ಮಹಾರಾಷ್ಟ್ರ ಕೊಂಕಣ್‌ ಅಸೋಸಿಯೇಶನ್‌ನಿಂದ ಮೊಂತಿಹಬ್ಬ

Team Udayavani, Sep 12, 2017, 2:08 PM IST

09-Mum03a.jpg

ಮುಂಬಯಿ: ಮಹಾರಾಷ್ಟ್ರ ಕೊಂಕಣ್‌ ಅಸೋಸಿಯೇಶನ್‌ ವತಿಯಿಂದ ಸೆ. 8ರಂದು ರಾತ್ರಿ ಅಂಧೇರಿ ಪಶ್ಚಿಮದ ಅಂಬೋಲಿಯ ಡಿವೈನ್‌ ಚೈಲ್ಡ್‌ ನರ್ಸರಿ ಸಭಾಗೃಹದಲ್ಲಿ 22ನೇ ವಾರ್ಷಿಕ ಕನ್ಯಾಮರಿಯಮ್ಮರ ಜನ್ಮೋತ್ಸವವು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು. ಪಾರ್ಕ್‌ಸೈಟ್‌ ಸೈಂಟ್‌ ಫ್ರಾನ್ಸಿಸ್‌ ಕ್ಸೇವಿಯರ್‌ ಚರ್ಚ್‌ನ  ಧರ್ಮಗುರು ರೆ| ಫಾ| ಹ್ಯೂಬರ್‌r ಗೋವಿಯಸ್‌ ಅರು ಮಾತೆ ಮೇರಿಯ ಆರಾಧನೆ ನೆರವೇರಿಸಿ ಹೊಸ ಭತ್ತದ ತೆನೆಗಳನ್ನು ಆಶೀರ್ವಚಿಸಿ ಪ್ರಕೃತಿಮಾತೆಯನ್ನು ಸ್ಮರಿಸಿ ದಿವ್ಯಪೂಜೆ ನೆರವೇರಿಸಿ ನೆರೆದ ಭಕ್ತರನ್ನು ಹರಸಿದರು.

ಪೂಜೆಯಲ್ಲಿ ರೋಕಿ ಡಿಕುನ್ಹಾ ಅವರು ಬೈಬಲ್‌ ಪಠಿಸಿದರು. ಮೆಟಿಲ್ಡಾ ರೋಡ್ರಿಗಸ್‌ ಪ್ರಾರ್ಥನೆಗೈದರು. ಪೂಜೆಯ ಆದಿಯಲ್ಲಿ ಪುಟಾಣಿಗಳು ಮತ್ತು ನೆರೆದ ಸದ್ಭಕ್ತರು ಅಲಂಕರಿತ ಮಾತೆ ಮರಿಯಮ್ಮರ ಪ್ರತಿಮೆಗೆ ಪುಷ್ಪವೃಷ್ಟಿಗೈದು ಭಕ್ತಿಪೂರ್ವಕವಾಗಿ ಪ್ರಾರ್ಥನೆ ಸಲ್ಲಿಸಿ ನಮಿಸಿದರು. ಐರಿನ್‌ ರೋಡ್ರಿಗಸ್‌, ಐಡಾ ಮೊಂತೆರೋ, ವಿಲ್ಡಾ ಫೆರ್ನಾಂಡಿಸ್‌ ಮತ್ತು ಬಳಗದಿಂದ ಭಕ್ತಿಗಾಯನ ನಡೆಯಿತು.

ಅತಿಥಿಗಳಾಗಿ ಬಾಲಿವುಡ್‌ನ‌ ಚಲನಚಿತ್ರ ನಿರ್ದೇಶಕ ಲಾರೆನ್ಸ್‌ ಡಿಸೋಜಾ, ರೀಟಾ ಲಾರೆನ್ಸ್‌, ಬಾಲಿವುಡ್‌ ಹಾಗೂ ಕೊಂಕಣಿ ಚಲನಚಿತ್ರ ನಿರ್ದೇಶಕ ಹ್ಯಾರಿ ಫೆರ್ನಾಂಡಿಸ್‌ ಬಾಕೂìರು ಕ್ರಿಶ್ಚಿಯನ್‌ ಛೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರೀಸ್‌ ಸಂಸ್ಥೆಯ ಸಂಸ್ಥಾಪಕ ಕಾರ್ಯಾಧ್ಯಕ್ಷ ವಿನ್ಸೆಂಟ್‌ ಮಥಾಯಸ್‌, ಕಾನೂನು ಸಮಿತಿಯ ಸಂಚಾಲಕ ನ್ಯಾಯವಾದಿ ಪಿಯುಸ್‌ ವಾಜ್‌, ರೆ| ಫಾ| ಹ್ಯೂಬರ್‌r ಗೋವಿಯಸ್‌,  ನ್ಯಾಯವಾದಿ ಜೆನೆವೀವ್‌ ಪಿ. ವಾಜ್‌, ಉದ್ಯಮಿಗಳಾದ ಪ್ರಮೀಳಾ  ವಿ. ಮಥಾಯಸ್‌, ಡಿವೈನ್‌ ಚೈಲ್ಡ್‌ ನರ್ಸರಿ ನಿರ್ದೇಶಕ ನೀಲ್‌ ಎನ್‌. ಡಿ ಸೋಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅತಿಥಿಗಳು ಅಸೋಸಿಯೇಶನ್‌ನ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಿ ಗೌರವಿಸಿದರು.

ನಾನು 1970ರಲ್ಲಿ ಮುಂಬಯಿ ಸೇರಿ ವೃತ್ತಿನಿರತನಾಗಿದ್ದರೂ ಮೊಂತಿ ಹಬ್ಬವನ್ನು ಮಾತ್ರ ತಪ್ಪದೇ ಆಚರಿಸುತ್ತಾ ತಾಯ್ನಾಡ ಪರಂಪರೆ ಬೆಳೆಸಿ ಬಂದಿದ್ದೇನೆ. ಈ ಹಬ್ಬದಿಂದ ಸಂಸ್ಕೃತಿ ಜೀವಂತವಾಗಿರಿಸಲು ಸಾಧ್ಯವಾಗಿದೆ. ಇದು ತಾಯ್ನಾಡಿನೊಂದಿಗೆ ಜನನಿದಾತೆ ಮತ್ತು ಮೂಲ ಸಂಸ್ಕೃತಿ ಪರಿಪಾಲಿಸಲು ಅನುಕೂಲವಾಗಿದೆ. ಕುಟುಂಬ, ಸಮುದಾಯ, ಇಷ್ಟ ಮಿತ್ರರನ್ನು ಒಗ್ಗೂಡಿಸುವಲ್ಲಿ ಈ ಹಬ್ಬದ ಪಾತ್ರ ಮಹತ್ತರದ್ದು. ಮೇರಿ ಮಾತೆ ಜನ್ಮೋತ್ಸವ ಪರಿ ಶುದ್ಧತೆ, ಸಾಮರಸ್ಯದ ಸಂಕೇತ ವಾಗಿದೆ. ಆದುದರಿಂದ ನಾವೂ ಕೂಡಾ ನಮ್ಮ ಮಕ್ಕಳಲ್ಲಿ ಇಂತಹ ಪಾವಿತ್ರÂತೆಯ ಸಂಭ್ರಮವನ್ನು ರೂಢಿಸಿ ಕೊಳ್ಳಲು ಪ್ರೇರೇಪಿಸಿದಾಗ ನಮ್ಮ ಜೀವನ ಸಾರ್ಥಕ
ವಾಗುವುದು ಎಂದು ಪಿಯುಸ್‌ ವಾಜ್‌ ಕರೆ ನೀಡಿದರು.

ಲಾರೆನ್ಸ್‌ ಡಿ’ಸೋಜಾ  ಮಾತನಾಡಿ ಸುಮಾರು ಅರ್ಧ ದಶಕದ ಬಳಿಕ ಇಂತಹ ಸದ್ಧರ್ಮಶೀಲ ಹಬ್ಬವನ್ನು ಆಚರಿಸುವ ಯೋಗ ಇಂದಿಲ್ಲಿ ನನ್ನ ಪಾಲಿಗೆ ಒದಗಿತು. ಬಾಲ್ಯದಲ್ಲೇ ತವರೂರನ್ನು ಬಿಟ್ಟು ಮುಂಬಯಿ ಸೇರಿದ್ದೆ. ಆದರೆ ಈ ಹಬ್ಬಕ್ಕಾಗಿ ನಾವು ಬಾಲ್ಯದಲ್ಲಿ ನಡೆಸುತ್ತಿದ್ದ ಪೂರ್ವಸಿದ್ಧತೆ ಇಂದಿಗೂ ಜೀವಂತವಾಗಿದೆ. ಇಂತಹ ಆಚರಣೆಯಿಂದ ಅಂತಃಶುದ್ಧಿಗೊಂಡು ಜೀವನ ಪಾವನವಾಗುವಂತಿದೆ ಎಂದರು.

ಪೂರ್ವಜರು ಪಾಲಿಸಿಕೊಂಡು ಬಂದಂತಹ ಸಂಸ್ಕೃತಿಯ ಉಳಿವು ನಮ್ಮ ಪರಮ  ಕರ್ತವ್ಯ ವಾಗಬೇಕು. ಇಂತಹ ಸಡಗರದತ್ತ ಇನ್ನಷ್ಟು ಉತ್ಸುಕರಾಗಬೇಕು. ವಿಶೇಷವಾಗಿ ಯುವಪೀಳಿಗೆಯಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕು ಎಂದು ವಿನ್ಸೆಂಟ್‌ ಮಥಾಯಸ್‌ ತಿಳಿಸಿದರು. ಹ್ಯಾರಿ ಫೆರ್ನಾಂಡಿಸಿ ಮಾತನಾಡಿ, ನಾನು ಬಹುತೇಕವಾಗಿ ಚಲನಚಿತ್ರಗಳಲ್ಲೇ ಪಳಗಿದವನು. ಬಹುಶಃ ಮುಂದಿನ ದಿನಗಳಲ್ಲಿ ನಮ್ಮ ಇಂತಹ ಸಂಸ್ಕೃತಿ ಬಿಂಬಿಸುವ ಚಿತ್ರಗಳ ಪ್ರಯತ್ನ ಮಾಡುತ್ತೇನೆ. ತಾವೆಲ್ಲರೂ ಇಂತಹ ಚಿತ್ರಗಳಲ್ಲಿ ಆಸಕ್ತಿ ತೋರಿಸುವ ಅಗತ್ಯವಿದೆ ಎಂದರು.

ಅಸೋಸಿಯೇಶನ್‌ನ ಸ‌ಂಚಾಲಕ ಲಿಯೋ ಫೆರ್ನಾಂಡಿಸ್‌ ಜೆರಿಮೆರಿ, ಪೂರ್ವ ವಲಯಾಧ್ಯಕ್ಷ ವಿನ್ಸೆಂಟ್‌ ಕಾಸ್ತೆಲಿನೋ, ಎಲಿಯಾಸ್‌ ಪಿಂಟೋ, ರಿತೇಶ್‌ ಕಾಸ್ತೆಲಿನೋ, ಜೋನ್‌ ರೋಡ್ರಿಗಸ್‌, ಸ್ಟೇನಿ ಡಾಯಸ್‌  ಅವರು ಅತಿಥಿಗಳನ್ನು ಪುಷ್ಪಗುತ್ಛವನ್ನಿತ್ತು ಗೌರವಿಸಿದರು. ಕಾರ್ಯಕ್ರಮದಲ್ಲಿ ವಿಶೇಷ ಆಮಂತ್ರಿತರಾಗಿ ಬೆನೆಡಿಕ್ಟಾ ರೆಬೆಲ್ಲೋ, ದಾನಿಗಳಾದ ಲ್ಯಾನ್ಸಿ ಡಿಸಿಲ್ವಾ ಮತ್ತು ಜೆಸ್ಸಿ ಡಿಸಿಲ್ವಾ, ವಿಲೆøಡ್‌ ರೆಬೆಲ್ಲೋ, ರೊವೆನಾ ರೆಬೆಲ್ಲೋ, ಲಾರೇನ್ಸ್‌ ಡಿ’ಸೋಜಾ ಕಮಾನಿ, ಸಿಪ್ರಿಯನ್‌ ಅಲುºರRರ್ಕ್‌,  ಸ್ಟೇನಿ ರೆಬೆಲ್ಲೋ ಕಲೀನಾ ಮತ್ತಿತರರು ಉಪಸ್ಥಿತರಿದ್ದರು.

ಅಸೋಸಿಯೇಶನ್‌ನ ಅಧ್ಯಕ್ಷೆ ಬೆನೆಡಿಕ್ಟಾ ಬಿ.ರೆಬೆಲ್ಲೋ ಸ್ವಾಗತಿಸಿದರು. ಸಿರಿಲ್‌ ಕಾಸ್ತೆಲಿನೋ ಕಾರ್ಯಕ್ರಮ ನಿರೂಪಿಸಿ ಹಬ್ಬದ ವಿಶೇಷತೆಯನ್ನು ವಿವರಿಸಿದರು. ಲಿಯೋ ಫೆರ್ನಾಂಡಿಸ್‌ ವಂದಿಸಿದ‌ರು. ಅಸೋಸಿಯೇಶನ್‌ನ  ಸದಸ್ಯರು ಸಂಗೀತ ಮತ್ತು ಮಹಿಳಾ ಸದಸ್ಯೆಯರು ನೃತ್ಯ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು. ಇದೇ ವೇಳೆ ಸಂಸ್ಥೆಯು ಅನಾಥಾಲಯದ ಮಕ್ಕಳಿಗೆ ಊಟ ನೀಡಿ ನಂತರ ನೆರೆದ ಜನತೆಗೆ ಸಾಂಪ್ರದಾಯಿಕ ಹೊಸ ಅಕ್ಕಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಮಕ್ಕಳಿಗೆ ಕಬ್ಬು ನೀಡಿ ವಾರ್ಷಿಕ ತೆನೆಹಬ್ಬವನ್ನು ಆಚರಿಸಲಾಯಿತು.

ಟಾಪ್ ನ್ಯೂಸ್

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.