CONNECT WITH US  

ಮುಂಬಯಿ ಪೇಜಾವರ ಮಠದಲ್ಲಿ ಸಂಪ್ರದಾಯಬದ್ಧ ಶ್ರೀಕೃಷ್ಣ ಜನ್ಮಾಷ್ಟಮಿ

ಮುಂಬಯಿ: ಉಡುಪಿ  ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಮತ್ತು ಕಿರಿಯ ಯತಿಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥರ ಮಾರ್ಗದರ್ಶನ ಮತ್ತು ಅನುಗ್ರಹದಿಂದ ಶ್ರೀ ಪೇಜಾವರ ಮಠದ ಮುಂಬಯಿ ಶಾಖೆಯಾದ ಸಾಂತಾಕ್ರೂಜ್‌ ಪೂರ್ವದ  ಪೇಜಾವರ ಮಠದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗಳೊಂದಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲ ಪಿಂಡಿ ಉತ್ಸವವು ವಿಜೃಂಭಣೆಯಿಂದ ಸೆ. 3 ರಂದು ನಡೆಯಿತು.

ಸೆ. 2 ರಂದು ಸಂಜೆ ಶ್ರೀಕೃಷ್ಣ ಪ್ರತಿಷ್ಠಾನ ಮುಂಬಯಿ ಇದರ ಸಂಸ್ಥಾಪಕ ವಿದ್ವಾನ್‌ ಕೈರಬೆಟ್ಟು ವಿಶ್ವನಾಥ ಭಟ್‌ ಅವರಿಂದ ಹರಿಕಥಾ ಕಾಲಕ್ಷೇಪವನ್ನು ಆಯೋಜಿಸಲಾಗಿತ್ತು. ರಾತ್ರಿ ಶ್ರೀ ಪೇಜಾವರ ಮಠದಲ್ಲಿ ಪ್ರತಿಷ್ಠಾಪಿತ ಶ್ರೀಕೃಷ್ಣ ದೇವರಿಗೆ ತುಳಸಿ ಅರ್ಚನೆ, ಕೃಷ್ಣಾಘÂì ಪ್ರಧಾನ, ಮಹಾಪೂಜೆ ನೆರವೇರಿಸಿ ತೀರ್ಥ ಪ್ರಸಾದ ವಿತರಿಸಲಾಯಿತು. ವಿಷ್ಣುತೀರ್ಥ ಸಾಲಿ ಅವರು ಶ್ರೀ ದೇವರ ಮಂಟಪವನ್ನು ಅತ್ಯಾಕರ್ಷಕವಾಗಿ ಪುಷ್ಪಾಲಂಕ‌ರಿಸಿದ್ದು, ಉಂಡಾರು ರಾಘವೇಂದ್ರ ಭಟ್‌ ಪೂಜಾಧಿಗಳನ್ನು ನೆರವೇರಿಸಿ ಅನುಗ್ರಹಿಸಿದರು.

ಸೋಮವಾರ ಮುಂಜಾನೆಯಿಂಂದಲೇ ಮಠದಲ್ಲಿ ನೆರೆದ ಅಪಾರ ಸಂಖ್ಯೆಯ ಭಕ್ತಾಭಿಮಾನಿಗಳು ಶ್ರೀಕೃಷ್ಣ ದೇವರಿಗೆ ಪೂಜೆ ನೆರವೇರಿಸಿ ಆರಾಧಿಸಿದರು. ರಂಗಪೂಜೆ, ಚೆಂಡೆೆಸುತ್ತು, ಮಧ್ಯಾಹ್ನ ಮಹಾಪೂಜೆ, ಮಂಗಳಾರತಿ ನಡೆಸಲ್ಪಟ್ಟಿತು. ಪೇಜಾವರ ಮಠದ ಮಧೆÌàಶ ಭಜನಾ ಮಂಡಳಿಯಿಂದ ಭಜನೆ ನೇರವೇರಿತು. ಸಂಜೆ ಮಠದ ವಠಾರದಿಂದ ಪ್ರಭಾತ್‌ ಕಾಲನಿಯಾದ್ಯಂತ ದಿನೇಶ್‌ ಕೋಟ್ಯಾನ್‌ ಜೆರಿಮೆರಿ ಬಳಗದ ಸ್ಯಾಕೊÕàಫೋನ್‌, ವಾದನ, ಬ್ಯಾಂಡು ಚೆಂಡೆಗಳ ನೀನಾದದಲ್ಲಿ ಗೊಂಬೆಯಾಟ, ವಿವಿಧ ವೇಷಭೂಷಣ, ವೈವಿಧ್ಯಗಳೊಂದಿಗೆ ಶ್ರೀಕೃಷ್ಣ ವಿಟ್ಲ ಪಿಂಡಿ ಉತ್ಸವ ಆಚರಿಸಲ್ಪಟ್ಟಿತು. ಕೆರ್ವಾಶೆ  ಶ್ರೀಹರಿ ಭಟ್‌  ಉತ್ಸವ ಬಲಿಯೊಂದಿಗೆ ಕೃಷ್ಣರಥೋತ್ಸವವನ್ನು ನಡೆಸಿಕೊಟ್ಟರು.

ನಂತರ ಶಾಖೆಯ ಶ್ರೀ ವಿಶ್ವೇಶತೀರ್ಥ ಸಭಾಗೃಹದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರಗಿಸಲಾಗಿದ್ದು, ಪೂರ್ಣಪ್ರಜ್ಞಾ ವಿದ್ಯಾಪೀಠ ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ| ಎ. ಎಸ್‌. ರಾವ್‌ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಪುಟಾಣಿಗಳಿಗೆ ಕೃಷ್ಣವೇಷ ಸ್ಪರ್ಧೆ ನಡೆಸಲಾಯಿತು. ನಂತರ ಐಐಟಿಸಿ ಮತ್ತು ಬಿ.ಆರ್‌ ಹೊಟೇಲ್‌ ಸಮೂಹದ ಸಹಯೋಗದಲ್ಲಿ ಸಂಗೀತ ವಿದ್ಯಾನಿಧಿ ಡಾ| ವಿದ್ಯಾಭೂಷಣ ಬಳಗದಿಂದ ದಾಸವಾಣಿ ಭಕ್ತಿಸಂಗೀತ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಎಸ್‌. ಎನ್‌. ಉಡುಪ, ಐಐಟಿಸಿ ನಿರ್ದೇಶಕ ವಿಕ್ರಾಂತ್‌ ಉರ್ವಾಲ್‌, ಮುರಳೀ ಭಟ್‌ ಡೊಂಬಿವಲಿ, ರವಿ ಸುವರ್ಣ, ಪೇಜಾವರ ಮಠ ಮುಂಬಯಿ ಶಾಖೆಯ ಪ್ರಬಂಧಕರುಗಳಾದ ಪ್ರಕಾಶ ಆಚಾರ್ಯ ರಾಮಕುಂಜ, ರಾಮದಾಸ ಉಪಾಧ್ಯಾಯ ರೆಂಜಾಳ, ಹರಿ ಭಟ್‌, ನಿರಂಜನ್‌ ಗೋಗೆr, ಮುಕುಂದ ಬೈತ್ತಮಂಗಳ್ಕರ್‌, ಶ್ರೀನಿವಾಸ  ಭಟ್‌ ಪರೇಲ್‌, ವಿದ್ವಾನ್‌ ಅರವಿಂದ ಬನ್ನಿಂತ್ತಾಯ, ಸುಧೀರ್‌ ಆರ್‌.ಎಲ್‌ ಭಟ್‌, ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು. 

ಚಿತ್ರ-ವರದಿ: ರೋನ್ಸ್‌ ಬಂಟ್ವಾಳ್‌

Trending videos

Back to Top