ಕನ್ನಡ ವಿಭಾಗ ಮುಂಬಯಿ ವಿವಿ: ಕುವೆಂಪು ದತ್ತಿ ಉಪನ್ಯಾಸ ಮಾಲಿಕೆ


Team Udayavani, Sep 12, 2018, 3:42 PM IST

1009mum02.jpg

ಮುಂಬಯಿ: ಮುಂಬಯಿ ಯಲ್ಲಿ ಕನ್ನಡದ ಕೆಲಸವನ್ನು ಕಂಡು ತುಂಬಾ ಖುಷಿಯಾಗಿದೆ. ಇಲ್ಲಿ ನಿರಂತರವಾಗಿ ಸಾಹಿತ್ಯಿಕ ಕಾರ್ಯಗಳು ನೆರವೇರುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ| ಜಿ.ಎನ್‌. ಉಪಾಧ್ಯ ಅವರ ಕೃತಿಯನ್ನು ಲೋಕಾ ರ್ಪಣೆಗೊಳಿಸುವ ಸದಾವಕಾಶ ದೊರೆ ತಿರುವುದು ನನ್ನ ಪಾಲಿಗೆ ಸಂತಸದ ವಿಷಯವಾಗಿದೆ. ಸಂಶೋಧನ ಕೃತಿ ಎಂದರೆ ಅದು ಇರುವಿಕೆಯ ಸತ್ಯವನ್ನು ವಿಶ್ಲೇಷಿಸುವುದು. ಬಹಳ ಶ್ರಮವನ್ನು ಬಯಸುವ ಈ ಕೃತಿ ಕನ್ನಡ ಸಾಹಿತ್ಯ ಲೋಕಕ್ಕೆ ಅನುಪಮವಾದ ಕೊಡುಗೆ ಎಂದು ಆಳ್ವಾಸ್‌ ಕಾಲೇಜು ಮೂಡಬಿದಿರೆ ಇದರ ಪ್ರಾಧ್ಯಾಪಕರಾದ ಸಾಹಿತಿ ಅನು ಬೆಳ್ಳೆ ಅವರು ಹೇಳಿದರು.

ಸಾಂತಾಕ್ರೂಜ್‌ ಪೂರ್ವದ ವಿದ್ಯಾನಗರಿಯ ಮರಾಠಿ ಭಾಷಾ ಭವನದಲ್ಲಿ ಕವಿವರ್ಯ ಕುಸುಮಾಗ್ರಜದಲ್ಲಿ  ಸೆ. 8ರಂದು ಪೂರ್ವಾಹ್ನ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯವು ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್‌ ಉಪಾಧ್ಯ ಅಧ್ಯಕ್ಷತೆಯಲ್ಲಿ ಕೃತಿಗಳ ಬಿಡುಗಡೆ ಮತ್ತು ಅಭಿನಂದನ ಕಾರ್ಯಕ್ರಮ, ರಾಷ್ಟ್ರಕವಿ ಕುವೆಂಪು ದತ್ತಿ ಉಪನ್ಯಾಸ ಮಾಲಿಕೆ ನೆರವೇರಿಸಿತು. ಖ್ಯಾತ ಕವಿ, ಪದ್ಮಶ್ರೀ ಪುರಸ್ಕೃತ ಡಾ| ದೊಡ್ಡ ರಂಗೇಗೌಡ, ಖ್ಯಾತ ವಾಗ್ಮಿ ವೈ.ವಿ. ಗುಂಡೂರಾವ್‌, ಪ್ರಾಧ್ಯಾಪಕಿ ಗೀತಾ ವಸಂತ್‌,  ಬಂಟರ ಸಂಘ ಮುಂಬಯಿ ಇದರ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆರ್ಥಿಕ ತಜ್ಞ ಡಾ| ಆರ್‌.ಕೆ.ಶೆಟ್ಟಿ, ಮಿತ್ರವೃಂದ ಮುಲುಂಡ್‌ ಇದರ ಮುಖ್ಯಸ್ಥರುಗಳಾದ ಎಸ್‌.ಕೆ ಸುಂದರ್‌ ಮತ್ತು ಎ.ನರಸಿಂಹ ಇವರ ಉಪಸ್ಥಿತಿಯಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಡಾ| ಜಿ.ಎನ್‌. ಉಪಾಧ್ಯ ಅವರ “ಮಹಾರಾಷ್ಟ್ರದ ಕನ್ನಡ ಶಾಸನಗಳ ಸಾಂಸ್ಕೃತಿಕ ಮಹತ್ವ’ ಕೃತಿಯನ್ನು ಅನು ಬೆಳ್ಳೆ ಬಿಡುಗಡೆಗೊಳಿಸಿ ಮಾತನಾಡಿದರು. ಮಧ್ಯಾಂತರದಲ್ಲಿ ಘಟಿಕೋತ್ಸವ ಕಾರ್ಯಕ್ರಮ ನಡೆಸಲಾಗಿದ್ದು, ಮುಂಬಯಿ ವಿವಿ ಕನ್ನಡ ವಿಭಾಗದಿಂದ ಪಿಎಚ್‌ಡಿ ಪದವಿ ಪಡೆದ ಸುರೇಖಾ ನಾಯಕ್‌ (ರಾಧಾಕೃಷ್ಣ ನಾಯಕ್‌ ಅವರನ್ನೊಳಗೊಂಡು) ಮತ್ತು ಎಂ.ಫಿಲ್‌ ಪದವಿ ಪಡೆದ ರೂಪಾ ಸಂಗೊಳ್ಳಿ ಅವರಿಗೆ ಗೀತಾ ವಸಂತ್‌ ಅವರು ಶಾಲು ಹೊದೆಸಿ ಸ್ವರ್ಣಪದಕದೊಂದಿಗೆ ಗೌರವಿಸಿದರು.

ನಾಡಿನ ಹೆಸರಾಂತ ಕವಿ, ಪದ್ಮಶ್ರೀ ಪ್ರಶಸ್ತಿ ವಿಜೇತ ಡಾ| ದೊಡ್ಡರಂಗೇಗೌಡ ಬೆಂಗಳೂರು ಅವರು “ನವೋದಯ ಕನ್ನಡ ಕಾವ್ಯ ಮತ್ತು ನಾನು’ ವಿಷಯದಲ್ಲಿ ಮಾತನಾಡಿ, ಸ್ವಸ್ಥ ಸಾಹಿತ್ಯದ ವಾತಾವರಣ ಮುಂಬಯಿಯಲ್ಲಿದೆ. ಕನ್ನಡ ವಿಭಾಗದ ಸೇವೆ ಅನುಪಮ. ಮಾನವ ಲೋಕದಲ್ಲಿ ಕುವೆಂಪು ಆದರ್ಶ ವ್ಯಕ್ತಿ ಆಗಿದ್ದಾರೆ. ಕನ್ನಡ ನವೋದಯದ ಅಂತರಂಗದಲ್ಲಿ ಅಂತರ್ಗತವಾಗಿದ್ದಾರೆ. ಇವರ 

ಓದುಗ ವರ್ಗವೇ ಭಿನ್ನವಾದುದು. ನಾನೂ ಜಾನಪದ ಗೀತೆಗಳಿಗೆ ಪ್ರಭಾವಿತನಾಗಿ ಈ ಮಟ್ಟಕ್ಕೆ ಬೆಳೆದೆ ಎನ್ನುತ್ತಾ ಕನ್ನಡ ವಿಭಾಗಕ್ಕೆ ತಮ್ಮ ಪರಿವಾರದ ಪರವಾಗಿ 10ನೇ ದತ್ತಿಯನ್ನು ಘೋಷಿಸಿದರು.

ಹೆಸರಾಂತ ವಾಗ್ಮಿ ವೈ. ವಿ. ಗುಂಡೂರಾವ್‌ ಅವರು “ಕನ್ನಡ ಸಾಹಿತ್ಯದಲ್ಲಿ ಹಾಸ್ಯ’ ವಿಷಯವಾಗಿ ಉಪನ್ಯಾಸಗೈದ‌ು ನಗು, ಅಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸಮಾನವಾಗಿ ಸ್ವೀಕರಿಸಬೇಕು. ಅದಕ್ಕೆ ಅದರದ್ದೇ ಆದ ಪರಿಭಾಷೆಯಿರುತ್ತದೆ. ನಾವು ಮಾತನಾಡುವಾಗ ಸತ್ಯ ಹೇಳಿದರೆ ಅದನ್ನು ಜೀರ್ಣಿಸೋದು ಕಷ್ಟ. ಯಾಕೆಂದರೆ ಸತ್ಯ ರಂಜಿಸುತ್ತದೆ. ಸುಳ್ಳು ಅಂಜಿಸುತ್ತದೆ. ಸತ್ಯವನ್ನು ಪ್ರಿಯವಾಗುವ ಹಾಗೆ ಹೇಳುವ ಪರಿಯನ್ನು ಬೀಚಿಯವರು ಸೊಗಸಾಗಿ ಹೇಳಿದ್ದಾರೆ ಎಂದು ಕೈಲಾಸಂ, ಬೀಚಿ ಮೊದಲಾದವರ ಹಾಸ್ಯದ ಪರಿ, ಸ್ವತಃ ಗುಂಡೂರಾವ್‌ ಅವರ ಅಣಕು ಹಾಡುಗಳನ್ನು ಹಾಡಿ ಸಭಿಕರನ್ನು ರಂಜಿಸಿದರು.

ಡಾ| ಆರ್‌.ಕೆ.ಶೆಟ್ಟಿ ಮಾತನಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಮಾರು 45 ದೇಶಗಳನ್ನು ಸುತ್ತಿ ಬಂದವನು ನಾನು. ಎಲ್ಲಿ ಹೋದರೂ ನಮ್ಮ ಭಾರತ ದೇಶಕ್ಕೆ ಸಿಗುವ ಮರ್ಯಾದೆ   ಗೌರವ ಅದು ನಮ್ಮ ಸಾಹಿತ್ಯ ಸಂಸ್ಕೃತಿಯಿಂದ, ನಮ್ಮ ಆಚಾರ ವಿಚಾರಗಳಿಂದ. ಡಾ| ದೊಡ್ಡರಂಗೇಗೌಡರ ಹಾಗೂ ಇತರ ನನ್ನ ಮೆಚ್ಚಿನ ಹಾಡುಗಳನ್ನು ಮತ್ತೆ ಮೆಲುಕುಹಾಕುವಂತಾಯಿತು. ನನ್ನ ಬಿಡುವಿಲ್ಲದ ಕೆಲಸಗಳ ಮೇಲೆ ಇದನ್ನೆಲ್ಲ ಎಲ್ಲೋ ಮರೆಯುತ್ತಿದ್ದೇನೆಯೋ ಎಂಬ ನೋವು ಕೂಡಾ ಕಾಡಿತು. ಈ ಸಾಹಿತ್ಯ ಸಂಸರ್ಗದಿಂದ ಆನಂದತುಂದಿಲನಾಗಿದ್ದೇನೆ ಎಂದು ಅವರು ಹರ್ಷ ವ್ಯಕ್ತ ಪಡಿಸಿದರು.

ಕರ್ನಾಟಕ ಮಹಾರಾಷ್ಟ್ರ ರಾಜ್ಯಗಳು ಸಹೋದರತ್ವವುಳ್ಳವು. ಮಹಾರಾಷ್ಟ್ರದ ಇತಿಹಾಸ ಚಿಕ್ಕದು ಎಂದೆನಿಸಿದರೂ ಅದರ ಭೌಗೋಳಿಕ ವಿಸ್ತಾರ ಬಹಳ ದೊಡ್ಡದು. ಉಭಯ ರಾಜ್ಯಗಳಲ್ಲಿ ಕನ್ನಡದ ಸಾವಿರಾರು ಶಾಸನಗಳಿವೆ. ಪ್ರಸಕ್ತ ಜನರಲ್ಲಿ ಇತಿಹಾಸದಲ್ಲಿ ತೀವ್ರ ಅವಜ್ಞ ತರವಲ್ಲ. ಕಾರಣ ವರ್ತಮಾನದಲ್ಲಿ ಇತಿಹಾಸಗಳೇ ಬದುಕನ್ನು ಬಿಂಬಿಸುತ್ತವೆ. ಆದುದರಿಂದ ಇತಿಹಾಸದ ಬಗ್ಗೆ ಆಸಕ್ತಿ, ಅಭಿಮಾನ ಪಡಬೇಕು. ಭಾಷೆ ಭಾಷೆಗಳಲ್ಲಿ ಸಂಬಂಧ ಬೆಳೆದಾಗ ಇತಿಹಾಸ ಪೂರಕವಾಗುತ್ತದೆ. ಇದನ್ನೆಲ್ಲಾ ಮೈಗೂಡಿಸಬಲ್ಲ ಕನ್ನಡಿಗರು ಹೊಸ ತಲೆಮಾರಿನ ವಾರಿಸ‌ದಾರರು ಆಗಬಹುದು ಎನ್ನುತ್ತಾ  ಡಾ| ಜಿ.ಎನ್‌ ಉಪಾಧ್ಯ ಕೃತಿಯ ಹಿನ್ನಲೆ ತಿಳಿಸಿದರು.
ಕು| ಶ್ರಾವ್ಯಾ ಶೆಟ್ಟಿ ಕಾವ್ಯ ವಾಚನಗೈದರು. ಡಾ| ಜಿ.ಎನ್‌ ಉಪಾಧ್ಯ ಗಣ್ಯರಿಗೆಲ್ಲರಿಗೂ ಶಾಲು ಹೊದಿಸಿ ಗ್ರಂಥ ಗೌರವ ನೀಡಿ ಗೌರವಿಸಿದರು. ಕನ್ನಡ ಸಹ ಪ್ರಾಧ್ಯಾಪಕ ಡಾ| ಗುರುಸಿದ್ಧಯ್ಯ  ಸ್ವಾಮಿ ಅಕ್ಕಲಕೋಟೆ ಕೃತಿ ವಿಮರ್ಶೆಗೈದರು.

ನಳಿನಾ ಪ್ರಸಾದ್‌ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಸಿದರು. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಸುಧಾಕರ್‌ ಶೆಟ್ಟಿ ವಂದಿಸಿದರು. 

ಆಕಾಶವಾಣಿ ಮುಂಬಯಿ ಕನ್ನಡ ವಿಭಾಗದ ಕಾರ್ಯಕ್ರಮ ನಿರ್ವಹಣಾಧಿಕಾರಿ ಸುಶೀಲಾ ಎಸ್‌. ದೇವಾಡಿಗ ಇವರ ಮುಂದಾಳತ್ವದಲ್ಲಿ ಇದೇ ಮೊದಲಿಗೆ ಕನ್ನಡ ಕಾರ್ಯ ಕ್ರಮವನ್ನು ಆಕಾಶವಾಣಿಗಾಗಿ ಧ್ವನಿ ಮುದ್ರಣ ಮಾಡಲಾಯಿತು.  

ಚಿತ್ರ-ವರದಿ: ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ

Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ

Desi Swara: ಟ್ರೆಂಟ್‌ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …

Desi Swara: ಟ್ರೆಂಟ್‌ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …

Desi Swara: ಬಸ್‌ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ

Desi Swara: ಬಸ್‌ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ

Desi Swara: ಕನ್ನಡಿಗಾಸ್‌ ಸ್ಟಾರ್‌ ಅವಾರ್ಡ್‌ 2024 ಪ್ರದಾನ

Desi Swara: ಕನ್ನಡಿಗಾಸ್‌ ಸ್ಟಾರ್‌ ಅವಾರ್ಡ್‌ 2024 ಪ್ರದಾನ

Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ

Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Narayan Gowda: ಹೆಚ್ಚಿನ ಮತಗಳಿಂದ ಎಚ್‌ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ

Narayan Gowda: ಹೆಚ್ಚಿನ ಮತಗಳಿಂದ ಎಚ್‌ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.