CONNECT WITH US  

ಬಿಲ್ಲವರ ಅಸೋಸಿಯೇಶನ್‌ ಮೀರಾರೋಡ್‌:ಗುರು ಜಯಂತಿ ಉತ್ಸವ 

ಮುಂಬಯಿ: ಮಾನವೀಯ ಮೌಲ್ಯಗಳ ಅಡಿಯಲ್ಲಿ ವೈಜ್ಞಾನಿಕ, ಆಧ್ಯಾತ್ಮಿಕ ತಳಹದಿಯ ಮೇಲೆ ಸಂಘಟನೆಯನ್ನು ಕಟ್ಟಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು. ಧಾರ್ಮಿಕ, ಆರ್ಥಿಕ, ಸಾಮಾಜಿಕ ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಹಚ್ಚಿದ ಅವರ ಬದಲಾವಣೆಯ ಜ್ಯೋತಿ ಇಂದು ಮಾರ್ಗದರ್ಶನದ ನಂದಾದೀಪವಾಗಿದೆ. ಜನರ ಸಂಕಷ್ಟಗಳ ಉಪಶಮನವೇ ನಮ್ಮೆಲ್ಲರ ಗುರು ಕಾಣಿಕೆಯಾಗಬೇಕು ಎಂದು ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್‌. ಪೂಜಾರಿ ಅವರು ಅಭಿಪ್ರಾಯಿಸಿದರು.

ಸೆ. 7 ರಂದು ಅಪರಾಹ್ನ ಮೀರಾರೋಡ್‌ ಪೂರ್ವದ ಸಾಯಿಬಾಬಾ ನಗರದಲ್ಲಿರುವ ಥೋಮಸ್‌ ಕೆಥೋಲಿಕ್‌ ಚರ್ಚ್‌ ಸಭಾಗೃಹದಲ್ಲಿ ಬಿಲ್ಲವರ ಅಸೋಸಿಯೇಶನ್‌ ಮೀರಾರೋಡ್‌ ಸ್ಥಳೀಯ ಸಮಿತಿಯ 164 ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶೋಷಣೆ, ಅಸ್ಪೃಶ್ಯತೆಯನ್ನು ನಿರ್ಮೂಲನೆಗೊಳಿಸಿ ಆತ್ಮವಿಶ್ವಾಸದಿಂದ ಬದುಕುಲು ಸಂಘಟನೆಯ ಪಾತ್ರ ಹಿರಿದು. ತಳ ಮಟ್ಟದ ಸದಸ್ಯರಿಗೆ ಈ ಬಗ್ಗೆ ಅರಿವು ಮೂಡಿಸಲು ಬಿಲ್ಲವರ ಅಸೋಸಿಯೇಶನ್‌ ನಗರ, ಉಪನಗರ ಹಾಗೂ ತವರೂರು ಸೇರಿದಂತೆ ಎಲ್ಲಾ 23 ಸ್ಥಳೀಯ ಸಮಿತಿಗಳಲ್ಲಿ, ಬಿಲ್ಲವರ ಅಸೋಸಿಯೇಶನ್‌ ಪ್ರಾಯೋಜಿತ ಶೈಕ್ಷಣಿಕ ಕೇಂದ್ರ, ಭಾರತ್‌ ಬ್ಯಾಂಕ್‌ಗಳಲ್ಲಿ ವಿಭಿನ್ನ ದಿನಗಳಲ್ಲಿ ಶ್ರೀ ನಾರಾಯಣ ಗುರು ಜಯಂತಿ ದಿನಾಚರಣೆಯನ್ನು ಆಯೋಜಿಸಲಾಗಿದೆ ಎಂದು ನುಡಿದರು.

ಬಿಲ್ಲವರ ಅಸೋಸಿಯೇಶನ್‌ ಮೀರಾರೋಡ್‌ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ವಿಶ್ವನಾಥ ಎಂ. ಸಾಲ್ಯಾನ್‌ ಮಾತನಾಡಿ, ಆಧುನಿಕತೆಯ ರಭಸದಿಂದ ಮೌಲ್ಯಗಳು ಕ್ಷೀಣಿಸುತ್ತಿರುವ ಈ ಕಾಲಘಟ್ಟದಲ್ಲಿ ನಮ್ಮ ಸಂಸ್ಕಾರ, ಸಂಸ್ಕೃತಿ, ಸಂಪ್ರದಾಯಯಗಳು ಭದ್ರವಾಗಿದೆ ಎಂದು ಇಂದು ನೆರೆದ ಬೃಹತ್‌ ಭಕ್ತ ಸಮೂಹ ದೃಢಪಡಿಸಿವೆ. ಯುವ ಜನಾಂಗದ ಬಾಲಕ, ಬಾಲಕಿಯರು ಸಾಂಪ್ರದಾಯಿಕ ಉಡುಗೆಯಲ್ಲಿ ಕುಣಿತ ಭಜನೆ ಮತ್ತು ಸ್ತಿÅà ಪುರುಷರ ಜಪಯಜ್ಞ ಸನಾತನ ಧರ್ಮವನ್ನು ಉಳಿಸುವ ಮುನ್ಸೂಚನೆಯಾಗಿವೆ ಎಂದು ನುಡಿದರು.

ಗೌರವಾರ್ಪಣೆ
ಗೌರವ ಕಾರ್ಯದರ್ಶಿ ಎನ್‌. ಪಿ. ಕೋಟ್ಯಾನ್‌ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಅಸೋಸಿಯೆಶನಿನ ಸಾಧನೆಗಳನ್ನು ವಿವರಿಸಿ ದರು. ಸಮಾರಂಭದಲ್ಲಿ ಮೀರಾರೋಡ್‌ ರಾಜಕೀಯ ನೇತಾರ, ಮಾಜಿ ಎಂಎಲ್‌ಸಿ ಮುಜಾಫರ್‌ ಹುಸೇನ್‌, ಮಾಜಿ ಮೇಯರ್‌ ಗೀತಾ ಜೈನ್‌, ವಿವಿಧ ಸಂಘಟನೆಗಳ ಪ್ರತಿನಿಧಿ ಗಳನ್ನು, ದಾನಿಗಳನ್ನು, ಹಿತೈಷಿಗಳನ್ನು ಭಾರತ್‌ ಬ್ಯಾಂಕ್‌ ಸಾಂತಾಕ್ರೂಜ್‌ ಶಾಖೆಯ ಮುಖ್ಯ ಪ್ರಬಂಧಕ ದಯಾನಂದ ಅಮೀನ್‌, ಗೌರವ ಕಾರ್ಯಾಧ್ಯಕ್ಷ ಭೋಜ ಬಿ. ಸಾಲ್ಯಾನ್‌, ಉಪ ಕಾರ್ಯಾಧ್ಯಕ್ಷ ಸುಭಾಶ್‌ಚಂದ್ರ ಎಂ. ಕರ್ಕೇರ, ಸುಂದರ ಎ. ಪೂಜಾರಿ, ಕೋಶಾಧಿಕಾರಿ ಎಚ್‌. ಎಂ. ಪೂಜಾರಿ, ಜತೆ ಕೋಶಾಧಿಕಾರಿ ವಿಜಯ ಎನ್‌. ಅಮೀನ್‌, ಜತೆ ಕಾರ್ಯದರ್ಶಿ ಲೀಲಾ ಡಿ. ಪೂಜಾರಿ, ಕೇಂದ್ರ ಕಚೇರಿಯ ಪ್ರತಿನಿಧಿ ಮೋಹನ್‌ ಡಿ. ಪೂಜಾರಿ ಅವರು ಶಾಲು ಹೊದೆಸಿ, ಫಲಪುಷ್ಪ, ಪ್ರಸಾದದೊಂದಿಗೆ ಗೌರವಿಸಲಾಯಿತು.

ಪ್ರಾರಂಭದಲ್ಲಿ ಮೀರಾರೋಡ್‌ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸಾಂತಿಂಜ ಜನಾರ್ಧನ ಭಟ್‌ ಅವರ ಆಶೀರ್ವಚನದೊಂದಿಗೆ ದೀಪ ಬೆಳಗಿಸಿ ಧಾರ್ಮಿಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸುಂದರ ಎ. ಪೂಜಾರಿ, ಶ್ಯಾಮ್‌ ಅಮೀನ್‌, ಜೀವನ್‌ ಅಮೀನ್‌ ಅವರ ಪೌರೋಹಿತ್ಯದೊಂದಿಗೆ ಅಪರಾಹ್ನ ಭಜನೆ, ಜಪಯಜ್ಞ, ಮಂಗಳಾರತಿ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನೆರವೇರಿತು. ನಟ ಜಿ. ಕೆ. ಕೆಂಚನಕೆರೆ ಕಾರ್ಯಕ್ರಮ ನಿರ್ವಹಿಸಿದರು.
ಕೇಂದ್ರ  ಕಾರ್ಯಾಲಯದ ಕಾರ್ಯಕಾರಿ ಸಮಿತಿ, ಮಹಿಳಾ ಸದಸ್ಯೆಯರು,  ಸ್ಥಳೀಯ ಸಮಿತಿಗಳ ಪ್ರತಿನಿಧಿಗಳು, ವಿವಿಧ ಸಮುದಾಯ ಸಂಘಟನೆ, ತುಳು- ಕನ್ನಡಿಗ ಸಂಘ-ಸಂಸ್ಥೆ ಹಾಗೂ ರಾಜಕೀಯ ನೇತಾರರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು. 

ಚಿತ್ರ-ವರದಿ : ರಮೇಶ್‌ ಅಮೀನ್‌


Trending videos

Back to Top