CONNECT WITH US  

ಹಾಸ್ಯದ ವಸ್ತುವಾದ ಟ್ರಂಪ್‌ ಕುರಿತ ಕಲಾಕೃತಿ

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರ ಅಭಿಮಾನಿ, ಖ್ಯಾತ ಕಲಾವಿದ ಜಾನ್‌ ಮೆಕ್‌ನಾಟನ್‌, ಟ್ರಂಪ್‌ರ ವೀರೋಚಿತ ಕಲಾಕೃತಿ ಯನ್ನು ರಚಿಸಿದ್ದಾರೆ. ಕಲಾಕೃತಿ ಜೊತೆ "ಟ್ರಂಪ್‌ ಸತ್ಯದ ದೀವಿಗೆ ಹಿಡಿದು ಅಂಧಕಾರದ ಕೂಪದಿಂದ ಅಮೆರಿಕ ವನ್ನು ಉನ್ನತಿ ಕಡೆಗೆ ಕೊಂಡೊಯ್ಯು ತ್ತಿರುವ, ಅಮೆರಿಕವನ್ನು ರಕ್ಷಿಸುತ್ತಿರುವ ಮಹಾವೀರ' ಎಂಬಂತೆ 4 ಸಾಲುಗಳನ್ನು ಬರೆದು ಟ್ವೀಟ್‌ ಮಾಡಿದ್ದಾರೆ . ಈ ಕಲಾಕೃತಿ ಈಗ ಭಾರಿ ಸದ್ದು ಮಾಡುತ್ತಿದೆ.

ಅಮೆರಿಕದಲ್ಲಿ ಅತಿ ಹೆಚ್ಚು ಬಾರಿ ಶೇರ್‌ ಆಗುತ್ತಿರುವ ಟ್ವೀಟ್‌ ಎನಿಸಿಕೊಂಡಿದೆ. ಇದು ಇಷ್ಟು ಪ್ರಸಿದ್ಧವಾಗಿದ್ದು ಇದರ ಕಲಾ ಪ್ರೌಢಿಮೆಯಿಂದಲ್ಲ. ಬದಲಾಗಿ ಜಾಲತಾಣಿಗರು ಇದನ್ನು ಅಪಹಾಸ್ಯ ಮಾಡುತ್ತಿದ್ದಾರೆ. ಟ್ರಂಪ್‌ ಕೈಲಿರುವುದು ಗ್ಯಾಸ್‌ ಲ್ಯಾಂಪಾ ಎಂದು ಪ್ರಶ್ನಿಸಿದ್ದಾರೆ.


Trending videos

Back to Top