ಮುಂಬಯಿ ಭವಾನಿ ಫೌಂಡೇಶ್‌: ಶಾಲೆಗಳಿಗೆ ಕಂಪ್ಯೂಟರ್‌ ವಿತರಣೆ

Team Udayavani, Mar 17, 2018, 3:12 PM IST

258.jpg

ರಾಯಘಡ್‌: ಇದ್ದವರು ಇಲ್ಲದವರಿಗೆ ಸಹೃದಯಿಗಳಾಗಿ ಮನಸಾರೆ ನೀಡಿ ಬಾಳುವುದು ಬುದ್ಧಿಜೀವಿ ಮನುಷ್ಯನ ಪರಮ ಧರ್ಮ. ಎರಡೂ ಹಸ್ತಂಗಳಿಗೆ ದಾನವೇ ಭೂಷಣ ಎನ್ನುವ ದಾಸರ ನುಡಿಯಂತೆ ಜೀವನದಲ್ಲಿ ಯಶಸ್ಸು ಅಥವಾ ಕೀರ್ತಿ ಪಡೆಯುವ ಸಾಧನೆಯಲ್ಲಿ ದಾನ ಧರ್ಮವೂ ಶ್ರೇಷ್ಠ ಸ್ಥಾನವನ್ನು  ಹೊಂದಿದೆ. ಗಳಿಕೆಯ ಒಂದು ಭಾಗ ಬಡ ಜನತೆಗೆ ನೀಡಿದಾಗ ನಮಗೂ ಉತ್ತಮ ಆಯುರಾರೋಗ್ಯ ಪ್ರಾಪ್ತಿಯಾಗಿ ಬದುಕು ನೆಮ್ಮದಿಗೊಳ್ಳುತ್ತದೆ. ಆದರೆ ಸ್ವಾರ್ಥಕ್ಕಾಗಿ ಇವನ್ನೆಲ್ಲಾ ಮರೆಯುವ ಪ್ರಸಕ್ತ ಮನುಕುಲ ದಾನ ಧರ್ಮದ ಬಗ್ಗೆ ಜಾಗೃತವಾಗಬೇಕು. ಪರಮಾತ್ಮನು ತನ್ನ ಕೃಪಾದೃಷ್ಟಿಯಿಂದ  ಸಿರಿ ಸಂಪತ್ತು ಕರುಣಿಸಿರುವಾಗ ನಾವೂ ಕೆರೆಯ ನೀರು ಕೆರೆಗೆ ಚೆಲ್ಲಿ ಎನ್ನುವಂತೆ ದಾನಿಗಳಾಗಿ ಪರರ ಜೀವನಕ್ಕೆ ದಯಾಳುತನವನ್ನು  ತೋರಬೇಕು. ಆಗ ಮನುಜ ಜೀವನ ಸಾರ್ಥಕ ಆಗುವುದು ಎಂದು ಭವಾನಿ ಫೌಂಡೇಶನ್‌ ಮುಂಬಯಿ ಇದರ ಸಂಸ್ಥಾಪಕಾಧ್ಯಕ್ಷ‌ ದಡªಂಗಡಿ ಚೆಲ್ಲಡ್ಕ ಕುಸುಮೋದ‌ರ ಡಿ. ಶೆಟ್ಟಿ (ಕೆ. ಡಿ. ಶೆಟ್ಟಿ) ಇವರು ನುಡಿದರು.

ಮಾ. 15 ರಂದು ಪೂರ್ವಾಹ್ನ ಕಾಲಾಪುರ ತಾಲೂಕಿನ ಭಿಲವಲೆಯ ಠಾಕೂರ್‌ವಾಡಿ ಜಿಲ್ಲಾ ಪರಿಷದ್‌ ಪ್ರಾಥಮಿಕ ಶಾಲೆ ಮತ್ತು ಸ್ಥಾನೀಯ ಪಿರ್ಕಟ್‌ವಾಡಿ ಶಾಲೆಗೆ ನೂತನ ಕಂಪ್ಯೂಟರ್‌ಗಳನ್ನು ಭವಾನಿ ಫೌಂಡೇಶನ್‌ ವತಿಯಿಂದ‌ ವಿತರಿಸಿ ಮಾತನಾಡಿದ ಇವರು, ಬಡತನವನ್ನು ಅರಿತು ದಾನ ಮಾಡಿದರೆ ಪರಮಾತ್ಮನು ಸಂತೃಪ್ತನಾಗಿ ದಾನಿಗೆ ಅದರ ಬಹುಪಾಲು ಸಂಪತ್ತು ಮತ್ತು ಆರೋಗ್ಯವನ್ನು ದೇವರು ಕರುಣಿಸುತ್ತಾನೆ. ಅದೂ ನಿರಪೇಕ್ಷ ಮನೋಬುದ್ಧಿಯಿಂದ ಏನಾನ್ನದರೂ ಪರರಿಗೆ ನೀಡಿದಾಗ ಮಾತ್ರ ಫಲಪ್ರದವಾಗುವುದು ಎಂದು ಜನನಿದಾತೆ ಸದಾ ತನಗೆ ತಿಳಿಸುತ್ತಿದ್ದನ್ನು ಮತ್ತು ತನ್ನ ಬಾಲ್ಯ, ವಿದ್ಯಾರ್ಥಿ ಜೀವನವನ್ನು ಮೆಲುಕು ಹಾಕಿದರು. ಇಂತಹ ಜೀವನ ಪರಸ್ಪರ ಅನ್ಯೋನ್ಯತಾ ಬದುಕಿಗೂ ಪೂರಕವಾಗಿದೆ. ನಾವು ಗಳಿಸಿ ಕೂಡಿಟ್ಟ ಹಣ, ಸಂಪತ್ತನ್ನು ಕಳ್ಳರು ಕದಿಯಬಹುದು. ಆದರೆ ಗಳಿಕೆಯ ಭಾಗವನ್ನು ಶಿಕ್ಷಣ ರೂಪವಾಗಿ ವ್ಯಯಿಸಿದರೆ ಅದು ಋಣವಾಗಿ ಉಳಿಯುತ್ತದೆ. ಶಿಕ್ಷಣವನ್ನು ಯಾರೂ ಕದಿಯಲಾರರು. ಇದೊಂದು ನಮ್ಮ ಪಾಲಿಗೆ ಸೇವಾ ಅವಕಾಶವಾಗಿದೆ. ಈ ಮೂಲಕ ನಮ್ಮ ಕರ್ಮಭೂಮಿ ಮಹಾರಾಷ್ಟ್ರದ ಮಣ್ಣಿನ ಋಣ ತೀರಿರುವ ಸುಯೋಗ ಲಭಿಸಿದೆ. ಸಹೃದಯಿಗಳ ಫಲಾನುಭವ ಪಡೆದು ನಿಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ನುಡಿದರು.

ಈ ಸಂದರ್ಭದಲ್ಲಿ  ಸಕಾಲ್‌ ಮೀಡಿಯಾ ಸಮೂಹದ ಉಪ ಮಹಾ ಪ್ರಬಂಧಕ ದಿನೇಶ್‌ ಎಸ್‌. ಶೆಟ್ಟಿ ಪಡುಬಿದ್ರೆ, ಭವಾನಿ ಫೌಂಡೇಶನ್‌ ಮುಂಬಯಿ ಇದರ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಪಂಡಿತ್‌ ನ‌ವೀನ್‌ಚ‌ಂದ್ರ ಆರ್‌. ಸನೀಲ್‌, ನವೀನ್‌ ಎಸ್‌. ಶೆಟ್ಟಿ, ಕರ್ನೂರು ಮೋಹನ್‌ ರೈ, ಭಿಲವಲೆ ಶಾಲಾ ಮುಖ್ಯ ಶಿಕ್ಷಕರುಗಳಾದ ತಸೊÏಡೆ ಪರ್ಸುರಾಮ್‌, ಶಶಿಕಾಂತ್‌ ಠಾಕ್ರೆ, ಫೌಂಡೇಶನ್‌ನ ಮಾತೃ ಸಂಸ್ಥೆ ಭವಾನಿ ಶಿಪ್ಪಿಂಗ್‌ ಸರ್ವೀಸಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ನ‌ ರೋನಾಲ್ಡ್‌ ಥೋಮಸ್‌, ಪ್ರಣೀಲ್‌ ವಿವಾಲೆ, ಶೇಖರ್‌ ನಾಡರ್‌, ಅಜಿತ್‌ ದಾಸ್‌, ಪತ್ರಕರ್ತ ಅಶೋಕ್‌ ಗೋರ್ಡೆ, ಶಾಲಾ ಪ್ರಮುಖ ಜಿತೇಂದ್ರ ಠಾಕೂರ್‌,  ಸ್ಥಾನೀಯ ಮುಂದಾಳುಗಳಾದ ಜಾನು ವಾಗ¾ರೆ, ಮಂಗಳಾ ಪೊಕಾÛ, ಚಾಂಗೂ ಚೌಧುರಿ, ಪಂಕಜ್‌ ಲಬೆx, ಧನಾಜೆ ಲಬೆx, ಠಾಕೂರ್‌ವಾಡಿ ಶಾಲಾ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷೆ ಅನಿತಾ ಸುರೇಶ್‌,  ಅಕೂರ್‌ ಗುರೂಜೀ ಉಪಸ್ಥಿತರಿದ್ದು ಭವಾನಿ ಸಂಸ್ಥೆಯ ಸೇವಾ ಕಾರ್ಯಕ್ರಮಗಳನ್ನು ಶ್ಲಾಘಿಸಿದರು.

ಶಶಿಕಾಂತ್‌ ಠಾಕ್ರೆ ಸ್ವಾಗತಿಸಿದರು. ಸ್ಥಾನೀಯ ಸಂಪನ್ಮೂಲ ವ್ಯಕ್ತಿ ಮುರಳೀಧರ್‌ ಪಾಲ್ವೆ ಪ್ರಸ್ತಾವನೆಗೈದರು. ಶಿಕ್ಷಕ ತಸೊÏಡೆ ಪರ್ಸುರಾಮ್‌ ಮತ್ತು ಸಹ ಶಿಕ್ಷಕ ಬಬನ್‌ದಾವ್‌ ಭಟ್‌ ಇವರು  ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಸಹಾಯಾಕ ಅಧ್ಯಾಪಕ ಸಂಜಯ್‌ ಚವ್ಹಾಣ್‌ ವಂದಿಸಿದರು.

ಭವಾನಿ ಫೌಂಡೇಶನ್‌ನ ನಿಯೋಗವು ಅಪರಾಹ್ನ ಮೊರಬೆ ಅಣೆಕಟ್ಟಿನ  ಕೊನೆ ಭಾಗವಾದ ಮಥೇರನ್‌  ಹಿಂಭಾಗದ ಬುಡಭಾಗದ ದಟ್ಟ ಅರಣ್ಯಪ್ರದೇಶದೊಳಗಿನ ಉಂಬರೆ°àವಾಡಿ, ಪಿಕರ್ಟ್‌ವಾಡಿ ಮತ್ತು ಅರ್ಕಸ್‌ವಾಡಿ ಗ್ರಾಮಗಳಲ್ಲಿ ನೆಲೆಸುತ್ತಿರುವ ಆದಿವಾಸಿ, ಬುಡಕಟ್ಟು ಜನರನ್ನು ಭೇಟಿಯಾಗಿ  ಅವರ ದಿನಚರಿ, ಜೀವನ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆಯಿತು. ಕನಿಷ್ಠ ಮೂಲ ಸೌಲತ್ತುಗಳಿಲ್ಲದೆ ಜೀವನ ನಡೆಸುವ ಸುಮಾರು 500 ಕ್ಕೂ ಮಿಕ್ಕಿದ ಆದಿವಾಸಿ ಜನಾಂಗದ  ಜೀವನಶೈಲಿ, ಜಿವನೋಪಾಯದ ಬಗ್ಗೆ ತಿಳಿದ ಕೆ. ಡಿ. ಶೆಟ್ಟಿ ಅವರು ಜೀವನಾಧಾರಕ್ಕೆ ಶೀಘ್ರವೇ ಛತ್ರವೊಂದನ್ನು ಕಟ್ಟಿಸಿ ಕೊಡುವುದಾಗಿ ಭರವಸೆ ನೀಡಿದರು.  

ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.