CONNECT WITH US  

ಜಿಎಸ್‌ಬಿ ಸಭಾ ಕುರ್ಲಾ ಬಾಲಾಜಿ ಮಂದಿರದಲ್ಲಿ ಗಣೇಶೋತ್ಸವ ಸಂಭ್ರಮ

ಮುಂಬಯಿ: ಸುವರ್ಣ ಗಣೇಶೋತ್ಸವ ಸಂಭ್ರಮದಲ್ಲಿರುವ ಜಿಎಸ್‌ಬಿ ಸಭಾ ಕೆಸಿಜಿ ಕುರ್ಲಾ ಇದರ ಬಾಲಾಜಿ ಮಂದಿರದಲ್ಲಿ ಗಣೇಶೋತ್ಸವ ಸಂಭ್ರಮವು ಸೆ. 13 ರಿಂದ ಸೆ. 17 ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

ಕಳೆದ ಒಂದು ವರ್ಷದಿಂದ ಸುವರ್ಣ ಮಹೋತ್ಸವದ ಅಂಗವಾಗಿ ವರ್ಷಪೂರ್ತಿ ಭಜನೆ, ಹರಿಕಥೆ, ನಾಟಕ, ಯಕ್ಷಗಾನ, ಭಕ್ತಿ ಸಂಗೀತ ವೈಭವ, ಶಾಸ್ತಿÅàಯ ಸಂಗೀತ ಮತ್ತು ನೃತ್ಯ, ವಿವಿಧ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಬಾಲಾಜಿ ಮಂದಿರದಲ್ಲಿ ಆಯೋಜಿಸಿ ಸುವರ್ಣ ಮಹೋತ್ಸವವನ್ನು ಅದ್ದೂರಿಯಾಗಿ ನಡೆಸಲಾಗಿದ್ದು ಇದರ ಸಮಾರೋಪವಾಗಿ ಗಣೇಶೋತ್ಸವವು ನೆರವೇರಲಿದೆ. ಬಾಲಾಜಿ ಮಂದಿರದ ಕಾರ್ಯಾಧ್ಯಕ್ಷ ಗಣೇಶ್‌ ಕಾಮತ್‌, ಸುವರ್ಣ ಗಣೇಶೋತ್ಸವ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ವಿವೇಕ್‌ ಭಂಡಾರಿ, ಜನಾರ್ದನ ಭಟ್‌, ಭಗೀರಥ ಶಾನ್‌ಭಾಗ್‌, ವಿನಾಯಕ ಬಾಳಿಗಾ, ಗಣೇಶ್‌ ಮಲ್ಯ, ಗಣೇಶ್‌ ಪೈ, ಆರ್‌. ಎಂ. ಬಾಳಿಗ, ಪಿ. ಆರ್‌. ಕಾಮತ್‌, ಗಜಾನನ, ವೇದಮೂರ್ತಿ ತ್ರಿವಿಕ್ರಮ ಆಚಾರ್ಯ ಹಾಗೂ ಇನ್ನಿತರ ಸಮಿತಿಯ ಸದಸ್ಯರ ನೆರವಿನಿಂದ ಸುವರ್ಣ ಮಹೋತ್ಸವ ಗಣೇಶೋತ್ಸವಕ್ಕೆ ಪೂರ್ವಸಿದ್ಧತಾ ಕ್ರಮಗಳು ಭರದಿಂದ ನಡೆಯುತ್ತಿದೆ.

ವರ್ಷದುದ್ದಕ್ಕೂ ಸಾರಸ್ವತ ಸಮಾಜದ ನೆಲೆಬೀಡಾದ ಗೋವಾ ಪ್ರವಾಸ, ವೈದ್ಯಕೀಯ ಶಿಬಿರ, ಸಂಧ್ಯಾವಂದನೆ ಶಿಬಿರ, ಪ್ರತಿಭಾ ಪುರಸ್ಕಾರ ಇನ್ನಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಜಿಎಸ್‌ಬಿ ಸಮಾಜದ ಗುರುವರ್ಯರಾದ ಸಂಸ್ಥಾನ ಕವಳೆ ಗೋಕರ್ಣ ಪರ್ಥಗಾಳಿ ಹಾಗೂ ಕಾಶೀ ಮಠಾಧೀಶರ ದಿವ್ಯ ಅನುಗ್ರಹದೊಂದಿಗೆ ಪ್ರಸ್ತುತ ಐದು ದಿನಗಳ ಗಣೇಶೋತ್ಸವವನ್ನು ಆಚರಿಸಲು ಮುಂದಾಗಲಾಗಿದೆ. ಉತ್ಸವಕ್ಕೆ ಪೂರವಾಗಿ ಬಾಲಾಜಿ ಮಂದಿರ ಕುರ್ಲಾ ಹಾಗೂ ಪರಿಸರದ ವಾಸ್ತುವನ್ನು ನವೀಕರಿಸಲಾಗಿದ್ದು, ವಿದ್ಯುತ್‌ ದೀಪಾಲಂಕಾರದಿಂದ ಶೃಂಗರಿಸಲಾಗಿದೆ.

ಮಹಾಗಣಪತಿಯ ಉತ್ಸವಕ್ಕೆ ಸುವರ್ಣ ಮಹೋತ್ಸವದ ನೆನಪಿಗಾಗಿ ನೂತನ ಚಿನ್ನಾಭರಣ ಗಳ ಶೃಂಖಲೆ ಯನ್ನು ಸಜ್ಜುಗೊಳಿಸಲಾಗು ತ್ತಿದೆ. ಈ ನಿಟ್ಟಿನಲ್ಲಿ ಸುವರ್ಣ ಕವಚ, ಮಂಗಳ ಸೂತ್ರ, ಧಾರೀಮಣಿಯನ್ನು ಈಗಾಗಲೇ ಸಂಸ್ಥಾನ ಗುರುವರ್ಯ ಮಠಾಧೀಶ ಹಾಗೂ ಕಾಶೀ ಮಠಾಧೀಶರ ಹಸ್ತದಿಂದ ಬಾಲಾಜಿ ದೇವರ ಸನ್ನಿಧಿಯಲ್ಲಿರುವ ಶ್ರೀದೇವಿ- ಭೂದೇವಿಗೆ ಸಮರ್ಪಿಸಲಾಗಿದೆ.

ಐದು ದಿನಗಳ ಕಾಲ ನಡೆಯಲಿರುವ ಸುವರ್ಣ ಮಹೋತ್ಸವ ಗಣೇಶೋತ್ಸವ ದಲ್ಲಿ ದಿನಂಪ್ರತಿ ವಿಶೇಷ ಸೇವೆ, ಗಣಹೋಮ, ಮೂಢ ಗಣಪತಿ ಯಾಗ, ವಿಶೇಷ ಪೂಜಾ ಸೇವೆ, ಮಹಾಮೂಢಗಣಪತಿ, ದುರ್ವಾ ರ್ಚನೆ ಸೇವೆ ಇನ್ನಿತರ ಸೇವೆಗಳನ್ನು ಆಯೋಜಿಸಲಾಗಿದೆ. ಅಲ್ಲದೆ ಭಕ್ತಾದಿಗಳಿಗೆ ತುಲಾಭಾರ ಸೇವೆ, ಮಧ್ಯಾಹ್ನ ಪೂಜೆ, ಮಹಾಮಂಗಳಾರತಿ ನಡೆಯಲಿದೆ, ಸೆ. 17 ರಂದು ಸಂಜೆ ವಿಸರ್ಜನಾ ಮೆರವಣಿಗೆಯನ್ನು ಆಯೋಜಿಸಲಾಗಿದೆ. ಭಕ್ತರು ಪಾಲ್ಗೊಂಡು  ಉತ್ಸವದ ಯಶಸ್ಸಿಗೆ ಸಹಕರಿಸುವಂತೆ ಪ್ರಕಟನೆ ತಿಳಿಸಿದೆ.
 


Trending videos

Back to Top