CONNECT WITH US  

ಬಿಲ್ಲವರ ಅಸೋಸಿಯೇಶನ್‌ ಸಾಂಗ್ಲಿ:ಗುರು ಜಯಂತಿ ಆಚರಣೆ

ಸಾಂಗ್ಲಿ: ಮಹಾರಾಷ್ಟ್ರ ರಾಜ್ಯದ ಕೋಲಾಪುರದಲ್ಲಿ ಸೇವಾನಿರತ ಬಿಲ್ಲವರ ಅಸೋಸಿಯೇಶನ್‌ ಸಾಂಗ್ಲಿ ಸಂಸ್ಥೆಯ ವತಿಯಿಂದ ಸೆ. 6 ರಂದು  ಬ್ರಹ್ಮಶ್ರೀ ನಾರಾಯಣ ಗುರುಗಳ‌ 163ನೇ ಜಯಂತಿ ಆಚರಣೆಯು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಗರದ ಶಿಂಧೆಮಾಲ ಇಲ್ಲಿನ ದುರ್ಗಾದಯಾ ಕಾಂಪ್ಲೆಕ್ಸ್‌ನಲ್ಲಿ ಅಸೋಸಿಯೇಶನ್‌ನ ಕಾರ್ಯಾಲಯದಲ್ಲಿ ನಡೆಯಿತು.

ಅಸೋಸಿಯೇಶನ್‌ನ ಅಧ್ಯಕ್ಷ ನಾರಾಯಣ ಪೂಜಾರಿ ಅವರು ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ನಾರಾಯಣ ಗುರುಗಳ‌ ತತ್ವ ಮತ್ತು ಸಿದ್ಧಿ-ಸಾಧನೆಗಳನ್ನು ವಿವರಿಸಿ ದರು. ಉಪಾಧ್ಯಕ್ಷ ಸುಧಾಕರ ಪೂಜಾರಿ ಹೊಸ್ಮಾರು ಸ್ವಾಗತಿಸಿ ಗುರುವರ್ಯರ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು  ಸಮಗ್ರ ಸಮಾಜಕ್ಕೆ ಮಾದರಿಯಾಗೋಣ ಎಂದರು.

ಈ ಸಂದರ್ಭದಲ್ಲಿ ಗೌರವ ಕಾರ್ಯದರ್ಶಿ ದೇವಿ ಕಿರಣ್‌ ಪೂಜಾರಿ, ಗೌರವ ಕೋಶಾಧಿಕಾರಿ ಧೀರಜ್‌ ಪೂಜಾರಿ, ಮಹಿಳಾ ವಿಭಾಗಾಧ್ಯಕ್ಷೆ ಶಕುಂತಲಾ ಎಸ್‌. ಪೂಜಾರಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ರಘುರಾಮ ಪೂಜಾರಿ, ಪ್ರವೀಣ್‌ ಪೂಜಾರಿ, ಶೇಖರ್‌ ಪೂಜಾರಿ, ನಾರಾಯಣ ಎಸ್‌. ಪೂಜಾರಿ, ಆನಂದ ವಿ. ಪೂಜಾರಿ, ಗಣೇಶ್‌ ಪೂಜಾರಿ, ಮನೋಜ್‌ ಪೂಜಾರಿ, ಆನಂದ ಡಿ. ಪೂಜಾರಿ, ಚಂದ್ರಾಕ್ಷಿ ಪೂಜಾರಿ ಸೇರಿದಂತೆ ಅನೇಕ  ಸದಸ್ಯರು ಉಪಸ್ಥಿತರಿದ್ದರು.   

 ಚಿತ್ರ-ವರದಿ: ರೊನಿಡಾ ಮುಂಬಯಿ

Trending videos

Back to Top