ತುಳು-ಕನ್ನಡಿಗ ಚಾರಣ ಯಾತ್ರಿ ದಂಪತಿಯ ವಿಶೇಷ ಸಾಧನೆ

Team Udayavani, Aug 1, 2018, 3:09 PM IST

3107mum12.jpg

ಮುಂಬಯಿ: ಉಪನಗರ ಭಾಂಡೂಪ್‌ನ ನಿವಾಸಿಗಳಾದ ತುಳು-ಕನ್ನಡಿಗರಾದ ಪ್ರಮೀಳಾ ಶಿವರಾಮ ಇವರ ಪುತ್ರ ಜಗದೀಶ ಶಿವರಾಮ ಪದ್ಮಶಾಲಿ ಮತ್ತು ದಿವ್ಯಾ ಪದ್ಮಶಾಲಿ ದಂಪತಿಯನ್ನೊಳಗೊಂಡ ತಂಡವೊಂದು ಪ್ರಪಂಚದ ನಾಲ್ಕನೇ ಅತ್ಯುನ್ನತ ಶಿಖರವಾದ ಕಿಲಿಮಾಂಜರೋವನ್ನು ಜು. 20ರಂದು ಏರಿ ವಿಶೇಷ ಸಾಧನೆಗೈದಿದ್ದಾರೆ.

ಕಿಲಿಮಾಂಜರೊ ಪರ್ವತ ಶಿಖರವು ಆಫ್ರಿಕಾ ದೇಶಗಳಲ್ಲೊಂದಾದ ತಾಂಜಾನಿಯದಲ್ಲಿದೆ. ಈ ಶಿಖರವು ಸಮುದ್ರ ತಟದಿಂದ 19,341 ಅಡಿ ಎತ್ತರದಲ್ಲಿದೆ. ಏಳು ದಿನಗಳ ಸುದೀರ್ಘ‌ ಹಾಗೂ ಕಠಿನ ಪರಿಶ್ರಮದಿಂದ ಸದ್ಯ ದುಬಾೖಯಲ್ಲಿರುವ ಹತ್ತು ಜನರ ತಂಡವು ಈ ಶಿಖರವನ್ನು ಏರಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಜು.  14 ರಂದು ಚಾರಣವನ್ನು  ಪ್ರಾರಂಭಿಸಿದ ಈ ತಂಡವು ಸತತ ಪ್ರಯತ್ನದಿಂದ ಆರನೇ ದಿನದಂದು ಉಹುರು ತುದಿಯಿಂದ ಕೆಲವೇ ಅಂತರದಲ್ಲಿ ಕ್ಯಾಂಪ್‌ ಹೂಡಿತು. ನಾಲ್ಕು ಗಂಟೆಗಳ ವಿಶ್ರಾಂತಿಯ ತರುವಾಯ ರಾತ್ರಿ 11.30ಕ್ಕೆ ಹೊರಟ ಈ  ತಂಡವು ಹನ್ನೊಂದು ಗಂಟೆಯ ಕಷ್ಟದಾಯಕ ಚಾರಣದ ನಂತರ ಉಹುರು ಶಿಖರದ ತುತ್ತ ತುದಿಯನ್ನು ಏರಿ ತಮ್ಮ ಸಂತಸ ಹಂಚಿಕೊಂಡರು. ರಾತ್ರಿ ತಾಪಮಾನವು 2 ಡಿಗ್ರಿಯಿಂದ 10 ಡಿಗ್ರಿಯವರೆಗೆ ಏರಿಕೆಯಾಗಿದ್ದರೂ ತಂಡವು ಈ ಸಾಧನೆಯನ್ನು ಮಾಡಿದೆ.

ವಿಶೇಷವೇನೆಂದರೆ ಇರಾಕಿನ ಕುರ್ಡಿಸ್ತಾನದಲ್ಲಿರುವ ಎರ್ಬಿಲ್‌, ದುಹೋಕ್‌, ಸುಲೈಮಾನಿಯ ಹಾಗೂ ಮೊಸುಲ್‌ನಲ್ಲಿ ನಿರಾಶ್ರಿತರ ಕ್ಯಾಂಪಿನಲ್ಲಿ ಅತೀ ಕಷ್ಟದ ಜೀವನ ಸಾಗಿಸುತ್ತಿರುವ ಜನರ ವೇದನೆಯನ್ನು ಜಾಗತಿಕವಾಗಿ ಗಮನ ಸೆಳೆಯುವ ಪ್ರಯತ್ನವೂ ಈ ಚಾರಣದಲ್ಲಿ ಸೇರಿತ್ತು. ಬ್ರಿಂಗ್‌ ಹೋಪ್‌ ಹ್ಯುಮನಿಟೇರಿಯನ್‌ ಫೌಂಡೇಶನ್‌ ಹಾಗೂ ಲೈಟ್‌ ಹೌಸ್‌ ಕೊಹೊರ್ಟ್‌’ ಈ ಚಾರಣದ ಸಾರಥ್ಯವನ್ನು  ವಹಿಸಿದ್ದವು. ಮುಂಬಯಿ ಪದ್ಮಶಾಲಿ ಸಮಾಜ ಸೇವಾ ಸಂಘದ ಅಧ್ಯಕ್ಷರಾದ  ಉತ್ತಮ್‌ ಎ. ಶೆಟ್ಟಿಗಾರ್‌ ಅವರು  ಜಗದೀಶ ಹಾಗೂ ದಿವ್ಯಾ ದಂಪತಿಯ ಸಾಧನೆಯನ್ನು ಅಭಿನಂದಿಸಿದ್ದಾರೆ.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ

Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ

Desi Swara: ಟ್ರೆಂಟ್‌ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …

Desi Swara: ಟ್ರೆಂಟ್‌ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …

Desi Swara: ಬಸ್‌ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ

Desi Swara: ಬಸ್‌ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ

Desi Swara: ಕನ್ನಡಿಗಾಸ್‌ ಸ್ಟಾರ್‌ ಅವಾರ್ಡ್‌ 2024 ಪ್ರದಾನ

Desi Swara: ಕನ್ನಡಿಗಾಸ್‌ ಸ್ಟಾರ್‌ ಅವಾರ್ಡ್‌ 2024 ಪ್ರದಾನ

Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ

Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.