ಮತದಾನ ಓಕೆ…ಹೋಗುವುದು ಹೇಗೆ…?


Team Udayavani, May 11, 2018, 2:45 PM IST

Train_B.jpg

ಮುಂಬಯಿ: ಕರ್ನಾಟಕ ವಿಧಾನ ಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿರುವ ಮಧ್ಯೆ ನಗರ-ಉಪನಗರಗಳ  ತುಳು-ಕನ್ನಡಿಗರು ಮತದಾನ ಮಾಡಲು ಊರಿಗೆ ತೆರಳುವ ಹುಮ್ಮಸ್ಸಿನಲ್ಲಿದ್ದರೆ,  ಇನ್ನೊಂದೆಡೆ ರೈಲು ಟಿಕೆಟ್‌ ಸಿಗದೆ ಮತ್ತು ದುಬಾರಿ ಟಿಕೆಟ್‌ ದರದಿಂದ ಕಂಗಾಲಾಗಿ  ಹುಟ್ಟೂರಿನ  ಮತದಾನದಿಂದ ದೂರ ಉಳಿಯುವ  ಅಲೋಚನೆಯಲ್ಲಿದ್ದಾರೆ.

ನಗರದಲ್ಲಿ ಸುಮಾರು 25 ಲಕ್ಷಕ್ಕೂ ಅಧಿಕ ತುಳು-ಕನ್ನಡಿಗರು ನೆಲೆಸಿದ್ದು, ಪ್ರತೀ ಬಾರಿ ಕರ್ನಾಟಕ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಮುಂಬಯಿ ತುಳು-ಕನ್ನಡಿಗರ ಯೋಗದಾನ ಮಹತ್ತರವಾಗಿದೆ. ಈಗಾಗಲೇ ಸುಮಾರು ಶೇ. 50 ರಷ್ಟು ತುಳು-ಕನ್ನಡಿಗರು ಊರಿನ ಕಡೆಗೆ ಮುಖಮಾಡಿದ್ದು, ಇನ್ನುಳಿದ ಸುಮಾರು  ಶೇ. 25 ರಷ್ಟು ಮಂದಿ ಮತದಾನ ಮಾಡಲು ಊರಿಗೆ ತೆರಳಲು ಟಿಕೆಟ್‌ ಸಿಗದೆ ಮತ್ತು ದುಬಾರಿ ಟಿಕೆಟ್‌ ದರದಿಂದ ಮತದಾನದಿಂದ ವಂಚಿತರಾಗುವ ಭೀತಿಯಲ್ಲಿದ್ದಾರೆ.

ರೈಲು ಟಿಕೆಟ್‌ ಖಚಿತವಾಗುತ್ತಿಲ್ಲ
ಉಡುಪಿ-ದಕ್ಷಿಣ ಕನ್ನಡ ಈ 2 ಜಿಲ್ಲೆಯವರು ಮತ್ಸéಗಂಧ ರೈಲನ್ನು  ಅವಲಂಬಿಸಿದ್ದು, ಕರ್ನಾಟಕ ವಿಧಾನ ಸಭಾ ಚುನಾವಣಾ ದಿನಾಂಕ ನಿಗದಿಯಾದ ದಿನದಿಂದ ಹೆಚ್ಚಿನವರು ರೈಲಿನಲ್ಲಿ ಟಿಕೆಟ್‌ ಬುಕ್‌ ಮಾಡಿದ್ದರೂ ಕೂಡಾ, ಅದು ವೇಟಿಂಗ್‌ ಲಿಸ್ಟ್‌ ನಲ್ಲಿದ್ದು, ಕನ್‌ಫರ್ಮ್ ಆಗದೆ ಹಲವು ಹಾಗೆಯೇ ಇದೆೆ. ಹಲವು ಮಂದಿ ತುಳು-ಕನ್ನಡಿಗರು ಗುರುವಾರ ಟಿಕೆಟ್‌ ಕನ್‌ಫರ್ಮ್ ಆಗದೆ ಮತದಾನದಿಂದ ದೂರ ಉಳಿಯಲು ಮುಂದಾಗಿದ್ದಾರೆ. ವಿಶೇಷವೆಂದರೆ ಗುರುವಾರದ ಆರ್‌ಎಸಿ 14, 15, 16, 17  ಸಂಖ್ಯೆಯಲ್ಲಿದ್ದ ಟಿಕೆಟ್‌ಗಳೂ ಕೂಡಾ ಕನ್‌ಫರ್ಮ್ ಆಗದಿರುವುದು ವಿಪರ್ಯಾಸವಾಗಿದೆ.

ತುಂಬಿ-ತುಳುಕುತ್ತಿರುವ ಜನರಲ್‌ ಬೋಗಿ
ರೈಲು ಟಿಕೆಟ್‌ ಕನ್‌ಫರ್ಮ್ ಆಗದಿದ್ದರೂ ಪರವಾಗಿಲ್ಲ. ಜನರಲ್‌ ಬೋಗಿಗಳಲ್ಲಿ ಹೋಗೊಣ ಎಂದರೂ ಅದು ಸಾಧ್ಯವಾಗುತ್ತಿಲ್ಲ. ಗುರುವಾರ ಮತ್ಸÂಗಂಧ ಹಾಗೂ ಮಂಗಳೂರು ಎಕ್ಸ್‌ಪ್ರೆಸ್‌ ರೈಲುಗಳ ಜನರಲ್‌ ಬೋಗಿಗಳು ತೆರಳುವ ನಿಲ್ದಾಣದಲ್ಲೇ ತುಂಬಿ ತುಳುಕಿವೆ. ನೂರಾರು ಮಂದಿ ಈ ದೃಶ್ಯ ಕಂಡು ವಾಪಸಾದ ಪ್ರಸಂಗ  ನಡೆದಿದೆೆ.

ಮತದಾನಕ್ಕೆ ಹೋಗಲು ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಿದ್ದಾರೆಯೇ…?
ಕಳೆದ ಎರಡು-ಮೂರು ದಿನಗಳಿಂದ ಹಲವು ಮಂದಿ ತುಳು-ಕನ್ನಡಿಗರು ಮತದಾನಕ್ಕೆ ಹೋಗಲು ವಿಶೇಷ ಬಸ್‌ನ ವ್ಯವಸ್ಥೆ ಇದೆಯೇ ಎಂದು ಫೋನಾಯಿಸಿ ಪ್ರಶ್ನಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿರುವ ತುಳು-ಕನ್ನಡಿಗರಿಗೆ ಉಡುಪಿ-ದಕ್ಷಿಣ ಕನ್ನಡಕ್ಕೆ ಸಂಬಂಧಪಟ್ಟ ಆಯಾಯ ಕ್ಷೇತ್ರಗಳ ಅಭ್ಯರ್ಥಿಗಳು ಮತದಾನ ಮಾಡಲು ಬಸ್‌ನ ವ್ಯವಸ್ಥೆಯನ್ನು ಆಯೋಜಿಸುತ್ತಿದ್ದಾರಂತೆ,  ಅದೇ ರೀತಿ ಮುಂಬಯಿಗರಿಗೆ ಅಂತಹ ಸೌಲಭ್ಯಗಳು ಉಂಟೇ ಎಂದು ಇಲ್ಲಿನ ತುಳು-ಕನ್ನಡಿಗರು ಪತ್ರಿಕಾ ಕಚೇರಿಗೆ ಕರೆ ಮಾಡಿ ಪ್ರಶ್ನಿಸುತ್ತಿದ್ದಾರೆ.

ಅಂತೆ-ಕಂತೆಗಳ ಕತೆಯಾಗುತ್ತಿದೆ
ಇನ್ನೂ ಕೆಲವರು ಊರಿಗೆ ಮತದಾನಕ್ಕಾಗಿ ವಿಶೇಷ ಬಸ್‌ಗಳ ವ್ಯವಸ್ಥೆಯನ್ನು ಮಾಡಿದ್ದಾರೆ. ಅದು ಎಲ್ಲಿಂದ ಮತ್ತು ಯಾವಾಗ ತೆರಳುತ್ತದೆ ಎಂಬುವುದರ ಅರಿವಿಲ್ಲ…! ನಿಮಗೇನಾದರೂ ಗೊತ್ತಿದೆಯೇ ಎಂದು ಪ್ರಶ್ನಿಸುತ್ತಿದ್ದಾರೆ. 
ವಿಶೇಷ ಬಸ್‌ಗಳ ವ್ಯವಸ್ಥೆ ಉಡುಪಿ-ದಕ್ಷಿಣ ಕನ್ನಡದವರಿಗೆ ಮಾಡಲಾಗಿದೆಯೇ ಅಥವಾ ಇನ್ನಿತರೆಡೆಗಳಿಗೆ ಮಾಡಲಾಗಿದೆಯೇ ಎಂಬುವುದು ಕೂಡಾ ಯಕ್ಷಪ್ರಶ್ನೆಯಾಗಿದೆ.

ದರ ಏರಿಕೆ
ಬೇಸಗೆ ರಜೆಯ ಸಂದರ್ಭದಲ್ಲಿ ಅಣಬೆಯಂತೆ  ತಲೆ ಎತ್ತುವ ಖಾಸಗಿ ಬಸ್‌ಗಳು ಎಪ್ರಿಲ್‌ ಮತ್ತು ಮೇ ತಿಂಗಳಿನಲ್ಲಿ ಇಲ್ಲಿನ ತುಳು-ಕನ್ನಡಿಗರನ್ನು ಮನ ಬಂದಂತೆ ಕೊಳ್ಳೆಹೊಡೆಯುತ್ತಿವೆ. ಇದೀಗ ಮತದಾನಕ್ಕೆ ತೆರಳಲು ಊರಿಗೆ ಹೋಗುವ ಅಗತ್ಯತೆವನ್ನು ಮನಗಂಡ ಖಾಸಗಿ ಬಸ್‌ಗಳ ದರಗಳು ದಿನದಿಂದ ದಿನಕ್ಕೆ ಗಗನಕ್ಕೇರುತ್ತಿವೆ. 

ನಾನ್‌ ಎಸಿ ಸಿಟ್ಟಿಂಗ್‌ 1800-2000, ನಾನ್‌ ಎಸಿ ಸ್ಲಿàಪರ್‌ 2000-2200, ಎಸಿ ಸಿಟ್ಟಿಂಗ್‌ 2600-2800, ಎಸಿ ಸ್ಲಿàಪರ್‌ 3300-3500 ರೂ. ಗಳ ದರಗಳನ್ನು ಹೇರಲಾಗಿದೆ. ಇದು ದಿನಂಪ್ರತಿ ಏರಿಕೆಯಾಗುತ್ತಿದ್ದು, ಮತದಾನಕ್ಕಾಗಿ ತೆರಳುವ ತುಳು-ಕನ್ನಡಿಗರಿಗೆ ಬಿಸಿತುಪ್ಪದಂತಾಗಿದೆ. ಖಾಸಗಿ ಬಸ್‌ಗಳು ಹೆಚ್ಚುವರಿ ಬಸ್‌ಗಳನ್ನು ಓಡಿಸುತ್ತಿದ್ದು, ಅದರಲ್ಲೂ ಸೀಟ್‌ಗಳ ಅಭಾವದಿಂದ ಮತ್ತು  ಅಧಿಕ ದರದಿಂದ ತುಳು-ಕನ್ನಡಿಗರು ಮತದಾನಕ್ಕೆ ತೆರಳದೆ ಹಿಂದೇಟು ಹಾಕುವಂತಾಗಿದೆ.

ಕಳೆದ ವಾರ ತಂಗಿಯ ಮದುವೆ ಕಾರ್ಯ ಮುಗಿಸಿ ಕೆಲಸದ ನಿಮಿತ್ತ ಮುಂಬಯಿಗೆ ಬಂದ ನಾನು ಮತದಾನ ಮಾಡಲು ಪುನಃ ಊರಿಗೆ ಹೋಗುವ ಯೋಚನೆಯೊಂದಿಗೆ ಶುಕ್ರವಾರದ ಟಿಕೆಟ್‌ ಬುಕ್‌ ಮಾಡಲು ಬಯಸ್ಸಿದ್ದೆ. ಆದರೆ ಬಸ್‌  ಮತ್ತು ರೈಲಿನಲ್ಲಿ ಟಿಕೆಟ್‌ ಸಿಗದಿದ್ದ ಕಾರಣ ನಿರಾಸೆಯಾಗಿದೆ 
ಶ್ವೇತಾ ಅರುಣ್‌ ಶೆಟ್ಟಿ  ಮೂಡಬಿದಿರೆ, ಡೊಂಬಿವಲಿ.

ಟಾಪ್ ನ್ಯೂಸ್

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.