CONNECT WITH US  

"ಮಲೈಕಾ' ಸಂಸ್ಥೆಯ "ಯಸೋಮಾ' ಬ್ರ್ಯಾಂಡ್‌  ಉತ್ಪನ್ನಗಳು ಮಾರುಕಟ್ಟೆಗೆ ಬ

"ಮಲೈಕಾ' ಸಂಸ್ಥೆಯ "ಯಸೋಮಾ' ಬ್ರ್ಯಾಂಡ್‌  ಉತ್ಪನ್ನಗಳು ಮಾರುಕಟ್ಟೆಗೆ

ಮುಂಬಯಿ: ಗೃಹೋಪ ಯೋಗಿ ವಸ್ತುಗಳ ಪ್ರದರ್ಶನ ಮತ್ತು  ಮಾರಾಟಕ್ಕೆ ಮನೆಮಾತಾಗಿರುವ  ಮಲಾೖಕಾ ಅಪ್ಲೈಯನ್ಸಸ್‌  ಲಿಮಿಟೆಡ್‌ ಸಂಸ್ಥೆಯು ಸ್ವ ಉತ್ಪನ್ನವಾಗಿಸಿ "ಯಸೋಮಾ' ಬ್ರಾÂಂಡ್‌ ಮುಖೇನ ಸಿದ್ಧಪಡಿಸಿದ ವೈಡ್‌ ರೇಂಜ್‌ ಆ್ಯಂಡ್‌ ಶಾರ್ಪ್‌ ಆ್ಯಂಡ್‌ ಸ್ಮಾರ್ಟ್‌ ಟೆಕ್ನಾಲಜಿ  ಎಲ್‌ಇಡಿಗಳು ಹಾಗು ವಿವಿಧ ಗೃಹೋ ಪಯೋಗಿ ವಸ್ತುಗಳನ್ನು ನ. 1 ರಂದು ಮಂಗಳೂರು ಪಳ್ನೀರ್‌ನ ಮಿಲಾಗ್ರಿಸ್‌ ಚರ್ಚ್‌ ಸಭಾಗೃಹದಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.

ಮಲಾೖಕಾ ಸಂಸ್ಥೆಯ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ  ಗಿಲ್ಬರ್ಟ್‌ ಬ್ಯಾಪ್ಟಿಸ್ಟ್‌ ಸಾರಥ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಸೈಂಟ್‌ ಲಾರೆನ್ಸ್‌ ಚರ್ಚ್‌ ಬೋಂದೆಲ್‌ ಇದರ ಪ್ರಧಾನ ಧರ್ಮಗುರು ರೆ| ಫಾ| ಆ್ಯಂಡ್ರೂ ಲಿಯೊ ಡಿ'ಸೋಜಾ ಅವರು ಆಶೀರ್ವಚನಗೈದು "ಯಸೋಮಾ' ಬ್ರಾÂಂಡ್‌ನ‌ 65 ಇಂಚಿನ  ಎಲ್‌ಇಡಿ ಟಿವಿಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಚಲನಚಿತ್ರ ನಟ, ಸಮಾಜ ಸೇವಕ  ಸ್ಟಾ Âನಿ ಅಲ್ವಾರಿಸ್‌ ಮತ್ತಿತರ‌ ಗಣ್ಯರು ಉಪಸ್ಥಿತರಿದ್ದು ಮೊತ್ತಮೊದಲ "ಯಸೋಮಾ' ಬ್ರಾÂಂಡ್‌ ಗƒಹಪಯೋಗಿ ವಸ್ತುಗಳ ಪ್ರದರ್ಶನಕ್ಕೆ ಚಾಲನೆ ನೀಡಿದರು.

 ಪ್ರಧಾನ ಧರ್ಮಗುರು ರೆ| ಫಾ| ಆ್ಯಂಡ್ರೂ ಲಿಯೊ ಡಿ'ಸೋಜಾ ಅವರು ಮಾತನಾಡಿ, ಬಂಧುತ್ವದ ಬದುಕು ಮನುಷ್ಯನಿಗೆ ನಿಜ ಜೀವನವಾಗಿದೆ. ವೈರತ್ವದಿಂದ ಏನೂ ಸಾಧಿಸಲಾಗದು. ನಾವೆಲ್ಲರೂ  ಅನ್ಯೋನ್ಯದಿಂದ ಅರಿತು  ಬಾಳಿದಾಗ ಜೀವನ ಪಾವನವಾಗುತ್ತದೆ. ಯಾವುದು ಒಳಿತು ಇದೆಯೋ ಅದನ್ನು ಪ್ರೋತ್ಸಾಹಿಸಬೇಕು. ಇದರಿಂದ ಪ್ರತಿಯೊಬ್ಬರಿಗೂ ಅನು ಕೂಲವಾಗುತ್ತದೆ ಎಂದರು.
ಮಲಾೖಕಾ ಸಂಸ್ಥೆಯ ಸಿಎಂಡಿ ಗಿಲ್ಬರ್ಟ್‌ ಬ್ಯಾಪ್ಟಿಸ್ಟ್‌ ಅವರು ಮಾತನಾಡಿ, ಗೃಹಪಯೋಗಿ ವಸ್ತುಗಳ ಸೇವೆಯಲ್ಲಿ ಮಲಾೖಕಾ ಸಂಸ್ಥೆಯು ಕಳೆದ ಮೂರೂವರೆ ದಶಕಗಳಿಂದ ಅಪಾರ ಅನುಭವವನ್ನು ಹೊಂದಿದೆ. ಅಂತಾರಾಷ್ಟ್ರೀಯ ಸಂಸ್ಥೆಗಳ ಗೃಹಪಯೋಗಿ ವಸ್ತುಗಳ ಜತೆಜತೆಗೆ ನಮ್ಮ ಸ್ವ ನಿರ್ಮಿತ ಗೃಹೋಪಯೋಗಿ ವಸ್ತುಗಳನ್ನೂ ಮಾರಾಟ ಮಾಡುತ್ತಿದ್ದೇವು. ಆದರೆ ಭಾರತದಲ್ಲಿನ ಮಧ್ಯಮ ಹಾಗೂ ಜನಸಾಮಾನ್ಯರ ಬಳಕೆಗೆ ಎಲ್ಲವೂ ಸುಲಭ ಸಾಧ್ಯವಾಗುತ್ತಿರಲಿಲ್ಲ.  ಇಲ್ಲಿನ ಜನತೆಯ ಅಗತ್ಯಕ್ಕೆ ತಕ್ಕಂತೆ, ವಿದ್ಯುತ್ಛಕ್ತಿ ಬಳಕೆ, ಮಿತದರ ಎಲ್ಲವನ್ನೂ ಅನುಸರಿಸಿಕೊಂಡು ಗ್ರಾಹಕರ ಅನುಕೂಲತೆಗೆ ಅನು ಗುಣವಾಗಿ ನಮ್ಮದೇ ಸ್ವಂತ "ಯಸೋಮಾ' ಬ್ರಾÂಂಡ್‌ ಮೂಲಕ ಗೃಹೋಪಯೋಗಿ ವಸ್ತುಗಳನ್ನು ಸಿದ್ಧಪಡಿಸಿ ಜನಮನಕ್ಕೆ ಸ್ಪಂದಿಸಿದ್ದೇವೆ. ವಿಶೇಷವಾಗಿ ಯಸೋಮಾ ಎಲ್‌ಇಡಿ, ಸ್ಮಾರ್ಟ್‌ ಟಿವಿ, ಅಲ್ಟ್ರಾ ಎಚ್‌ಡಿ ಟಿವಿ, ಎಲ್‌ಇಡಿ ಟಿವಿ ಲೆಡ್‌, ಮಿಕ್ಸರ್‌ ಗೆùಂಡರ್‌, ಇಂಡಕ್ಷನ್‌ ಕುಕ್ಕರ್‌, ಆರೋಗ್ಯದಾಯಕ ಸೇವನೆಗಾಗಿ ವಾಟರ್‌ ಪ್ಯೂರಿಪಯರ್‌ ಇನ್ನಿತರ ವಸ್ತುಗಳನ್ನು ಗ್ರಾಹಕರಿಗೆ ಒದಗಿಸಿ ದ್ದೇವೆ. ಇದೀಗ ಸ್ವಂತಿಕೆಯ ಉತ್ಪನ್ನ ತಯಾರಿಕೆಗಳೊಂದಿಗೆ ಗ್ರಾಹರ ಸದಾಶಯಗಳೊಂದಿಗೆ ದೊಡ್ಡ ಸಂಸ್ಥೆಯಾಗಿ ಬೆಳೆಯುತ್ತಿದೆ. ಈ ಬೆಳವಣಿಯಲ್ಲಿ  ಬ್ರಾÂಂಡ್‌ಲೈಕಾ ಸಿಬಂದಿ, ಪರಿವಾರದ ಶ್ರಮ ಅನನ್ಯವಾಗಿದೆ ಎಂದರು.

ಮಲಾೖಕಾ  ಸಂಸ್ಥೆಯ ರಾಷ್ಟ್ರೀಯ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ನೈಝಿಲ್‌ ಪಿಂಟೋ ಮಾತನಾಡಿ, ಉತ್ಪಾದನ ಹಾಗೂ ರಿಯಾಯಿತಿ ದರದ ಸೇವೆಯನ್ನು ವಿವರಿಸಿ, ಎಲೆಕ್ಟ್ರಾನಿಕ್‌ ಕ್ಷೇತ್ರದಲ್ಲಿ ನಮ್ಮ ಸಂಸ್ಥೆಯು ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ಸ್ವಂತಿಕೆಯ  ವಸ್ತು ಗಳನ್ನು ಉತ್ಪಾ ದಿಸುವಲ್ಲಿ  ಯಶಕಂಡಿದೆ. ಮಾರು ಕಟ್ಟೆಯಲ್ಲಿ ದೊರೆಯುವಂತಹ ಮಿಕ್ಸರ್‌ ಗೆùಂಡರ್‌ಗಿಂತ ಆಧುನಿಕ ಪ್ರಮಾಣದ ವಾಲ್ಟ್Õ ಅಳವಡಿಸಿ ಮಿಕ್ಸರ್‌ ಗೆùಂಡರ್‌ ಸಿದ್ಧಪಡಿಸಲಾಗಿದೆ. ದೀರ್ಘಾವಧಿ ಬಳಕೆಗೆ ಯೋಗ್ಯವಾದ ಇದನ್ನು ಬಡವರಿಂದ ಶ್ರೀಮಂತರೂ ಉಪಯೋಗಿಸಿ ಭರವಸೆ ಮೂಡಿಸ ಲಾಗಿದೆ.  ನಮ್ಮ ಸಾಧನೆಗೆ ಪೂರಕ ವಾಗಿರುವ ಸಂಸ್ಥೆಯ ಎಲ್ಲಾ ಹಿತೈಷಿಗಳು, ಷೇರುದಾರರು, ಗ್ರಾಹಕರಿಗೆ, ವಿತರಕರಿಗೆ, ಉತ್ಪಾದನ ಹಾಗೂ ಮಾರುಕಟ್ಟೆಯ ಸರ್ವರಿಗೂ ಮಲಾೖಕಾ ಸಮೂಹವು ಕೃತಜ್ಞತೆ ಸಲ್ಲಿಸುತ್ತಿದೆ ಎಂದರು.

ಮಲಾೖಕಾ ಸಂಸ್ಥೆಯ ಉನ್ನತಾಧಿಕಾರಿಗಳಾದ ಸಿರಿಲ್‌ ವೇಗಸ್‌, ಲೋಯಲ್‌ ಬ್ಯಾಪ್ಟಿಸ್ಟ್‌, ಸತೀಶ್‌ ಕುಲಾಲ್‌, ನವೀನ್‌ ಪೂಜಾರಿ, ವಿನ್ಸೆಂಟ್‌ ಬ್ಯಾಪ್ಟಿಸ್ಟ್‌,  ರಾಹುಲ್‌ ಜೈನ್‌, ಅಮುಖ್‌ ನಾಯಕ್‌, ರತ್ನಾ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು. 
ಸಂಸ್ಥೆಯ ಸರ್ವೋತ್ತಮ ಗ್ರಾಹಕರೆನಿದ ಹಿಲರಿ ಕುಟಿನ್ಹಾ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಮಲಾೖಕಾ  ಸಂಸ್ಥೆಯ ಕರ್ನಾಟಕ ಪ್ರಾದೇಶಿಕ ಕಾರ್ಯನಿರ್ವಹಣಾ ಅಧಿಕಾರಿ ರೀನಾ ಸ್ವಾಗತಿಸಿದರು. ಅವಿನಾಶ್‌ ಡಿ'ಸೋಜಾ ಕಾರ್ಯಕ್ರಮ ನಿರೂಪಿಸಿದರು. ಮಾರ್ಲಿನ್‌ ಗೋಮ್ಸ್‌  ವಂದಿಸಿದರು.

ಮಲಾೖಕಾ ಸಂಸ್ಥೆಯು ಸ್ವಂತಿಕೆಯ "ಯಸೋಮಾ' ಬ್ರ್ಯಾಂಡ್‌ನ‌ ಮಿಕ್ಸರ್‌ ಗೆùಂಡರ್‌ನ್ನು ಉತ್ಪಾದಿಸಿ ಗ್ರಾಹಕರಿಗೆ ಒದಗಿಸುತ್ತಿದೆ. ಎಲ್ಲ ಬ್ರ್ಯಾಂಡ್‌ಗಳ ಗೃಹೋಪಯೋಗಿ, ಇನ್ನಿತರ ವಸ್ತುಗಳ ಖರೀದಿಯಲ್ಲೂ ಆತ್ಯಾಕರ್ಷಕ ಹಾಗೂ ರಿಯಾಯಿತಿ ದರಗಳ ಲಾಭಾಂಶ ನೀಡುತ್ತಿದೆ. ಮುಂಬಯಿ ನಗರಾದ್ಯಂತ ಅನೇಕ ಶಾಖೆಗಳ ಮುಖೇನ ವ್ಯವಹರಿಸುತ್ತಿರುವ ಸಂಸ್ಥೆಯ ಉತ್ಪಾದಿತ ಗೃಹೋಪಯೋಗಿ ಸಾಮಗ್ರಿಗಳನ್ನು ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ತೊಕ್ಕೊಟ್ಟು, ಬಿಸಿ ರೋಡ್‌, ವಿಟ್ಲ, ಪುತ್ತೂರು ಇಲ್ಲಿನ  ಶಾಖೆಗಳಲ್ಲಿ ವಿತರಿಸುತ್ತಿದೆ. ಮಲಾೖಕಾ ಕೋ. ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ ಮೂಲಕ ತನ್ನ ಗ್ರಾಹಕರಿಗೆ ಅನುಕೂಲಕರ ಸೇವೆ, ಸೊಸೈಟಿ ವ್ಯವಹಾರದೊಂದಿಗೆ ಗೃಹೊಪಯೋಗಿ ವಸ್ತುಗಳನ್ನೂ ಖರೀದಿಸುವ ಅವಕಾಶ  ಒದಗಿಸುತ್ತಿದೆ.
 
ಚಿತ್ರ-ವರದಿ: ರೋನ್ಸ್‌  ಬಂಟ್ವಾಳ್‌

Trending videos

Back to Top