ಕಾರಿಗೆ ಅಪ್ಪಳಿಸಿತು ಟ್ರಕ್ ಮೇಲಿದ್ದ ಮಂಜುಗಡ್ಡೆ
Team Udayavani, Apr 20, 2018, 4:18 AM IST
ವಾಹನಗಳಲ್ಲಿ ಸಂಚಾರ ಮಾಡುತ್ತಿರುವ ಸಂದರ್ಭದಲ್ಲಿ ಏಕಾಏಕಿ ಅಪಘಾತಗಳು ಸಂಭವಿಸುತ್ತವೆ. ಎಲ್ಲಿಂದಲೋ ಹಾರಿ ಬಂದ ಗಟ್ಟಿಯಾದ ವಸ್ತು ವಾಹನಕ್ಕೆ ಅಪ್ಪಳಿಸುತ್ತವೆ. ಪೂರ್ವ ಇಂಗ್ಲೆಂಡ್ನ ಎಸೆಕ್ಸ್ನಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಟಾಡ್ ಹೆರ್ರಿಂಗ್ಟನ್ ಎಂಬುವರು ತಮ್ಮ ಕಾರಿನಲ್ಲಿ ಕುಟುಂಬ ಸದಸ್ಯರ ಜತೆಗೆ ತೆರಳುತ್ತಿದ್ದರು. ಪ್ರಯಾಣದ ಒಂದು ಹಂತದಲ್ಲಿ ಎದುರಿನಿಂದ ಬರುತ್ತಿದ್ದ ಟ್ರಕ್ ಮೇಲಿಂದ ಮಂಜುಗಡ್ಡೆಯ ತುಂಡು ಕಾರ್ನ ಗಾಜಿನ ಮೇಲೆ ಬಿದ್ದಿತು. ಅದರ ಪರಿಣಾಮವಾಗಿ ಗಾಜು ಪುಡಿ ಪುಡಿಯಾಯಿತು.
ಈ ಘಟನೆ ವಾಹನದಲ್ಲಿದ್ದ ಕ್ಯಾಮರ ಎಳೆ ಎಳೆಯಾಗಿ ಸೆರೆ ಹಿಡಿದಿದೆ. ಹೆರ್ರಿಂಗ್ಟನ್ರ ಪತ್ನಿ ಎರಿನ್ ಈ ವಿಡಿಯೋವನ್ನು ಫೇಸ್ಬುಕ್ಗೆ ಅಪ್ಲೋಡ್ ಮಾಡಿದ್ದಾರೆ. ಜತೆಗೆ ಪೂರ್ವ ಇಂಗ್ಲೆಂಡ್ನಲ್ಲಿ ಟಿವಿ ವಾಹಿನಿಗಳಲ್ಲಿ ಸುದ್ದಿಯಾಗಿ ಪ್ರಸಾರವೂ ಆಗಿದೆ. ನಾನು ಹೋಗುತ್ತಿರುವಾಗಲೇ ಇಂಥ ಘಟನೆ ನಡೆದಿದೆ ಎಂದು ತಿಳಿದು ಆಶ್ಚರ್ಯವಾಗುತ್ತಿದೆ. ಈ ದೃಶ್ಯ ಟ್ರಕ್ನ ಮಾಲೀಕನನ್ನು ಕಂಡುಹಿಡಿಯಲು ನೆರವಾಗಿದೆ ಎಂದು ಟಾಡ್ ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ