಸಲು ಪದಗಳೇ ಸಾಲದು. ಸರ್ವಧರ್ಮ ಸಮತಾ ಭಾವದೊಂದಿಗೆ ಎಲ್ಲರ ಕಷ್ಟ ಸುಖಗಳಲ್ಲಿ ಸ್ಪಂದಿಸುವ ಅವರ ಗುಣ ಅನನ್ಯವಾಗಿದೆ 
– ಪ್ರಿಯಾ ಎಚ್‌. ದೇವಾಡಿಗ (ಗೌರವ ಕಾರ್ಯದರ್ಶಿ : ಪುಣೆ ದೇವಾಡಿಗ ಸಂಘ).

ಚಿತ್ರ-ವರದಿ : ಕಿರಣ್‌ ಬಿ. ರೈ ಕರ್ನೂರು

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Electric shock: ಯುವಕನ ಸಾವು

Electric shock: ಯುವಕನ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.