CONNECT WITH US  

ಮುಂಬಯಿ ವಿವಿ ಕನ್ನಡ ವಿಭಾಗದಲ್ಲಿ ಪದವಿ ಪ್ರದಾನ, ಸಮ್ಮಾನ

ಮುಂಬಯಿ: ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ವತಿಯಿಂದ ಜಾನಪದ ಸಂಭ್ರಮ ಕಾರ್ಯಕ್ರಮವು ಎ. 7 ರಂದು ಸಾಂತಾಕ್ರೂಜ್‌ ಪೂರ್ವದ ಕಲೀನಾ ಕ್ಯಾಂಪಸ್‌ನ ವಿದ್ಯಾನಗರಿ ಅಲ್ಲಿನ ಕವಿವರ್ಯ ಡಾ| ಕುಸುಮಾಗ್ರಜ ಮರಾಠಿ ಭಾಷಾ ಭವನದ ಸಭಾಂಗಣದಲ್ಲಿ ನಡೆಯಿತು.

ಇದೇ ಸಂದರ್ಭದಲ್ಲಿ ನಡೆದ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಶ್ಯಾಮಲಾ ಪ್ರಕಾಶ್‌ ಅವರಿಗೆ ಪಿಎಚ್‌ಡಿ,  ತೆರೆ ಸರೋಜಿನಿ ಭಾಸ್ಕರ್‌, ಎಚ್‌. ಪಿ. ಶೀಲಾ  ಅವರಿಗೆ ಎಂ. ಫಿಲ್‌, ಜ್ಯೋತಿಶ್ರೀ  ಬೆಂಗಳೂರು, ಅನಿತಾ ಶೆಟ್ಟಿ, ಕುಮುದಾ ಆಳ್ವ, ಹೇಮಲತಾ ಎಸ್‌. ಅಮೀನ್‌ ಇವರಿಗೆ ಎಂಎ ಪದವಿ ಪ್ರದಾನ ಮಾಡಲಾಯಿತು.

ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್‌. ಶೆಟ್ಟಿ ಅವರ ಪಿಎಚ್‌ಡಿ ಮಹಾ ಪ್ರಬಂಧ "ಮುಂಬಯಿ  ಕನ್ನಡಿಗರ ಸಿದ್ಧಿ ಸಾಧನೆಗಳು' ಕೃತಿಯನ್ನು ಸಮಾರಂಭದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಬಿಡುಗಡೆಗೊಳಿಸಲಾಗಿದ್ದು, ಕೃತಿಕಾರರಾದ ಡಾ| ಪೂರ್ಣಿಮಾ ಎಸ್‌. ಶೆಟ್ಟಿ ಮತ್ತು ಸುಧಾಕರ ಶೆಟ್ಟಿ ದಂಪತಿಯನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು.

ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ. ಎನ್‌. ಉಪಾಧ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ವೋತ್ಛ ನ್ಯಾಯಲಯದ ನಿವೃತ್ತ ನ್ಯಾಯಾಧೀಶ ಜಸ್ಟೀಸ್‌ ಬಿ. ಎನ್‌. ಶ್ರೀಕೃಷ್ಣ, ನಿವೃತ್ತ ಪೊಲೀಸ್‌ ಅಧಿಕಾರಿ ಪ್ರಕಾಶ್‌ ಬಿ.ಭಂಡಾರಿ, ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಆರ್ಥಿಕ ತಜ್ಞ ಡಾ| ಆರ್‌. ಕೆ. ಶೆಟ್ಟಿ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಸಮಾಜ ಸೇವಕ ಮುದ್ರಾಡಿ ದಿವಾಕರ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕರ್ನಾಟಕ ಸಂಘ ಮುಂಬಯಿ ಗೌರವ  ಪ್ರಧಾನ  ಕಾರ್ಯದರ್ಶಿ ಡಾ|  ಭರತ್‌ಕುಮಾರ್‌ ಪೊಲಿಪು, ಕನ್ನಡ ಸೇನಾನಿ, ಎಸ್‌. ಕೆ. ಸುಂದರ್‌ ಮತ್ತು ಜಯರಾಮ್‌ ಮೂಲ್ಯ, ಸುಶೀಲಾ ಎಸ್‌. ದೇವಾಡಿಗ. ನಳಿನಾ ಪ್ರಸಾದ್‌, ಸೋಮಶೇಖರ ಮಾಲ್ತಿ ಪಾಟೀಲ್‌ ಮೊದಲಾದವರು ಉಪಸ್ಥಿತರಿದ್ದು ಸಹಕರಿಸಿದರು.


Trending videos

Back to Top