CONNECT WITH US  

ಬಂಟರ ಸಂಘ ಉನ್ನತ ಶಿಕ್ಷಣ ಸಂಕುಲದಲ್ಲಿ ಗಣರಾಜ್ಯೋತ್ಸವ

ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಉನ್ನತ ಶಿಕ್ಷಣ ಸಂಸ್ಥೆಯ ವತಿಯಿಂದ 69 ನೇ ಗಣರಾಜ್ಯೋತ್ಸವ ಆಚರಣೆಯು ಜ. 26ರಂದು ಕುರ್ಲಾ ಪೂರ್ವದ ಬಂಟರ ಭವನದ ಸಮೀಪದಲ್ಲಿರುವ ಉನ್ನತ ಶಿಕ್ಷಣ ಸಂಕುಲದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.

ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮುಂಬಯಿ ವಿಶ್ವವಿದ್ಯಾಲಯ ಮಹಿಳಾ ಅಭಿವೃದ್ಧಿ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಡಾ| ಕ್ರಾಂತಿ ಜೇಜುರ್ಕರ್‌ ಅವರು ಉಪಸ್ಥಿತರಿದ್ದರು. ಗಣ್ಯರು ಧ್ವಜಾರೋಹಣಗೈದು ಧ್ವಜವಂದನೆ ಸ್ವೀಕರಿಸಿದರು.

ಸಂಘದ ಉಪಾಧ್ಯಕ್ಷ ಚಂದ್ರಹಾಸ್‌ ಕೆ. ಶೆಟ್ಟಿ, ಗೌರವ  ಪ್ರಧಾನ  ಕಾರ್ಯದರ್ಶಿ  ಸಿಎ ಸಂಜೀವ ಶೆಟ್ಟಿ,  ಗೌರವ  ಕೋಶಾಧಿಕಾರಿ ಪ್ರವೀಣ್‌ ಭೋಜ ಶೆಟ್ಟಿ, ಉನ್ನತ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಎನ್‌. ವಿವೇಕ್‌ ಶೆಟ್ಟಿ,  ಜೊತೆ ಕಾರ್ಯದರ್ಶಿ  ಮಹೇಶ್‌ ಎಸ್‌. ಶೆಟ್ಟಿ, ಜೊತೆ ಕೋಶಾಧಿಕಾರಿ ಗುಣಪಾಲ್‌ ಆರ್‌. ಶೆಟ್ಟಿ, ಐಕಳ, ಸಂಘದ  ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ  ರಂಜನಿ ಎಸ್‌. ಹೆಗ್ಡೆ, ಉನ್ನತ ಶಿಕ್ಷಣ ಸಂಕುಲದ ಉಪ ಕಾರ್ಯಾಧ್ಯಕ್ಷೆ ಮಮತಾ ಶೆಟ್ಟಿ, ಕಾರ್ಯದರ್ಶಿ ಭಾಸ್ಕರ ಶೆಟ್ಟಿ ಕಾರ್ನಾಡ್‌, ಕೋಶಾಧಿಕಾರಿ ಸಿಎ ರಮೇಶ್‌ ಶೆಟ್ಟಿ, ಯುವ ವಿಭಾಗದ  ಕಾರ್ಯಾಧ್ಯಕ‌Ò ಶರತ್‌ ವಿ. ಶೆಟ್ಟಿ , ಮಹಾದಾನಿ ಅಣ್ಣಯ್ಯ ಶೆಟ್ಟಿ, ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ವಿಠuಲ್‌ ಎಸ್‌. ಆಳ್ವ, ಸಿಟಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ನಲ್ಯಗುತ್ತು ಪ್ರಕಾಶ್‌ ಟಿ. ಶೆಟ್ಟಿ, ನೂತನ ಶಿಕ್ಷಣ ಯೋಜನೆಯ ಕೋಶಾಧಿಕಾರಿ ಸಿಎ ಹರೀಶ್‌ ಹೆಗ್ಡೆ, ಪಿ. ಧನಂಜಯ ಶೆಟ್ಟಿ, ರತ್ನಾ ಶೆಟ್ಟಿ, ಸುಂದರ್‌ ಶೆಟ್ಟಿ, ಡಾ| ಕೃಷ್ಣ ಶೆಟ್ಟಿ ಹಾಗೂ ಉನ್ನತ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರು, ಶಿಕ್ಷಕವೃಂದದವರು, ಶಿಕ್ಷಕೇತರ ಸಿಬಂದಿ, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.


Trending videos

Back to Top