CONNECT WITH US  

ಹವ್ಯಕ ಭಾಷೆಯನ್ನು ಮೇಳೈಸಿದ ಸಾಂಸ್ಕೃತಿಕ ವೈಭವ

ಹವ್ಯಕ ವೆಲ್ಫೆರ್‌ ಟ್ರಸ್ಟ್‌ ಮುಂಬಯಿ ಇತ್ತೀಚೆಗೆ ಘಾಟ್ಕೊàಪರ್‌ ಪಶ್ಚಿಮದಲ್ಲಿನ ತನ್ನ ಸ್ವಂತದ ಹವ್ಯಕರ ಸಭಾಗೃಹದಲ್ಲಿ ಆಯೋಜಿಸಿದ್ದ ವಾರ್ಷಿಕ ಸಮಾರಂಭದಲ್ಲಿ "ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ' ಪುರಸ್ಕಾರ ಪ್ರದಾನಿಸಿ ಪತ್ರಿಕೋದ್ಯಮದ ಗುರುವರ್ಯರ ಗೌರವಕ್ಕೆ ಪಾತ್ರರಾಗಿರುವುದು ಅಭಿಮಾನದ ವಿಚಾರ. ಟ್ರಸ್ಟ್‌ನ ಅಧ್ಯಕ್ಷ ಶಿವಕುಮಾರ್‌ ಪಿ. ಭಾಗÌತ್‌ ಮುಂದಾಳತ್ವದಲ್ಲಿ ಕಳೆದ ಕೆಲವೊಂದು ವರ್ಷಗಳಿಂದ ಅರ್ಥಗರ್ಭಿತವಾಗಿ ನಡೆಸಿಕೊಂಡು ಬರುತ್ತಿರುವ ಸಂಭ್ರಮದಲ್ಲಿ ಹವ್ಯಕ ಸಮುದಾಯದ ಸಂಪ್ರದಾಯಗಳ ಉಳಿವು ಮತ್ತು ಭವಿಷ್ಯತ್ತಿನ ಪೀಳಿಗೆಗೆ ಅದರ ಅರಿವು ಮೂಡಿಸುತ್ತಿರುವ ಹವ್ಯಕ ವೆಲ್ಫೆàರ್‌ ಟ್ರಸ್ಟ್‌ ಮುಂಬಯಿ ಇದರ ಕಾರ್ಯ ಅಭಿನಂದನೀಯ.

ಹಿರಿಯ ಸಾಹಿತಿಗಳಾದ ಡಾ| ತಾಳ್ತಜೆ ವಸಂತ್‌ ಕುಮಾರ್‌, ಎಸ್‌. ಎಂ. ಕೃಷ್ಣರಾವ್‌, ಹಿರಿಯ ಪತ್ರಕರ್ತ ಎಲ್‌. ಎಸ್‌. ಶಾಸ್ತ್ರಿ, ಹಿರಿಯ ನಾಟಕಕಾರ ಸಾ. ದಯಾ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಇವರುಗಳ ಉಪಸ್ಥಿತಿ ಕಾರ್ಯಕ್ರಮವು ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವಂತಿತ್ತು.  ಕಾವ್ಯಾ ಅಶ್ವಿ‌ನ್‌ ಭಾಗÌತ್‌ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ದಕ್ಷಯಜ್ಞದ  ಕಾಲದಲ್ಲಿಯ ಈಶ್ವರನಿಂದ ಹಿಡಿದು ಸಮುದ್ರ ಮಥನದ ಕಾಲದಲ್ಲಿ ವಿಷವನ್ನು ಕುಡಿದು ನೀಲಕಂಠನಾದ ಶಿವನ ಹಲವು ರೂಪಗಳನ್ನು ವೈವಿಧಯಮಯ ನೃತ್ಯಗಳ ಮೂಲಕ ಕು| ನೇಹಾ ಹೆಗಡೆ ಸುಂದರವಾಗಿ ಪ್ರಸ್ತುತಪಡಿಸಿದರು.

ಜೆ. ಕೆ. ಕ್ರಿಯೆಷನ್ಸ್‌ ಬೆಂಗಳೂರು ಬಳಗವು ವಿವಿಧ ವಿನೋದಾವಳಿಗಳೊಂದಿಗೆ ಸಾಂಸ್ಕೃತಿಕ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು. ಬಾಳೆಸರ ವಿನಾಯಕ ಅವರು ತಮ್ಮ ಹಾಸ್ಯ ಚಟಾಕಿಗಳಿಂದ ಜನರನ್ನು ನಗೆಗಡಲಲ್ಲಿ ತೇಲಿಸಿದರು. ಬಾಳೆಸರ ಸಂಗಡಿಗಾರರಾದ ಆಶಾ ಹೆಗಡೆ ಮತ್ತು ವಿನಯ ತೋಟದಹಳ್ಳಿ ಅವರು ತಮ್ಮ ಸುಶ್ರಾವ್ಯ ಕಂಠದಿಂದ ಬಾಳೆಸರ ವಿನಾಯಕ ಅವರು ರಚಿಸಿದ ಹಾಸ್ಯ ಭರಿತ ಹಾಡುಗಳನ್ನು ಹಾಡಿ ಜನರನ್ನು ರಂಜಿಸಿದರು. ಈ ಹಾಸ್ಯ ಕಾರ್ಯಕ್ರಮದಲ್ಲಿ ಹಳ್ಳಿ ಮತ್ತು ಪಟ್ಟಣದ ದೈನಂದಿನ ಜೀವನ ಶೈಲಿಯ ಹಾಸ್ಯಮಯ ಬದುಕಿನ ಚಿತ್ತಣ ಮೂಡಿ ಬಂದಿದ್ದು, ಹಾಡುಗಳಲ್ಲಿ ಕೂಡ ಹಳ್ಳಿಯ ಜೀವನದ ಸೊಗಡು ರಸವತ್ತಾಗಿ ಹೊಮ್ಮುತ್ತಿತ್ತು.

ಎಲ್ಲಾ ಹಾಸ್ಯಮಯ ಕಾರ್ಯಕ್ರಮಗಳು ಹವ್ಯಕ ಭಾಷೆಯನ್ನು ಉಳಿಸಿ ಬೆಳೆಸುವ ಸದುದ್ದೇಶದಿಂದ ಬಾಳೆಸರ ವಿನಾಯಕ ಅವರು ಹವ್ಯಕ ಭಾಷೆಯಲ್ಲಿಯೇ ನಡೆಸಿರುವುದು ಒಂದು ವಿಶೇಷವಾಗಿತ್ತು. ಟ್ರಸ್ಟ್‌ನ ಉಪಾಧ್ಯಕ್ಷ ಸಂಜಯ ಭಟ್‌, ಗೌರವ ಪ್ರಧಾನ ಕಾರ್ಯದರ್ಶಿ ನಾರಾಯಣ ಆರ್‌. ಅಕದಾಸ,  ಗೌರವ ಕೋಶಾಧಿಕಾರಿ ಎ. ಜಿ. ಭಟ್‌, ಟ್ರಸ್ಟ್‌ನ ಮುಖವಾಣಿ "ಹವ್ಯಕ ಸಂದೇಶ' ಮಾಸಿಕದ ಸಂಪಾದಕಿ ನ್ಯಾಯವಾದಿ ಅಮಿತಾ ಎಸ್‌. ಭಾಗವತ್‌, ಶಶಿಕಲಾ ಹೆಗಡೆ, ತನುಜಾ ಹೆಗಡೆ, ಮಹೇಶ ಹೆಗಡೆ, ಚಿದಾನಂದ ಭಾಗವತ್‌, ಪೂರ್ಣಿಮಾ ಅಕದಾಸ ಅವರ ಸಹಯೋಗವು ಕಾರ್ಯಕ್ರಮದ ಯಶಸ್ಸಿಗೆ ಪೂರಕವಾಗಿತ್ತು. 

   ರೋನ್ಸ್‌  ಬಂಟ್ವಾಳ್‌


Trending videos

Back to Top