CONNECT WITH US  

ಅಜೆಕಾರು ಕಲಾಭಿಮಾನಿ ಬಳಗ: ಸಂಪಾ ಶೆಟ್ಟಿ ಸಂಸ್ಮರಣೆ - ತಾಳಮದ್ದಳೆ

ಮುಂಬಯಿ: ಕಲೆ, ಸಂಸ್ಕೃತಿ ಮತ್ತು ಪರಂಪರೆಗಳ ಬಗೆಗೆ ನಮಗಿರುವ ಅಭಿಮಾನ ಹಿರಿಯರಿಂದ ಬಂದ ಬಳುವಳಿ. ಅದನ್ನು ಮುಂದಿನ ತಲೆಮಾರಿಗೆ ದಾಟಿಸುವುದು ನಮ್ಮ ಬದ್ಧತೆ. ಅಜೆಕಾರು ಬಾಲಕೃಷ್ಣ ಶೆಟ್ಟಿಯವರು ಮುಂಬಯಿ ಮಹಾನಗರದಲ್ಲಿ ಯಕ್ಷಗಾನ ಆಟ-ಕೂಟಗಳಿಗೆ ದೊಡ್ಡ ಪ್ರಮಾಣದ ಅಸ್ತಿಭಾರ ಹಾಕಿ ಕೊಟ್ಟಿರುವುದು ಇದೇ ಬದ್ಧತೆಯಿಂದ. ಇದರ ಹಿಂದೆ ಅವರ ತಾಯಿಯವರ ಹಾರೈಕೆಯಿರುವುದು ಸ್ಮರಣೀಯ ಎಂದು ಯಕ್ಷರûಾ ಪ್ರಶಸ್ತಿ ಪುರಸ್ಕೃತ ಅರ್ಥಧಾರಿ ಮತ್ತು ಸಾಹಿತಿ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಹೇಳಿ¨ªಾರೆ.

ಅಜೆಕಾರು ಕಲಾಭಿಮಾನಿ ಬಳಗದ ವತಿಯಿಂದ ಅಜೆಕಾರು ಶ್ರೀ ರಾಮ ಮಂದಿರದಲ್ಲಿ ಜರಗಿದ ಮಾತೃಶ್ರೀ ಸಂಪಾ ಎಸ್‌. ಶೆಟ್ಟಿ ಅವರ ತೃತೀಯ ಸಂಸ್ಮರಣೆ ಮತ್ತು ತಾಳಮದ್ದಳೆ ಕಾರ್ಯಕ್ರಮದಲ್ಲಿ ಸಂಸ್ಮರಣ ಭಾಷಣ ಮಾಡಿ ಅವರು ಮಾತನಾಡಿ,  ಮುಂಬಯಿಯಲ್ಲಿ ಹಲವು ಸಂಘಟನೆಗಳು ಹಾಗೂ ವಿವಿಧ ವಯೋಮಾನದ ಹವ್ಯಾಸಿಗಳಿಗೆ ಯಕ್ಷಗಾನವನ್ನು ಕಲಿಸಿ ರಂಗ ಪ್ರದರ್ಶನದ ಮೂಲಕ ಕರ್ನಾಟಕದ ಮಹಾನ್‌ ಕಲೆಯ ಪ್ರಸರಣಕ್ಕೆ ಕಾರಣರಾದ ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿಯವರು ಊರಿನ ಕಲಾವಿದರನ್ನು ಮುಂಬಯಿಗೆ ಕರೆಸಿ ಸರಣಿ ಕಾರ್ಯಕ್ರಮಗಳನ್ನು ಸಂಯೋಜಿಸಿ ಮನೆ ಮಾತಾಗಿರೆ ಎಂದು ನುಡಿದರು.

ಅಜೆಕಾರು ಶ್ರೀ ಮಹಾವಿಷ್ಣು ದೇವಸ್ಥಾನದ ಅರ್ಚಕ ರಂಗನಾಥ ಭಟ್‌, ವೈದಿಕ ವಿದ್ವಾಂಸ ಬಾಲಕೃಷ್ಣ ಭಟ್‌ ಕೆರ್ವಾಶೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಊರ ಹಿರಿಯರಾದ ಶ್ರೀಧರ ಶೆಟ್ಟಿ, ಕಾರ್ಕಳ ತಾಲೂಕು ಪಂಚಾಯತ್‌ ಸದಸ್ಯ ಹರೀಶ್‌ ನಾಯಕ್‌, ಮರ್ಣೆ ಗ್ರಾಮ ಪಂಚಾಯತ್‌ ಸದಸ್ಯ ಪ್ರಶಾಂತ ಶೆಟ್ಟಿ, ತಾಲೂಕು ಪಂಚಾಯತ್‌ ಮಾಜಿ ಅಧ್ಯಕ್ಷೆ ಯಶೋದಾ ಶೆಟ್ಟಿ  ಮುಖ್ಯ ಅತಿಥಿಗಳಾಗಿದ್ದರು. ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ  ವಿಜಯ ಶೆಟ್ಟಿ ಅಜೆಕಾರು ವಂದಿಸಿದರು. 

ಕೆ. ಲಕ್ಷ್ಮೀನಾರಾಯಣ ರೈ ಹರೇಕಳ ಕಾರ್ಯಕ್ರಮ ನಿರೂಪಿಸಿ ದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಅಂಗವಾಗಿ ಯ ಪ್ರಸಿದ್ಧ ಕಲಾವಿದರಿಂದ ವೀರಮಣಿ ಕಾಳಗ ಯಕ್ಷಗಾನ ತಾಳಮದ್ದಳೆ ಜರಗಿತು. ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ, ಜಯಪ್ರಕಾಶ ಶೆಟ್ಟಿ ಪೆರ್ಮುದೆ, ಹರೀಶ ಭಟ್‌ ಬಳಂತಿಮೊಗರು, ದಿನೇಶ್‌ ಶೆಟ್ಟಿ ಕಾವಳಕಟ್ಟೆ ಮತ್ತು ಸದಾಶಿವ ಆಳ್ವ ತಲಪಾಡಿ ಅರ್ಥಧಾರಿಗಳಾಗಿ ಭಾಗವಹಿಸಿದ್ದರು.  ಭಾಗವತರಾಗಿ ಕಾವ್ಯಶ್ರೀ  ಆಜೇರು ಹಾಗೂ ಪ್ರಶಾಂತ ಶೆಟ್ಟಿ ವಗೆನಾಡು, ಯೋಗೀಶ್‌ ಆಚಾರ್ಯ ಉಳೇಪಾಡಿ ಹಿಮ್ಮೇಳ ದಲ್ಲಿ  ಭಾಗವಹಿಸಿದ್ದರು.


Trending videos

Back to Top