CONNECT WITH US  

ಹೆಗ್ಗಡೆ ಸೇವಾ ಸಂಘ ಮುಂಬಯಿ :ಹನುಮ ಜಯಂತಿ ಆಚರಣೆ

ನವಿಮುಂಬಯಿ: ಹೆಗ್ಗಡೆ ಸೇವಾ ಸಂಘ ಮುಂಬಯಿ ಇದರ ವತಿಯಿಂದ ಶ್ರೀ ಹನುಮಾನ್‌ ಜಯಂತಿ ಮಹೋತ್ಸವವು ಮಾ. 31 ರಂದು ಅಪರಾಹ್ನ 2.30 ರಿಂದ ಐರೋಲಿಯ ಸೆಕ್ಟರ್‌ 15 ರಲ್ಲಿರುವ ಹೆಗ್ಗಡೆ ಭವನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಜರಗಿತು.

ಅಪರಾಹ್ನ 2.30ರಿಂದ ದೇವತಾ ಪ್ರಾರ್ಥನೆ ಮತ್ತು ಕಲಶ ಪ್ರತಿಷ್ಠೆ, ಅಪರಾಹ್ನ 3 ರಿಂದ ಭಜನ ಕಾರ್ಯಕ್ರಮ, ಶ್ರೀ ಶನೀಶ್ವರ ಭಜನ ಮಂಡಳಿ ನೆರೂಲ್‌ ಇವರಿಂದ ಭಜನ ಕಾರ್ಯಕ್ರಮ ನಡೆಯಿತು. ಅಪರಾಹ್ನ 4.30ರಿಂದ ಬನ್ನಂಜೆ ಶ್ರೀ ರಾಘವೇಂದ್ರ ತೀರ್ಥ ಸ್ವಾಮೀಜಿಗಳ ನೇತೃತ್ವದಲ್ಲಿ ವಿಶ್ವಶಾಂತಿ ಮತ್ತು ಶನಿದೋಷ ಪರಿಹಾರ ಹಾಗೂ ಸಕಲ ಇಷ್ಟಾರ್ಥ ಸಿದ್ದಿಗಾಗಿ ಶ್ರೀ ಶನಿ ದೇವರಿಗೆ ಸಾಮೂಹಿಕ ಎಳ್ಳುಗಂಟು ದೀಪೋತ್ಸವವು ವಿಜೃಂಭಣೆಯಿಂದ ಆಯೋಜಿಸಲಾಗಿತ್ತು.

ಸಂಜೆ 5ರಿಂದ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿತರಣೆಯನ್ನು ಆಯೋಜಿ ಸಲಾಗಿತ್ತು. ಸಮಾಜ ಬಾಂಧವರು ಸೇರಿದಂತೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತೀರ್ಥಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರ ರಾದರು.  ಸಂಜೆ 5ರಿಂದ ಭಕ್ತ ಸುಧಾಮ ಹರಿ ಕಥಾಮ್ರತವು ವಿದ್ವಾನ್‌ ಕೈರಬೆಟ್ಟು ಶ್ರೀ ವಿಶ್ವನಾಥ್‌ ಭಟ್‌ ಬಳಗದವರಿಂದ ನಡೆದು ಭಕ್ತಾಭಿಮಾನಿಗಳ ಪ್ರಶಂಸೆಗೆ ಪಾತ್ರವಾಯಿತು. ಹೆಗ್ಗಡೆ ಸೇವಾ ಸಂಘ ಮುಂಬಯಿ ಅಧ್ಯಕ್ಷ ವಿಜಯ ಬಿ. ಹೆಗ್ಡೆ, ಗೌರವಾಧ್ಯಕ್ಷ ಸಂಜೀವ ಪಿ. ಹೆಗ್ಡೆ, ಗೌರವ ಪ್ರಧಾನ ಕಾರ್ಯದರ್ಶಿ ಶಂಕರ್‌ ಆರ್‌. ಶೆಟ್ಟಿ, ಕೋಶಾಧಿಕಾರಿ ರಮೇಶ್‌ ಎಂ. ಹೆಗ್ಡೆ, ಉಪಾಧ್ಯಕ್ಷ ಸುರೇಶ್‌ ಹೆಗ್ಡೆ, ಜತೆ ಕಾರ್ಯದರ್ಶಿ ರವಿ ಎಸ್‌. ಹೆಗ್ಡೆ, ಜತೆ ಕೋಶಾಧಿಕಾರಿ ಚಂದ್ರಶೇಖರ್‌ ಬಿ. ಹೆಗ್ಡೆ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಆಡಳಿತ ಮಂಡಳಿಯ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗದ ಪದಾಧಿಕಾರಿಗಳು ಹಾಗೂ ಸದಸ್ಯರ ನೇತೃತ್ವದಲ್ಲಿ ಈ ಧಾರ್ಮಿಕ ಕಾರ್ಯಕ್ರಮವು ಜರಗಿತು. ಮುಂಬಯಿ, ನವಿ ಮುಂಬಯಿ ಹಾಗೂ ಇತರ ಉಪನಗರಗಳ ವಿವಿಧ ತುಳು-ಕನ್ನಡ ಹಾಗೂ ಜಾತೀಯ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಭಕ್ತಾಭಿಮಾನಿಗಳು, ಹಿತೈಷಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ಸ್ಥಳೀಯ ಉದ್ಯಮಿಗಳು, ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಪ್ರಸಾದ ಸ್ವೀಕ ರಿಸಿದರು.  ರಾತ್ರಿ 8.30ರಿಂದ ರಶ್ಮಿ ಕ್ಯಾಟರರ್ನ ಐರೋಲಿಯ ಇವರಿಂದ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು. 

ಚಿತ್ರ-ವರದಿ : ಸುಭಾಷ್‌ ಶಿರಿಯಾ

Trending videos

Back to Top