ಭಿವಂಡಿ ಹೊಟೇಲ್‌ ಅಸೋಸಿಯೇಶನ್‌: ಅಧ್ಯಕ್ಷರಾಗಿ ಭಾಸ್ಕರ್‌ ಟಿ.ಶೆಟ್ಟಿ


Team Udayavani, Sep 5, 2018, 1:34 PM IST

44.jpg

ಮುಂಬಯಿ: ಹೊಟೇಲ್‌  ವ್ಯವಸಾಯಿಗಳ ಪ್ರತಿಷ್ಠಿತ  ಸಂಸ್ಥೆಗಳ ಲ್ಲೊಂದಾದ ಭಿವಂಡಿ ಹೊಟೇಲ್‌ ಆ್ಯಂಡ್‌ ಪರ್ಮಿಟ್‌ ರೂಮ್‌  ಓನರ್ ಅಸೋಸಿಯೇಶನಿನ ಮುಂಬರುವ 3 ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಈ ಹಿಂದೆ ಕಾರ್ಯದರ್ಶಿಯಾಗಿದ್ದ ಮಾತ್ರವಲ್ಲ ಕಳೆದ 16 ವರ್ಷಗಳಿಂದ ವಿವಿಧ ಪದಾಧಿಕಾರಿಯಾಗಿ ಸಕ್ರಿಯ ಆಡಳಿತ ಸಮಿತಿಯ ಸದಸ್ಯನಾಗಿ, ಅಸೋಸಿಯೇಶನ್‌ನ ಪ್ರಗತಿಗೆ ಪ್ರಮುಖ ಕಾರಣಕರ್ತರು ಗಳಲ್ಲೊಬ್ಬರಾದ ದೀಪಕ್‌ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ನ ಮಾಲಕ ದೊಂಡೆರಂಗಡಿ ಭಾಸ್ಕರ ಟಿ. ಶೆಟ್ಟಿ ಅವರು ಅವಿರೋಧ ಆಯ್ಕೆಯಾಗಿದ್ದಾರೆ.

ಆ. 30 ರಂದು  ಅಸೋಸಿಯೇಶನ್‌ನ ಕಚೇರಿಯಲ್ಲಿ ನಡೆದ ವಿಶೇಷ ವಾರ್ಷಿಕ ಸರ್ವ ಸಾಮಾನ್ಯ ಸಭೆಯಲ್ಲಿ  ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಅಸೋಸಿಯೇಶನ್‌ನ ಸ್ಥಾಪಕ ಅಧ್ಯಕ್ಷ ಕಡಂದಲೆ ಪರಾರಿ ಪ್ರಭಾಕರ್‌ ಎಲ್‌. ಶೆಟ್ಟಿ, ಮಾಜಿ ಅಧ್ಯಕ್ಷ ಸುಂದರ ಕೆ. ಶೆಟ್ಟಿ ಮತ್ತು ನಿರ್ಗಮನ ಅಧ್ಯಕ್ಷ ರಘುರಾಮ ಜಿ. ಶೆಟ್ಟಿ ಅವರ ಮಾರ್ಗದರ್ಶನ, ಸಲಹೆ ಸೂಚನೆಯೊಂದಿಗೆ ನಡೆದ ಈ ಸಭೆಯಲ್ಲಿ ಹೆಚ್ಚಿನ ಸದಸ್ಯ ಬಾಂಧವರು  ಉಪಸ್ಥಿತರಿದ್ದರು.

ಸಭೆಯಲ್ಲಿ ಮುಂದಿನ ಈ ಮೂರು ವರ್ಷಗಳ ಕಾರ್ಯಾವಧಿಗೆ ಉಪಾಧ್ಯಕ್ಷರಾಗಿ ಸಾಗರ್‌ ಜ್ಯೋತಿ ಹೊಟೇಲಿನ ಮಾಲಕ ರಾಮಕೃಷ್ಣ ಎನ್‌. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಪದ್ಮ ಇನ್‌ ಹೊಟೇಲಿನ ಶ್ರೀಕಾಂತ್‌ ಎಸ್‌. ಪೂಜಾರಿ, ಕೋಶಾಧಿಕಾರಿಯಾಗಿ ಪ್ರೀತಿ ಪ್ಯಾಲೇಸ್‌ ಹೊಟೇಲಿನ ಪ್ರಜ್ವಲ್‌ ಎಸ್‌. ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಸಾರಿಕಾ ಬಾರ್‌ ಆ್ಯಂಡ್‌ ರೆಸ್ಟಾರೆಂಟ್‌ನ ಹರೀಶ್‌ ಆರ್‌. ಪೂಜಾರಿ, ಜೊತೆ ಕೋಶಾಧಿಕಾರಿಯಾಗಿ ಹೊಟೇಲ್‌ ಸೆಂಟರ್‌ ಪಾಯಿಂಟಿನ ಸುಧಾಕರ ಶೆಟ್ಟಿಯವರು ಆಯ್ಕೆಗೊಂಡರು.

ಸ್ಥಾಪಕ ಅಧ್ಯಕ್ಷ ಹಾಗೂ ಹೊಟೇಲ್‌ ಕೀರ್ತಿ ಇದರ ಮಾಲಕ ಪಿ. ಪ್ರಭಾಕರ ಎಲ್‌. ಶೆಟ್ಟಿ, ಹೊಟೇಲ್‌ ಸಂಧ್ಯಾದ ಮಾಲಕ  ಮಾಜಿ ಅಧ್ಯಕ್ಷ ಸುಂದರ್‌ ಕೆ. ಶೆಟ್ಟಿ, ಪ್ರಿಯಾ ಹೊಟೇಲ್‌ನ ಮಾಲಕ  ದೇವು ಎಸ್‌. ಪೂಜಾರಿ, ಹೊಟೇಲ್‌ಪ್ರೀತಿ ಪ್ಯಾಲೇಸ್‌ನ ಮಾಲಕ ಶೇಖರ ಎಲ್‌. ಶೆಟ್ಟಿ ಕಡಂದಲೆ ಪರಾರಿ, ಹೊಟೇಲ್‌ ರೇಶ್ಮಾ ಪ್ಯಾಲೇಸ್‌ನ ಮಾಲಕ ನಾರಾಯಣ ಕೆ. ಶೆಟ್ಟಿ, ಹೊಟೇಲ್‌ ಅಗರ್‌ವಾಲ್‌ನ ಮಾಲಕ ಭಾಸ್ಕರ ಜಿ.  ಶೆಟ್ಟಿ, ಹೊಟೇಲ್‌ ನಟರಾಜ್‌ನ ಮಾಲಕ ಶಂಕರ ಜೆ. ಶೆಟ್ಟಿ, ಹೊಟೇಲ್‌ ಜೈ ಮಲ್ಲಾರ್‌ನ ಮಾಲಕ ಫಕೀರ್‌ ಸಾವಲ್‌ರಾಮ್‌  ಗೊಡೆR ಇವರನ್ನು ಸಲಹಾ ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

ಮುಂಬರುವ ಅವಧಿಗೆ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಹೊಟೇಲ್‌ ಕನಕದ ಜಗದೀಶ್‌ ಸಿ. ಕೌಡೂರು, ಹೊಟೇಲ್‌ ಪ್ರೀಯಾದ  ಮೋಹನ್‌ದಾಸ್‌ ಪೂಜಾರಿ, ಹೊಟೇಲ್‌ ದುರ್ಗಾದ ಜಾನ್‌ ಪಿಂಟೊ, ಹೊಟೇಲ್‌ ಪ್ರಭಾತ್‌ನ ಗಣೇಶ್‌ ಶೆಟ್ಟಿ , ಹೊಟೇಲ್‌ ಐಶ್ವರ್ಯದ ನಿಕಿತೇಶ್‌ ಎಸ್‌. ಪೂಜಾರಿ ಮತ್ತು ಹೊಟೇಲ್‌ ಮೋನಿಶದ ರಾಹುಲ್‌ ಆರ್‌. ಪಾಟೀಲ್‌ ಇವರನ್ನು ಆಯ್ಕೆ ಮಾಡಲಾಯಿತು. ಆಯ್ಕೆಗೊಂಡ ಎಲ್ಲ ಪದಾಧಿಕಾರಿಗಳನ್ನು  ಹೂಗುತ್ಛ ನೀಡಿ  ಅಭಿನಂದಿಸಲಾಯಿತು.

ಭಾಸ್ಕರ್‌ ಟಿ. ಶೆಟ್ಟಿ 
ಕಳೆದ 21 ವರ್ಷಗಳಿಂದ ಭಿವಂಡಿ ಪರಿಸರದಲ್ಲಿ ಹೊಟೇಲು ವ್ಯವಸಾಯ ನಡೆಸುತ್ತಿರುವ ದೊಂಡೆರಂಗಡಿ ಭಾಸ್ಕರ ಟಿ.  ಶೆಟ್ಟಿಯವರು ಭಿವಂಡಿಯಲ್ಲಿರುವ ದೀಪಕ್‌ ಹೊಟೇಲ್‌ನ ಮಾಲಕರು. ತನ್ನ ಹೊಟೇಲು ವ್ಯವಸಾಯದೊಂದಿಗೆ ಸಾಮಾಜಿಕ ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡು ಭಿವಂಡಿ – ಕಲ್ಯಾಣ್‌ ಉಲ್ಲಾಸನಗರ, ಡೊಂಬಿವಲಿ, ಅಂಬರ್‌ನಾಥ್‌, ಬದ್ಲಾಪುರ, ಥಾಣೆ ಮಾತ್ರವಲ್ಲ ಮುಂಬಯಿ ಮಹಾನಗರದಲ್ಲೂ ಪ್ರಸಿದ್ಧರಾಗಿದ್ದಾರೆ.
ಬಂಟರ ಸಂಘ ಮುಂಬಯಿ ಇದರ ಆಡಳಿತ ಸಮಿತಿ ಸದಸ್ಯರಾಗಿರುವ ಇವರು  ಭಿವಂಡಿ-ಬದ್ಲಾಪುರ ಪ್ರಾದೇಶಿಕ ಸಮಿತಿಯ ಭಿವಂಡಿ ವಲಯದ ಸಂಘಟಕರಾಗಿ, ಪ್ರಾದೇಶಿಕ ಸಮಿತಿಯ ಸಂಚಾಲಕರಾಗಿ, ಪ್ರಸ್ತುತ  ಶಿಕ್ಷಣ ಹಾಗೂ ಸಾಮಾಜ ಕಲ್ಯಾಣ ಉಪ ಸಮಿತಿಯ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.  

ಚಿಣ್ಣರ ಬಿಂಬ, ಶ್ರೀ ಅಯ್ಯಪ್ಪ ಮಂದಿರ, ವ‌ಳಾದೇವಿ ಮಂದಿರ, ನಿತ್ಯಾನಂದ ಭಕ್ತವೃಂದ ಮೊದಲಾದ ಸಂಸ್ಥೆಗಳಲ್ಲಿ ವಿವಿಧ ಪದವಿಗಳನ್ನು ಅಲಂಕರಿಸಿದ ಭಾಸ್ಕರ ಶೆಟ್ಟಿಯವರು  ಪ್ರಾಮಾಣಿಕ, ಸರಳ ಸಜ್ಜನ ಬಂಧು ಮಾತ್ರವಲ್ಲ ಮಿತಭಾಷಿ ಮತ್ತು ಪರೋಪಕಾರಿ ಎಂದೇ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ.

ಭಿವಂಡಿ ಪರಿಸರದ ತುಳು – ಕನ್ನಡಿಗರ ಮತ್ತು ಇತರ ಭಾಷಿಗರ ನಡುವಿನ ಸೇತು ಎಂದೇ ಖ್ಯಾತಿ ಪಡೆದಿರುವ ಇವರು, ಸ್ಥಳೀಯ ನಗರ ಸೇವಕರುಗಳಾದ ಸಂತೋಷ ಎಂ. ಶೆಟ್ಟಿ, ಮತ್ತು ಶಶಿಲತಾ ಎಸ್‌. ಶೆಟ್ಟಿ, ಪೊಲೀಸ್‌ ಇಲಾಖೆ, ಅಬಕಾರಿ ಇಲಾಖೆ, ತೆರಿಗೆ ಇಲಾಖೆ, ನಗರ ಪಾಲಿಕೆ ಮೊದಲಾದ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕವನ್ನು ಹೊಂದಿ  ಜನ ಸಾಮಾನ್ಯರ ಸಮಸ್ಯೆಗಳನ್ನು  ಬಗೆ ಹರಿಸುವಲ್ಲಿ ನಿಪುಣರು ಮಾತ್ರವಲ್ಲ ಛಲವಾದಿಯೂ ಹೌದು. ಇವರು  ಮೂಲತಃ ಕುಕ್ಕುಜೆ ದೊಂಡೆರಂಗಡಿ ಅಡಿಮಾರು  ತಿಮ್ಮಪ್ಪ  ಶೆಟ್ಟಿ ಮತ್ತು ರತಿ ಟಿ. ಶೆಟ್ಟಿ ದಂಪತಿಯ ಪುತ್ರ.  ತನ್ನ ಪ್ರಾಥಮಿಕ, ಹೈಸ್ಕೂಲ್‌ ಮತ್ತು ಕಾಲೇಜು ಶಿಕ್ಷಣವನ್ನು ಹುಟ್ಟೂರಲ್ಲೇ  ಪೂರೈಸಿ ಹೆಚ್ಚಿನ ತುಳು-ಕನ್ನಡಿಗರಂತೆ 1985ರಲ್ಲಿ ಈ   ಕರ್ಮಭೂಮಿಗೆ ಕಾಲಿರಿಸಿ, ಕಳೆದ 21 ವರ್ಷಗಳಿಂದ ಭಿವಂಡಿಯಲ್ಲೂ ವಿಶೇಷ ಸಾಧಕರಾಗಿ ಗುರುತಿಸಿಕೊಂಡಿದ್ದಾರೆ.

ದೀನ ದಲಿತರ ಬಗ್ಗೆ  ಹೆಚ್ಚಿನ ಕಾಳಜಿ ಇರುವ ಭಾಸ್ಕರ ಶೆಟ್ಟಿ ಅವರು, ಹೊಟೇಲಿಗರ ಕಾರ್ಮಿಕರ ಮಕ್ಕಳಿಗೂ ಒಂದಿಷ್ಟು ವಿಶೇಷ ಸೌಲಭ್ಯವನ್ನು ಒದಗಿಸಿಕೊಡಬೇಕು, ಸಣ್ಣ ಪುಟ್ಟ ಹೊಟೇಲಿಗರ ಸಮಸ್ಯೆಗಳಿಗೂ ಸ್ಪಂದಿಸಬೇಕು,  ಇನ್ನಷ್ಟು ಸದಸ್ಯರ ನೋಂದಣಿ ಪ್ರಕ್ರಿಯೆ ನಡೆಸುವಲ್ಲಿ ಸಂಸ್ಥೆಯು ಮುಂದಾಗಬೇಕು. ಅದಕ್ಕಾಗಿ  ನೂತನ ಕಾರ್ಯಕಾರಿ ಸಮಿತಿಯ ಎಲ್ಲ ಸದಸ್ಯರ ಸಹಕಾರ, ಪ್ರೋತ್ಸಾಹ ಅಗತ್ಯವಾಗಿದೆ  ಎಂದು ತಿಳಿಸಿದ್ದಾರೆ.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ

Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ

Desi Swara: ಟ್ರೆಂಟ್‌ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …

Desi Swara: ಟ್ರೆಂಟ್‌ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …

Desi Swara: ಬಸ್‌ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ

Desi Swara: ಬಸ್‌ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ

Desi Swara: ಕನ್ನಡಿಗಾಸ್‌ ಸ್ಟಾರ್‌ ಅವಾರ್ಡ್‌ 2024 ಪ್ರದಾನ

Desi Swara: ಕನ್ನಡಿಗಾಸ್‌ ಸ್ಟಾರ್‌ ಅವಾರ್ಡ್‌ 2024 ಪ್ರದಾನ

Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ

Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.