CONNECT WITH US  

ದಹಿಸರ್‌: ವಾರ್ಷಿಕ ಲಕ್ಷ್ಮೀನಾರಾಯಣ ಹೃದಯ ಹವನ

ಮುಂಬಯಿ: ದಹಿಸರ್‌ ಪೂರ್ವದ ಸುಧೀಂದ್ರ ನಗರದಲ್ಲಿನ ಕಾಶೀ ಮಠದ‌ಲ್ಲಿ ಲಕ್ಷಿ¾à ನಾರಾಯಣ ಹೃದಯ ಹವನವು ಸೆ. 7 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ವೇದಮೂರ್ತಿ ಹರಿಖಂಡಿಗೆ ಉಲ್ಲಾಸ್‌ ಭಟ್‌ ಅವರ  ಪೌರೋಹಿತ್ಯದಲ್ಲಿ ಶಾಸ್ತ್ರೋಕ್ತವಾಗಿ ಶ್ರೀ ಲಕ್ಷಿ¾à ನಾರಾಯಣ ಹೃದಯ ಹವನ ನೆರವೇರಿಸಿ ನೆರೆದ ಸದ್ಭಕ್ತರನ್ನು ಹರಸಿದರು.

ಕಾಶೀ ಮಠ ಸಂಸ್ಥಾನದ ದೈವಕ್ಯ ಪರಮಪೂಜ್ಯ ಶ್ರೀಮದ್‌ ಸುಧೀಂದ್ರ ತೀರ್ಥ ಸ್ವಾಮೀಜಿ ಹಾಗೂ ಮಠಾಧಿಪತಿ ಶ್ರೀಮದ್‌ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರ ಅನುಗ್ರಹಗಳೊಂದಿಗೆ ಗೋಕರ್ಣ ಜನಾರ್ದನ ಭಟ್‌ ಮತ್ತಿತರ ವೈದಿಕರು  ಇತರ ಪೂಜಾದಿಗಳನ್ನು ನೆರವೇರಿಸಿದರು. ವೇದಮೂರ್ತಿ ಲಕ್ಷಿ¾àನಾರಾಯಣ ಭಟ್‌ ಹಾಗೂ ಬಳಗದಿಂದ  ಶಾಸ್ತ್ರೋಕ್ತವಾಗಿ ಪೂಜೆ, ಹವನ ಪಾರಾಯಣ ನಡೆಯಿತು.

ಪುಣ್ಯಾದಿ ಧಾರ್ಮಿಕ ಕಾರ್ಯ ಕ್ರಮದಲ್ಲಿ ಪ್ರಮುಖರಾಗಿ ಶೋಭಾ ವಿನಾಯಕ ಕುಲಕರ್ಣಿ, ಸುಗುಣಾ ಕಮಲಾಕ್ಷ ಕಾಮತ್‌, ಮೋಹನದಾಸ್‌ ಪಿ. ಮಲ್ಯ, ಸಾಣೂರು ಮನೋಹರ್‌ ವಿ. ಕಾಮತ್‌, ಸುಧಾಕರ ಕಾಮತ್‌ ಹಾಗೂ ಜಿಎಸ್‌ಬಿ ಸಭಾ ದಹಿಸರ್‌-ಬೊರಿವಲಿ, ಸಾರಸ್ವತ್‌ ಕಲ್ಚರಲ್‌ ಎಂಡ್‌ ರಿಕ್ರಿಯೇಶನ್‌ ಸೆಂಟರ್‌ನ ಪದಾಧಿಕಾರಿಗಳು ಸೇರಿದಂತೆ ಅನೇಕ ಗಣ್ಯರು, ನೂರಾರು ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು. ಸುಧೀಂದ್ರ ನಗರದ ಭಜನಾ ಮಂಡಳಿ ಇವರಿಂದ‌ ಭಜನಾ ಕಾರ್ಯಕ್ರಮ ನೆರವೇರಿತು.


Trending videos

Back to Top