ಪುಣೆ ಕನ್ನಡ ಸಂಘದಲ್ಲಿ ವೈಶಿಷ್ಟ್ಯಪೂರ್ಣ ಶಿಕ್ಷಕರ ದಿನಾಚರಣೆ


Team Udayavani, Sep 9, 2018, 3:44 PM IST

0809mum04.jpg

ಪುಣೆ: ಕನ್ನಡ ಸಂಘ ಪುಣೆಯ ಕಾವೇರಿ ವಿದ್ಯಾ ಸಮೂಹದ ವತಿಯಿಂದ ಸೆ.  5ರಂದು  ಕನ್ನಡ ಸಂಘದ ಶಕುಂತಲಾ ಜಗನ್ನಾಥ ಶೆಟ್ಟಿ  ಸಭಾಗೃಹದಲ್ಲಿ  ಶಿಕ್ಷಕ ದಿನಾ ಚರಣೆಯನ್ನು ವೈಶಿಷ್ಟ್ಯಪೂರ್ಣವಾಗಿ  ನಡೆಸಲಾಯಿತು.

ಸಂಘದ ಅಧ್ಯಕ್ಷ ಕುಶಲ್‌ ಹೆಗ್ಡೆ ಅವರು ಸ್ವಾಗತಿಸಿ,  ಪ್ರಾಸ್ತಾವಿಕವಾಗಿ ಮಾತನಾಡಿ,  ಕನ್ನಡ ಸಂಘದ  ಮತ್ತು ಕಾವೇರಿ ವಿದ್ಯಾ ಸಮೂಹ ಸಂಸ್ಥೆಗಳ ಪ್ರಗತಿ, ಪರಂಪರೆ ಹಾಗೂ ಉತ್ತಮ ಬಾಂಧ‌ವ್ಯದಿಂದಾಗಿ ಪುಣೆಯಲ್ಲಿ ವಿಶೇಷವಾದ ವಿದ್ಯಾಸಂಸ್ಥೆಯೆಂದು ಗುರುತಿಸಿಕೊಂಡಿದೆ.  ಇಂದು ನಮ್ಮ ಸಂಸ್ಥೆಯು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುವಲ್ಲಿ, ಗಣನೀಯ ಬೆಳವಣಿಗೆಗಳಲ್ಲಿ ಪ್ರತಿಯೊಬ್ಬರೂ ಪಾಲು ದಾರರೆಂದು ತಿಳಿಸಲು ಅಭಿಮಾನವಾಗುತ್ತಿದೆ. ಸಂಘದ ವಿಶ್ವಸ್ತರು, ಅಧಿಕಾರಿಗಳು, ಶಿಕ್ಷಕರು, ಪಾಲಕರು ಮತ್ತು ವಿದ್ಯಾರ್ಥಿಗಳು ಎಲ್ಲ ಇಲ್ಲಿ ಒಂದೇ ಪರಿವಾರದ ಸದಸ್ಯರಾಗಿ¨ªಾರೆ. ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. ಭವಿಷ್ಯದಲ್ಲಿಯೂ ನಿಮ್ಮೆಲ್ಲರ ಸಹಕಾರ ನಿರಂತರವಾಗಿರಲಿ ಎಂದರು.

ಸಂಘದ ಕಾರ್ಯದರ್ಶಿ  ಮಾಲತಿ ಕಲ್ಮಾಡಿ ಸಂಘ  ವಿದ್ಯಾಸಮೂಹದ ಧ್ಯೇಯ ವಚನವನ್ನು ಎಲ್ಲರ ಜತೆಗೆ ಎದ್ದು ನಿಂತು ಒಟ್ಟಾಗಿ ಹೇಳಿದರು. ಸಂಘದ ವಿಶ್ವಸ್ತರಾದ ಅಡ್ವೊಕೇಟ್‌  ಪಿ. ನಾರಾಯಣ್‌ ಅವರು ಮಾತನಾಡಿ, ವಿದ್ಯಾ ಕ್ಷೇತ್ರದಲ್ಲಿನ ಅಂದಿನ ಮತ್ತು ಇಂದಿನ ಸ್ಥಿತಿಗತಿಗಳು, ಸ್ತ್ರೀ ಶಿಕ್ಷಣ, ಶಿಕ್ಷಣ ಹಾಗೂ ಆಧುನಿಕ ತಂತ್ರಜ್ಞಾನಗಳ ಬಗ್ಗೆ ವಿವೇಚನೆ ಮಾಡುತ್ತ ಪಾಲ್ಗೊಂಡ ಮಹಿಳಾ ಶಿಕ್ಷಕಿಯರ ಸಂಖ್ಯೆಯಲ್ಲಿನ ಗಣನೀಯ ಪ್ರಗತಿ ನಮ್ಮ ದೇಶದ ಪ್ರಗತಿಗೆ ಒಂದು ಆದರ್ಶ ಉದಾಹರಣೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ಉಪಾಧ್ಯಕ್ಷೆ  ಇಂದಿರಾ ಸಾಲ್ಯಾನ್‌  ಮಾತನಾಡಿ, ತಾನೊಬ್ಬಳು ಶಿಕ್ಷಕಿಯಾಗಿದ್ದು ಸಮಾಜದಲ್ಲಿ ದೈನಿಕ ಜೀವನದಲ್ಲಿ ಪ್ರತಿಯೊಬ್ಬರಿಗೂ ನಿರಂತರ ಕಲಿಕೆಯ ಅಗತ್ಯವಿದೆಯೆಂದು ಉದಾಹರಣೆಗಳನ್ನಿತ್ತು ತಮ್ಮ ಅನಿಸಿಕೆಗಳನ್ನು ಸರಳ-ಸುಂದರವಾಗಿ ವ್ಯಕ್ತಪಡಿಸಿದರು. ಈ ಸಂಭ್ರಮದಲ್ಲಿ ಸ್ಥಳೀಯ ಪೋಲಿಸ್‌ ಅಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಸಂಘದ ಪದಾಧಿಕಾರಿ ಮತ್ತು ಶಿಕ್ಷಕ ವರ್ಗಕ್ಕೆ  ಪುಷ್ಪಗುತ್ಛವನ್ನಿತ್ತು ಕನ್ನಡ ಸಂಘದ ಸಹಕಾರಕ್ಕೆ ಅಭಿನಂದನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ   ಹಾಲಿ ಮತ್ತು ಮಾಜಿ  ಶಿಕ್ಷಕ, ಶಿಕ್ಷಕಿ, ಪ್ರಾಧ್ಯಾಪಕ  ಮತ್ತು, ಶಿಕ್ಷಕೇತರ ಸಿಬಂದಿಯನ್ನು  ಅಧ್ಯಕ್ಷ ಕುಶಲ್‌ ಹೆಗ್ಡೆ, ಉಪಾಧ್ಯಕ್ಷ ಡಾ| ನಾರಾಯಣ್‌ ಹೆಗ್ಡೆ, ಉಪಾಧ್ಯಕ್ಷೆ ಇಂದಿರಾ ಸಾಲ್ಯಾನ್‌, ನ್ಯಾಯವಾದಿ ಪಿ. ನಾರಾಯಣ್‌ ಹಾಗೂ ಕೋಶಾಧಿಕಾರಿ ಶ್ರೀನಿವಾಸ್‌ ಆಳ್ವ  ಪ್ರಶಸ್ತಿಯನ್ನಿತ್ತು ಸತ್ಕರಿಸಿದರು. ಜನ ಸಂಪರ್ಕಾಧಿಕಾರಿ ರಾಮದಾಸ್‌ ಆಚಾರ್ಯ, ಆಡಳಿತ ನಿಯೋಜಕಿ ಕಾಮಿನಿ ಸಕ್ಸೇನಾ  ಉಪಸ್ಥಿತರಿದ್ದರು.

ಸಂಘದ  ವಿಶ್ವಸ್ತೆ  ರಾಧಿಕಾ ಶರ್ಮ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. 
ಆಡಳಿತಾಧಿಕಾರಿ ಪ್ರಸಾದ್‌  ಅಕೊಲ್ಕರ್‌ ವಂದಿಸಿದರು. ಆನಂತರ ಪ್ರಸಿದ್ಧ ಮರಾಠಿ ಹಾಸ್ಯ ಪ್ರವಚನಕಾರ ಸಂಜಯ ಉಪಾಧ್ಯೆ ಅವರಿಂದ ಒಂದು ಘಂಟೆಯ ಹಾಸ್ಯ ಪ್ರವ ಚನದಲ್ಲಿ ದಿನ ನಿತ್ಯದ ಇಂದಿನ ಬಿಡುವಿಲ್ಲದ ಜೀವನದಲ್ಲಿ ಕಲಿಯಬೇಕಾದ ಮತ್ತು ನಿರಂ ತರ ಮನಸ್ಸನ್ನು ಪ್ರಸನ್ನಗೊಳಿಸಿಕೊಂಡು ನಗು ನಗುತ್ತ ಹೇಗಿರಬೇಕು ಎಂಬುವುದನ್ನು ಮನೋಜ್ಞವಾಗಿ ತಿಳಿಸುತ್ತ ಎಲ್ಲರನ್ನೂ ನಗಿಸಿ   ಮಂತ್ರಮುಗ್ಧಗೊಳಿಸಿದರು.

ಕನ್ನಡ ಸಂಘದ ಈ ವರ್ಷದ ಕಾರ್ಯ ಕ್ರಮವು  ಸಂಘದ ಮಾಜಿ ಅಧ್ಯಕ್ಷ ದಿ| ಡಾ| ಕಲ್ಮಾಡಿ ಶಾಮರಾವ್‌ ಅವರ ಜನ್ಮಶತಾಬ್ದ ವರ್ಷದಲ್ಲಿ ನಡೆಯುತ್ತಿದ್ದು ಎಲ್ಲರೂ ಅವರ ಆದರ್ಶವನ್ನು ನೆನಪಿಸುತ್ತಾ  ಶಿಕ್ಷಕವೃಂದ  ಮತ್ತು  ವಿದ್ಯಾರ್ಥಿಗಳ ಬಗೆಗಿದ್ದ ಅವರ ಪ್ರೀತಿಯನ್ನು  ನೆನಪಿಸಿದರು.   

ಕನ್ನಡ ಸಂಘದ ಈ ಕಾರ್ಯಕ್ರಮದಲ್ಲಿ ವಿದ್ಯಾ ಸಂಸ್ಥೆಗಳ 450ಕ್ಕೂ ಮಿಕ್ಕಿ ಶಿಕ್ಷಕ ವೃಂದ  ಮತ್ತು ಶಿಕ್ಷಕೇತರ ಸಿಬಂದಿ  ಉಪಸ್ಥಿತರಿದ್ದರು. ಕೊನೆಯಲ್ಲಿ ಉಪಾಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. 

ವರದಿ : ಕಿರಣ್‌ ಬಿ. ರೈ ಕರ್ನೂರು

ಟಾಪ್ ನ್ಯೂಸ್

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.