CONNECT WITH US  

ಬಿಲ್ಲವ ಅಸೋಸಿಯೇಶನ್‌:ಕಾಂತಾಬಾರೆ-ಬೂದಾಬಾರೆ ಒಳಾಂಗಣ ಸ್ಪರ್ಧೆ

ಮುಂಬಯಿ: ಆರೋಗ್ಯಕ್ಕೆ ಕ್ರೀಡೆ ಹೇಗೆ ಮುಖ್ಯವಾಗಿದೆಯೋ ಹಾಗೆಯೇà ಒಳಾಂಗಣ ಕ್ರೀಡೆಯು ಮನುಷ್ಯನನ್ನು ಮಾನಸಿಕವಾಗಿ ಆರೋಗ್ಯವಂತರನ್ನಾಗಿಸಲು ಸಹಕರಿಸುತ್ತದೆ. ಇಂತಹ ಆಟೋಟ ಸ್ಪರ್ಧೆಗಳಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಆಧುನಿಕ ಜೀವನದಲ್ಲಿ ಕ್ರೀಡೆಯು ಮಹತ್ತರವಾದ ಪಾತ್ರ ವಹಿಸುತ್ತದೆ. ಗೆಲುವನ್ನು ಕ್ರೀಡಾ ಭವನೆಯಿಂದ ಸಹಜವಾಗಿ ಸ್ವೀಕರಿಸಬೇಕು. ಕ್ರೀಡೆಯಿಂದ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆ ಆಗುವುದರಿಂದ ಯುವ ಜನತೆ ಕ್ರೀಡೆಗಳತ್ತ ಹೆಚ್ಚು ಗಮನ ಹರಿಸಬೇಕು ಎಂದು ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌ ಅವರು ಅಭಿಪ್ರಾಯಿಸಿದರು.

ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಯುವಾಭ್ಯುದಯ ಉಪಸಮಿತಿ ಸೆ. 3ರಂದು ಬೆಳಗ್ಗೆ ಸಾಂತಾಕ್ರೂಜ್‌ ಪೂರ್ವದ ಬಿಲ್ಲವ ಭವನದಲ್ಲಿ ಆಯೋಜಿಸಿದ್ದ ವಾರ್ಷಿಕ ಕಾಂತಾಬಾರೆ-ಬೂದಾಬಾರೆ ಒಳಾಂಗಣ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿ ಕ್ರೀಡಾಳುಗಳಿಗೆ ಶುಭ ಹಾರೈಸಿದರು.

ಅತಿಥಿಗಳಾಗಿ ಭಾರತ್‌ ಬ್ಯಾಂಕ್‌ನ ನಿರ್ದೇಶಕರಾದ ಚಂದ್ರಶೇಖರ ಎಸ್‌. ಪೂಜಾರಿ, ಸೂರ್ಯಕಾಂತ್‌ ಜೆ. ಸುವರ್ಣ ಚೆಸ್‌ ಆಟವಾಡಿ, ನಿತ್ಯಾನಂದ ಡಿ. ಕೋಟ್ಯಾನ್‌ ಅವರು  ಕೇರಂ ಹಾಗೂ ಅಸೋಸಿಯೇಶನ್‌ನ ಗೌರವ ಪ್ರಧಾನ  ಕೋಶಾಧಿಕಾರಿ ಮಹೇಶ್‌ ಸಿ. ಕಾರ್ಕಳ ಮತ್ತು ಅಸೋಸಿಯೇಶನ್‌ನ ಮಲಾಡ್‌ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಸಂತೋಷ್‌ ಕೆ. ಪೂಜಾರಿ ಟೇಬಲ್‌ ಟೆನಿಸ್‌ ಆಡುವುದರ ಮೂಲಕ ಒಳಾಂಗಣದ ಕ್ರೀಡೆಗಳಿಗೆ ಚಾಲನೆ ನೀಡಿ ಶುಭ ಹಾರೈಸಿದರು.

ಕಾಂತಾಬಾರೆ-ಬೂದಾಬಾರೆ ಅವರು ನಮ್ಮೆಲ್ಲರ ಪಾಲಿನ ಲೌಕಿಕ ಶಕ್ತಿಯಾಗಿದ್ದು ಅವರು ದೇವರ ಸಮಾನವುಳ್ಳವರು. ನಾವು ಸದಾ ಅವರ ಆರಾಧನೆ ಮಾಡುತ್ತಾ ಕೃಪೆಯನ್ನು  ಆಶಿಸುತ್ತೇವೆ. ಅವರ ಆಶೀರ್ವಾದ  ಮತ್ತು ಕೋಟಿ -ಚೆನ್ನಯರ ಸಹಾಯ ಕೃಪಾನುಗ್ರಹ ನಮ್ಮೆಲ್ಲರ ಬಾಳಿನ ಪಾಲಿಗೆ ಶಕ್ತಿ ಯಾಗಿದೆ. ಇಂತಹ ಶಕ್ತಿ ನಮ್ಮೆಲ್ಲರಿಗೂ ಇನ್ನೂ ಪಾವನವಾಗಲಿ. ಅವರಲ್ಲೂ ನಮ್ಮ ಭಕ್ತಿ ಇಮ್ಮಡಿಗೊಂಡು ಜೀವನ ಚೈತನ್ಯ ತುಂಬಲಿ ಎಂದು ಅತಿಥಿಯಾಗಿ ಪಾಲ್ಗೊಂಡ ಚಂದ್ರಶೇಖರ ಪೂಜಾರಿ ಯುವ ಜನತೆಗೆ ಹಿತ ನುಡಿಗಳನ್ನಾಡಿದರು.

ಸ್ಪರ್ಧೆಯಲ್ಲಿ ಅಸೋಸಿ ಯೇಶನ್‌ನ ಸ್ಥಳೀಯ ಮತ್ತು ಸಮನ್ವಯ ಸಮಿತಿಗಳ ಹಾಗೂ  ಯುವ ವಿಭಾಗೀಯ ಮುಖ್ಯಸ್ಥರು, ಪದಾಧಿಕಾರಿಗಳು, ಸದಸ್ಯರನೇಕರು ಉಪಸ್ಥಿತರಿದ್ದು ಟೇಬಲ್‌ ಟೆನಿಸ್‌, ಕೇರಂ, ಚೆಸ್‌, ಸಂಗೀತ, ಚಿತ್ರಕಲೆ, ರಂಗೋಲಿ, ಲ್ಯಾಂಡ್‌ಸ್ಕೇಪ್‌ ಇತ್ಯಾದಿ ಸ್ಪರ್ಧೆಗಳನ್ನು ನಡೆಸಲಾಯಿತು. ಜಯ ಎಸ್‌. ಸಾಲ್ಯಾನ್‌,  ಹರೀಶ್‌ ಪೂಜಾರಿ, ಎಚ್‌. ಎಸ್‌. ಸಾಲ್ಯಾನ್‌, ನವೀಶ್‌ ಅಮೀನ್‌ ಸ್ಪರ್ಧೆಗಳ ತೀರ್ಪುಗಾರರಾಗಿ ಸಹಕರಿಸಿದರು. ತೀರ್ಪುಗಾರರನ್ನು ನಿತ್ಯಾನಂದ ಕೋಟ್ಯಾನ್‌ ಅವರು  ಗೌರವಿಸಿದರು.

ಸಾಮಾಜಿಕ ಹಾಗೂ ಧಾರ್ಮಿಕ  ಉಪಸಮಿತಿಯ ಕಾರ್ಯಾಧ್ಯಕ್ಷ ಮೋಹನ್‌ದಾಸ್‌ ಜಿ. ಪೂಜಾರಿ, ಯುವ ವಿಭಾಗದ ಸದಸ್ಯರಾದ ಹರೀಶ್‌ ಜಿ. ಸಾಲ್ಯಾನ್‌, ನಾಗೇಶ್‌ ಎನ್‌. ಕೋಟ್ಯಾನ್‌, ರಜಿತ್‌ ಎಲ್‌. ಸುವರ್ಣ, ರವೀಂದ್ರ ಎ. ಅಮೀನ್‌, ನಾಗೇಶ ಎಸ್‌. ಕೋಟ್ಯಾನ್‌, ಅಕ್ಷಯ್‌ ಪೂಜಾರಿ, ಗಣೇಶ್‌ ಎಚ್‌. ಅಂಚನ್‌, ಯಶವಂತ ಪೂಜಾರಿ, ಭವನದ ವ್ಯವಸ್ಥಾಪಕ ಭಾಸ್ಕರ್‌ ಟಿ. ಪೂಜಾರಿ ಸ್ಪರ್ಧೆಯ ಯಶಸ್ಸಿಗೆ ಸಹಕರಿಸಿದರು. ರವಿ ಎಸ್‌. ಸನಿಲ್‌ ಸ್ಪರ್ಧೆಗಳನ್ನು ನಿರ್ವಹಿಸಿದರು. ಯುವಾಭ್ಯುದಯ ಉಪ ಸಮಿತಿಯ ಮುಖ್ಯಸ್ಥ ನಿಲೇಶ್‌ ಪೂಜಾರಿ ಪಲಿಮಾರ್‌ ಸ್ವಾಗತಿಸಿ ಅತಿಥಿಗಳನ್ನು ಪುಷ್ಪಗುತ್ಛವನ್ನಿತ್ತು ಗೌರವಿಸಿದರು. ಕಾರ್ಯದರ್ಶಿ ಉಮೇಶ್‌ ಎನ್‌. ಕೋಟ್ಯಾನ್‌ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 

  ಚಿತ್ರ-ವರದಿ: ರೋನ್ಸ್‌  ಬಂಟ್ವಾಳ್‌


Trending videos

Back to Top