CONNECT WITH US  

ಬಿಲ್ಲವರ ಅಸೋಶಿಯೇಶನ್‌ನಿಂದ ದತ್ತು ಸ್ವೀಕಾರ, ಪ್ರತಿಭಾ ಪುರಸ್ಕಾರ

ಮುಂಬಯಿ:  ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ವಿದ್ಯಾ ಉಪಸಮಿತಿ ವತಿಯಿಂದ ವಾರ್ಷಿಕ ದತ್ತು ಸ್ವೀಕಾರ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವು ಸೆ.2ರಂದು ಸಂಜೆ ಸಾಂತಾಕ್ರೂಜ್‌ ಪೂರ್ವದ ಬಿಲ್ಲವರ ಭವನದ ಶ್ರೀ ನಾರಾಯಣ ಸಭಾಗೃಹದಲ್ಲಿ ಅಸೋಸಿಯೇಶನ್‌ನ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌ ಅವರ ಅಧ್ಯಕ್ಷತೆಯಲ್ಲಿ ಜರಗಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉದ್ಯಮಿ ರಮೇಶ್‌ ಕೋಟಿ, ಗೌರವ ಅತಿಥಿಗಳಾಗಿ ಭಾರತ್‌ ಕೋ.ಅಪರೇಟಿವ್‌ ಬ್ಯಾಂಕ್‌ (ಮುಂಬಯಿ) ಲಿಮಿಟೆಡ್‌ ಇದರ ನಿರ್ದೇಶಕ‌ ಭಾಸ್ಕರ ಎಂ. ಸಾಲ್ಯಾನ್‌ ಮತ್ತು ಸಮಾಜ ಸೇವಕಿ ನ್ಯಾ| ಕವಿತಾ ಆರ್‌.ಕೋಟಿ ಉಪಸ್ಥಿತರಿದ್ದು, ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ಜಯ ಸಿ.ಸುವರ್ಣ ದೀಪ ಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು.

ಅಸೋಸಿಯೇಶನ್‌ನ ಉಪಾಧ್ಯಕ್ಷ ಶಂಕರ ಡಿ.ಪೂಜಾರಿ, ಗೌ| ಪ್ರ| ಕೋಶಾಧಿಕಾರಿ ಮಹೇಶ್‌ ಸಿ.ಕಾರ್ಕಳ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್‌, ವೇದಿಕೆಯಲ್ಲಿ ಆಸೀನರಾಗಿದ್ದು ಅತಿಥಿಗಳು ನೆರೆದ ಮಕ್ಕಳ ದತ್ತು ಸ್ವೀಕಾರ ಮತ್ತು ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಸ್ತಾಂತರಿಸಿ ಅಭಿನಂದಿಸಿದರು.

ಆರಂಭದಲ್ಲಿ ಪ್ರೇರಣಾ ಮಾತುಗಾರ ಸಾಮುದಾಯಿಕ ತರಬೇತುದಾರ  ರಾಕೇಶ್‌ ಶೆಟ್ಟಿ ಅವರು "ಸ್ವಯಂ ವಿಶ್ವಾಸ' ವಿಚಾರಿತ ಕಾರ್ಯಗಾರ ನಡೆಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ಜಾಗತಿಕ ಅರಿವು ಮೈಗೂಡಿಸಿ ಕೊಳ್ಳಬೇಕು. ಬದ್ಧತೆಯನ್ನು ರೂಪಿಸಿಕೊಂಡಾಗ ಭವ್ಯವಾದ ಬದುಕು ಕಟ್ಟಿಕೊಳ್ಳಬಹುದು. ಆದ್ದರಿಂದ ಆಧುನಿಕ ಜಗತ್ತಿನ ಜ್ಞಾನವನ್ನು ಕ್ರೋಢೀಕರಿಸಿಕೊಳ್ಳಿರಿ ಎಂದರು. ಅಖೀಲೇಶ್‌ ಅಂಚನ್‌ ಅವರು ಮಾಹಿತಿ ಕಾರ್ಯಗಾರ ನಡೆಸಿದರು.

ಭಾಸ್ಕರ ಎಂ.ಸಾಲ್ಯಾನ್‌ ಮಾತನಾಡಿ 490 ಮಕ್ಕಳನ್ನು ದತ್ತಿಯಾಗಿ ಸ್ವೀಕರಿಸಿ ಪ್ರೋತ್ಸಾಹಿಸು ವುದು ಸ್ತುಹ್ಯರ್ಹ. ಶಿಕ್ಷಣದಿಂದಲೇ ದೇಶದ ಸರ್ವೋನ್ನತಿ ಸಾಧ್ಯ. ಆಸಕ್ತಿವುಳ್ಳ ಮಕ್ಕಳಿಗೆ ಆರ್ಥಿಕತೆ ಅಡ್ಡಿಯಾಗಬಾರದು. ಅವರಲ್ಲಿನ ಪ್ರತಿಭೆ ಇಂತಹ ಕಾರ್ಯಕ್ರಮಗಳ ಮುಖೇನ ಪ್ರಕಾಶಮಾನವಾಗಬೇಕು. ಪಡೆದ ಪ್ರಯೋಜನದಿಂದ ಸಂಸ್ಥೆಗೆ ಏನೂ ಮರುಕಳಿಸದಿರಿ.ಆದರೆ, ಕಲಿಯುವ ಭವಿಷ್ಯತ್ತಿನ ಮಕ್ಕಳಿಗೆ ನಿಮ್ಮ ಗಳಿಕೆಯ ಸಹಾಯ ಹಸ್ತವನ್ನಿತ್ತು ಋಣ ಪೂರೈಸಿ ಎಂದರು.

ಜಯ ಸಿ.ಸುವರ್ಣ ಮಾತನಾಡಿ,  ಅಂದು 10 ಸಾವಿರ ಕೊಡುತ್ತಿದ್ದ ಅಸೋಸಿಯೇಶನ್‌ ಇಂದು ಕೋಟ್ಯಾಂತರ ಮೊತ್ತ ನೀಡಿ ಪ್ರೋತ್ಸಾಹಿಸುತ್ತಿದೆ.  ಬಿಲ್ಲವರಲ್ಲಿ ಸಾಕ್ಷರತಾ ಸಂಖ್ಯೆ  ಕಡಿಮೆಯಾಗಿರುವುದು ಖೇದಕರ. ಮನುಷ್ಯನಿಗೆ ಜ್ಞಾನದ ಅವಶ್ಯವಿದ್ದು ಇದಕ್ಕಾಗಿ ವಿದ್ಯಾರ್ಜನೆಯಿಂದ ಸ್ವತಂತ್ರÂರಾಗುವ ಅವಶ್ಯಕತೆ ಯಿದ್ದು, ಬಿಲ್ಲವರ ಅಸೋಸಿಯೇಶನ್‌ ಅದನ್ನು ಪರಿಣಾಮಕಾರಿಯಾಗಿ ರೂಢಿಸಿದೆ ಎಂದು ತಿಳಿಸಿದರು.

ನಿತ್ಯಾನಂದ ಡಿ.ಕೋಟ್ಯಾನ ಅಧ್ಯಕ್ಷೀಯ ಭಾಷಣಗೈದು ಆರೋಗ್ಯವಿದ್ದರೆ ಶಿಕ್ಷಣ. ಸುಶಿಕ್ಷಿತರಾದರೆ ಸ್ವಾಸ್ಥ್ಯತೆ. ಇದಕ್ಕೆ ಪೂರಕವಾಗಿ ಬಿಲ್ಲವರ ಅಸೋಸಿಯೇಶನ್‌ ಶ್ರಮಿಸುತ್ತಿದೆ. ಶಿಕ್ಷಣದ ಜೊತೆ ಸಮುದಾಯದ ಒಲವು ಕೂಡಾ ಸಹಜವಾಗಿ ಮಾಡಬೇಕು. ಆ ಮೂಲಕ ಸಮುದಾಯವನ್ನು ಮುನ್ನಡೆಸಲು ನಾಯಕತ್ವವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾ ಉಪ ಸಮಿತಿ ಸದಸ್ಯರಾದ ರವೀಂದ್ರ ಎ.ಅಮೀನ್‌, ಪ್ರೇಮಾ ಆರ್‌.ಕೋಟ್ಯಾನ್‌, ರವಿರಾಜ್‌ ಕಲ್ಯಾಣRರ್‌, ಸದಾನಂದ ಅಮೀನ್‌, ಧನಂಜಯ ಎಸ್‌.ಕೋಟ್ಯಾನ್‌, ಎಂ.ಆನಂದ್‌ ಪೂಜಾರಿ, ಮೋಹನ್‌ ಡಿ.ಪೂಜಾರಿ, ಗಣೇಶ್‌ ಎಚ್‌. ಬಂಗೇರ, ದಿನೇಶ್‌ ಅಮೀನ್‌,  ಗೋಪಾಲ್‌ ಪಾಲನ್‌ ಇನ್ನಿತರರು ಉಪಸ್ಥಿತರಿದ್ದು,ಪ್ರತಿಭಾನ್ವಿತ ಮಕ್ಕಳಿಗೆ ಪ್ರೋತ್ಸಹಿಸಿಸಿದರು. ಡಾ| ನಿತೇಶ್‌ ಕರ್ನಿರೆ ಪುರಸ್ಕೃತರ  ಪರವಾಗಿ ವಂದಿಸಿದರು.

ಈ ಸಂದರ್ಭದಲ್ಲಿ ಇತ್ತೀಚಿಗೆ ಗೊಂಚಲು ಕೃತಿ ಪ್ರಕಟಿಸಿದ ಪ್ರಭಾ ಎನ್‌.ಪಿ ಸುವರ್ಣ ಅವರಿಗೆ ಜಯ ಸಿ.ಸುವರ್ಣ ಅವರು ಪುಷ್ಪ ಗೌರವನ್ನಿತ್ತು ಗೌರವಿಸಿದರು.

ವಿಭೂತಿ ಆರ್‌.ಕಲ್ಯಾಣ್‌ಪುರ್‌ ಪ್ರಾರ್ಥನೆ ಹಾಡಿದರು. ವಿದ್ಯಾಉಪ ಸಮಿತಿ ಕಾರ್ಯಾಧ್ಯಕ್ಷ ಭಾಸ್ಕರ ವಿ.ಬಂಗೇರ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಗೌ| ಪ್ರ| ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್‌ ಅತಿಥಿಗಳನ್ನು ಪರಿಚಯಿಸಿ, ಕಾರ್ಯ ಕ್ರಮ ನಿರೂಪಿಸಿದರು.  

ಜೊತೆ ಕೋಶಾಧಿಕಾರಿ ಧನಂಜಯ ಎಸ್‌.ಕೋಟ್ಯಾನ್‌ ಅವರು ದತ್ತು ಸ್ವೀಕೃತ, ಪ್ರತಿಭಾ ಪುರಸ್ಕೃತರ ಪಟ್ಟಿ ವಾಚಿಸಿದರು. ವಿದ್ಯಾ ಉಪ ಸಮಿತಿ ಕಾರ್ಯದರ್ಶಿ ವಿಶ್ವನಾಥ ತೋನ್ಸೆ ವಂದಿಸಿದರು.    ಚಿತ್ರ-ವರದಿ: ರೋನ್ಸ್‌ ಬಂಟ್ವಾಳ್‌


Trending videos

Back to Top