CONNECT WITH US  

ನವ ದೆಹಲಿ:ಮೋತಿಭಾಗ್‌ ಮೆಟ್ರೋ ಸ್ಟೇಷನ್‌ಗೆ ವಿಶ್ವೇಶ್ವರಯ್ಯ ಹೆಸರು

ಮುಂಬಯಿ: ದೆಹಲಿ ಕರ್ನಾಟಕ ಸಂಘದ ಸುಸಜ್ಜಿತ ಸಾಂಸ್ಕೃತಿಕ ಸಮುತ್ಛಯದ ಅಂಚಿನಲ್ಲಿರುವ ಮೋತಿಭಾಗ್‌ ಮೆಟ್ರೋ ಸ್ಟೇಷನ್‌ಗೆ ಸರ್‌. ಎಂ. ವಿಶ್ವೇಶ್ವರಯ್ಯ ಮೋತಿಭಾಗ್‌ ಎಂಬ ಹೆಸರನ್ನು ನೀಡಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕನ್ನಡಿಗ ಸಾಧಕರೊಬ್ಬರ ಹೆಸರು ಅಜರಾಮರವಾಗಲಿದೆ ಎಂದು ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ನುಡಿದರು.

ದೆಹಲಿ ಕರ್ನಾಟಕ ಸಂಘದ ವತಿಯಿಂದ ಸಂಘದ ಸಭಾಗೃಹದಲ್ಲಿ ನಡೆದ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ನವದೆಹಲಿಯ ಮಜಿÉಸ್‌ ಪಾರ್ಕ್‌ನಿಂದ ಶಿವ ವಿಹಾರ್‌ವರೆಗಿನ 59 ಕಿ. ಮೀ.  ಉದ್ದದ ಪಿಂಕ್‌ಲೈನ್‌ ಮೆಟ್ರೋದ ದಾರಿಯಲ್ಲಿ ಬರುವ ಮೋತಿಭಾಗ್‌ ಸ್ಟೇಷನ್‌ ಬಹಳ ಮುಖ್ಯವಾದ ಮೆಟ್ರೋ ಸ್ಟೇಷನ್‌ ಆಗಿದ್ದು ಅದರ ನಾಮಕರಣವನ್ನು ಸರ್‌. ಎಂ. ವಿಶ್ವೇಶ್ವರಯ್ಯ ಮೋತಿಭಾಗ್‌ ಎಂದಿಡಲು ದೆಹಲಿ ಕರ್ನಾಟಕ ಸಂಘವು ಕೇಂದ್ರ ಸರಕಾರ ಮತ್ತು ದೆಹಲಿ ಮೆಟ್ರೋ ರೈಲು ಕಾರ್ಪೋರೇಶನ್‌ ಜತೆ ಅನೇಕ ಪತ್ರವ್ಯವಹಾರವನ್ನು ಮಾಡಿದಲ್ಲದೇ, ಕನ್ನಡಿಗರೊಬ್ಬರ ಹೆಸರನ್ನಿಡಲು ತೀವ್ರವಾದ ಗುಣಾತ್ಮಕ ಲಾಬಿಯನ್ನು ನಡೆಸಿದೆ. ನವದೆಹಲಿಯಲ್ಲಿ ಸರ್‌ ಎಂ. ವಿಶ್ವೇಶ್ವರಯ್ಯಅವರ ಹೆಸರನ್ನು ಮೆಟ್ರೋ ನಿಲ್ದಾಣಕ್ಕೆ ನೀಡಿ ಕನ್ನಡಿಗರ ಕನ್ನಡದ ಅಸ್ಮಿತತೆಯನ್ನು ರಾಷ್ಟ್ರ ರಾಜಧಾನಿಯಲ್ಲಿ ಮೆರೆಯುವಂತೆ ಮಾಡಿದ ಕೇಂದ್ರ ಸರಕಾರ, ಸರಕಾರದ ವಿವಿಧ ಸಚಿವರು, ಕರ್ನಾಟಕದ ಸಂಸತ್‌ ಸದಸ್ಯರು, ಮಾಧ್ಯಮದ ಮಿತ್ರರು ಮತ್ತು ದೆಹಲಿ ಕರ್ನಾಟಕ ಸಂಘದ ಎಲ್ಲಾ ಹಿತ ಚಿಂತಕರಿಗೆ ಸಂಘದ ಕಾರ್ಯಕಾರಿ ಸಮಿತಿಯು ತನ್ನ ಆಭಾರವನ್ನು ವ್ಯಕ್ತಪಡಿಸುತ್ತದೆ ಎಂದರು.

ರಾಜ್ಯದಲ್ಲಿ ಹೊಸ ಸರಕಾರವು ಅಧಿಕಾರವನ್ನು ಸ್ವೀಕರಿಸಿದ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಅಭಿನಂದಿಸಿದ ದೆಹಲಿ ಕರ್ನಾಟಕ ಸಂಘದ ಕಾರ್ಯಕಾರಿ ಸಮಿತಿಯು ನವದೆಹಲಿಯಲ್ಲಿ ಕರ್ನಾಟಕದ ಕೆಲಸಗಳನ್ನು ನಡೆಸಲು ರಾಜ್ಯ ಸರಕಾರವು ಮತ್ತಷ್ಟು ಪ್ರೋತ್ಸಾಹವನ್ನು ನೀಡುವ ಭರವಸೆಯನ್ನು ಹೊಂದಿದೆ. ಮುಖ್ಯಮಂತ್ರಿಯಲ್ಲದೇ ಇತರ ಮಂತ್ರಿಗಳನ್ನು ಕೂಡಾ ಸಂಪರ್ಕಿಸಿ ಸಂಘದ ಮುಂದಿನ ಯೋಜನೆಗಳ ಕುರಿತು ಪ್ರಾಥಮಿಕ ವಿವರಗಳನ್ನು ನೀಡಲಾಗುವುದು. ದೆಹಲಿಯಲ್ಲಿ ವೃತ್ತಿಯಲ್ಲಿರುವ ಮಹಿಳೆಯರಿಗೆ ಹಾಸ್ಟೆಲ್‌ ವ್ಯವಸ್ಥೆ ಮೊದಲಾದ ವಿಸ್ತೃತ ಯೋಜನೆಗಳನ್ನು ಹಾಕಲಾಗಿದೆ ಎಂದರು.

Trending videos

Back to Top