ಅಮ್ಚಿ ಗ್ರೂಪ್‌ ವಾಟ್ಸಪ್‌ ಬಳಗ: ಗುರುವಂದನೆ, ರಜತ ಮಿಲನ 


Team Udayavani, May 13, 2018, 12:46 PM IST

1205mum01.jpg

ಮುಂಬಯಿ: ಬದುಕಿನಲ್ಲಿ ಮಾನವೀಯತೆ, ಪ್ರೀತಿ ಮಾತ್ರ ಉಳಿಯುತ್ತದೆ. ಉಳಿದುದೆಲ್ಲವೂ ಕ್ಷಣಿಕ ಎಂಬುದನ್ನು ನೀವು ತೋರಿಸಿಕೊಟ್ಟಿದ್ದೀರಿ.  ವಿವಿಧ  ಊರುಗಳಿಂದ ಆಗಮಿಸಿ ಬಂದು ಗೌರವಿಸಿದ ನಿಮ್ಮ ಪ್ರೀತಿಯನ್ನು ಊಹಿಸಲಿಕ್ಕೂ ನನಗೆ ಸಾಧ್ಯವಾಗುತ್ತಿಲ್ಲ. ಮಕ್ಕಳಿಗೆ ಹೆಚ್ಚು ಸಮಯ ನೀಡಿ, ಅವರೊಂದಿಗೆ ಹೆಚ್ಚುಕಾಲ ಕಳೆಯಿರಿ. ನಿಮ್ಮೆಲ್ಲರ ಬದುಕಿ ಹಸನಾಗಲಿ ಎಂದು ಇತ್ತೀಚೆಗೆ ನಿವೃತ್ತ ರಾದ ಐಕಳ ಪಾಂಪೈ ಕಾಲೇಜಿನ ಪ್ರಾಧ್ಯಾಪಕ, ಪ್ರಾಂಶುಪಾಲ ಡಾ| ಜೆ. ಕ್ಲಾರೆನ್ಸ್‌ ಮಿರಾಂದ ಅವರು ಶುಭಹಾರೈಸಿದರು.

ಕಿನ್ನಿಗೋಳಿ ಪಾಂಪೈ ಕಾಲೇಜಿನ 1992-1993 ರ ಶೈಕ್ಷಣಿಕ ವರ್ಷದ ಹಳೆ ವಿದ್ಯಾರ್ಥಿಗಳ ಅಮಿc ಗ್ರೂಪ್‌ ವಾಟ್ಸಪ್‌ ಬಳಗದ ಸದಸ್ಯರು ಮೇ 11 ರಂದು ನಡೆಸಿದ ರಜತ ಮಿಲನ‰ ಗುರುವಂದನೆ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿದ ಅವರು,  25 ವರ್ಷಗಳ ಬಳಿಕ ಒಂದಾಗಿ ಬಂದು ತನ್ನನ್ನು ಗೌರವಿಸಿದ ತನ್ನ ಹಳೆ ಶಿಷ್ಯರ ಬಳಗ ಈ ಕಾರ್ಯ ಸದಾ ಮುಂದುವರಿಯಲಿ ಎಂದು ಹಾರೈಸಿದರು.

ಪುಸ್ತಕ ಪ್ರಕಟಣೆ, ಕ್ಯಾನ್ಸರ್‌ ಪೀಡಿತರಿಗೆ ಆರ್ಥಿಕ ನೆರವು ಇನ್ನಿತರ ಸಾಮಾಜಿಕ ಕಾರ್ಯವನ್ನೂ ಮಾಡುತ್ತಿರುವ ಬಳಗ ಈಗ ತಮ್ಮ ಇಡೀ ಗುರುವೃಂದಕ್ಕೆ ಸಂದಾಯವಾಗುವಂತೆ ಸಾಂಕೇತಿಕವಾಗಿ ಗುರುವಂದನೆಯನ್ನು ಈ ಮೂಲಕ ಸಲ್ಲಿಸಿತು. ಶಾಲು, ಹಾರ, ಪುಷ್ಪಗುಚ್ಚ, ನೆನಪಿನ ಕಾಣಿಕೆ, ಫಲಪುಷ್ಪ, ಬೆಳ್ಳಿಬಟ್ಟಲು ನೀಡಿ ಗುರುಗಳನ್ನು ಗೌರವಿಸಲಾಯಿತು.

ಬೆಂಗಳೂರು, ಪುಣೆ, ಮುಂಬಯಿ, ಮಂಗಳೂರು ಹಾಗೂ ಊರಿನಲ್ಲಿದ್ದ ಬಳಗದ ಸದಸ್ಯರು ಹಾಜರಿದ್ದರು. ಮುಂಬಯಿ ಯ ಪತ್ರಕರ್ತ ಏಳಿಂಜೆ ನಾಗೇಶ್‌ ಕಾರ್ಯಕ್ರಮ ಸಂಯೋಜಿಸಿ ನಿರೂಪಿಸಿದರು.

ಹೀರಾ ಶೆಟ್ಟಿ, ಬ್ಲೇಸಿಯಸ್‌ ಡಿಸೋಜ, ಲೊಲಿಟಾ, ಸಂತೋಷ್‌ ಆಚಾರ್ಯ, ಪುಷ್ಪನಾಥ್‌ ಸುವರ್ಣ, ಏಳಿಂಜೆ ನಾಗೇಶ್‌, ವಾಯ್ಲೆಟ್‌ ಡೇಸಾ, ಗಿರೀಶ್‌ ಕೊಂಚಾಡಿ, ವೇಣುಗೋಪಾಲ್‌ ಶೆಟ್ಟಿ, ವಿದ್ಯಾಲತಾ ಶೆಟ್ಟಿ, ಸುನೀತಾ ದೇವಾಡಿಗ, ಶಕುಂತಲಾ ಆಚಾರ್ಯ, ವಾಸುದೇವ ಭಟ್‌, ಶಾಲಿನಿ, ವಿಜಯಾ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಭಾವುಕರಾದ ಗುರು‰ಗಳನ್ನು ನಗಿಸಿದ ಶಿಷ್ಯರು 
25 ವರ್ಷಗಳ ಬಳಿಕವೂ ತಮ್ಮ ಗುರುವನ್ನು ಮರೆಯದೆ ಬಂದು ಗೌರವ ಸಲ್ಲಿಸಿದ ಶಿಷ್ಯ ವೃಂದದ ಪ್ರೀತಿಯನ್ನು ಕಂಡು ಭಾವುಕರಾದ ಡಾ| ಮಿರಾಂದ ಅವರು ಅಳು ತಡೆಯಲಾರದೆ ಕಣ್ಣೀರು ಹಾಕಿ ಗದ್ಗದಿತರಾಗಿ ಸಾವರಿಸಿಕೊಳ್ಳಲಾಗದೆ  ತಡವರಿಸುವುದನ್ನು ಕಂಡ ಶಿಷ್ಯರು ಸಾರ್‌, ಪ್ರತಿ ಬಾರಿ ಊರಿಗೆ ಬಂದಾಗಲೂ ನಿಮ್ಮನ್ನು ಭೇಟಿಯಾಗಿ ಹೋಗುತ್ತೇವೆ.  ಆದರೆ ಸಮ್ಮಾನ ಮಾಡಲಾಗದು ಎಂದು ಹಾಸ್ಯ ಚಟಾಕಿ ಹಾರಿಸಿದಾಗ  ನಗು ತಡೆಯಲಾಗದೆ ದು:ಖವನ್ನು ಮರೆತರು.

ಟಾಪ್ ನ್ಯೂಸ್

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!

rape

Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ: ರಾಜಸ್ಥಾನಿ ಮಹಿಳೆ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ

Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ

Desi Swara: ಟ್ರೆಂಟ್‌ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …

Desi Swara: ಟ್ರೆಂಟ್‌ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …

Desi Swara: ಬಸ್‌ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ

Desi Swara: ಬಸ್‌ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ

Desi Swara: ಕನ್ನಡಿಗಾಸ್‌ ಸ್ಟಾರ್‌ ಅವಾರ್ಡ್‌ 2024 ಪ್ರದಾನ

Desi Swara: ಕನ್ನಡಿಗಾಸ್‌ ಸ್ಟಾರ್‌ ಅವಾರ್ಡ್‌ 2024 ಪ್ರದಾನ

Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ

Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

Lok Sabha polls: ಇಂದು ಸುಮಲತಾ ಬೆಂಬಲಿಗರ ಸಭೆ 

Lok Sabha polls: ಇಂದು ಸುಮಲತಾ ಬೆಂಬಲಿಗರ ಸಭೆ 

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.