CONNECT WITH US  

ಪುಣೆ ಬಂಟರ ಸಂಘ: ಪದಾಧಿಕಾರಿಗಳಿಂದ ಶಿರ್ಡಿ ಯಾತ್ರೆ

ಪುಣೆ: ಪುಣೆ ಬಂಟರ ಸಂಘದ ಪದಾಧಿಕಾರಿ ಗಳು ನ. 1 ರಂದು ಮಹಾರಾಷ್ಟ್ರದ ಪವಿತ್ರ ಧಾರ್ಮಿಕ ಕ್ಷೇತ್ರವಾದ ಶಿರ್ಡಿ ಸಾಯಿಬಾಬಾ ದೇವಸ್ಥಾನ, ಶನಿಶಿಂಗಾ¡ಪುರ, ರಾಂಜನ್‌ ಗಾಂವ್‌ ಕ್ಷೇತ್ರಗಳನ್ನು ಸಂದರ್ಶಿಸಿ ದೇವರ ದರ್ಶನವನ್ನು ಪಡೆದರು.

ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು ಅವರ ನೇತೃತ್ವದಲ್ಲಿ ಸಂಘದ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗ, ಉತ್ತರ ಹಾಗೂ ದಕ್ಷಿಣ ಪ್ರಾದೇಶಿಕ ಸಮಿತಿ ಸದಸ್ಯರೆಲ್ಲರೂ ಬೆಳಗ್ಗೆ ಬಸ್ಸಿನ ಮೂಲಕ ಸಂಘದ ಭವನದಿಂದ ಯಾತ್ರೆಗೆ ಹೊರಟಿದ್ದರು.

ಸಂಘದ  ಕಾರ್ಯದರ್ಶಿ ಸತೀಶ್‌ ಶೆಟ್ಟಿ, ಕೋಶಾಧಿಕಾರಿ ಶ್ರೀನಿವಾಸ ಶೆಟ್ಟಿ, ಶಿಕ್ಷಣ ಮತ್ತು ಸಾಮಾಜಿಕ ಸಮಿತಿ ಕಾರ್ಯಾಧ್ಯಕ್ಷ ಚಂದ್ರಶೇಖರ ಶೆಟ್ಟಿ ನಿಟ್ಟೆ, ಕ್ರೀಡಾ ಸಮಿತಿ 

ಕಾರ್ಯಾಧ್ಯಕ್ಷ ವಿವೇಕಾನಂದ ಶೆಟ್ಟಿ ಆವರ್ಸೆ, ಪ್ರಶಾಂತ್‌ ಶೆಟ್ಟಿ ಹೆರ್ಡೆಬೀಡು, ಸುಂದರ್‌ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷ ಸಂಧ್ಯಾ ವಿ. ಶೆಟ್ಟಿ, ಕಾರ್ಯದರ್ಶಿ ಸುಲತಾ ಎಸ್‌. ಶೆಟ್ಟಿ, ಸುಚಿತ್ರಾ ಎಸ್‌. ಶೆಟ್ಟಿ, ಶಮ್ಮಿ ಎ. ಹೆಗ್ಡೆ, ದಿವ್ಯಾ ಎಸ್‌ ಶೆಟ್ಟಿ ಮತ್ತಿತರರು ಯಾತ್ರೆಯಲ್ಲಿ ಪಾಲ್ಗೊಂಡರು. 

ವರದಿ: ಕಿರಣ್‌ ಬಿ. ರೈ ಕರ್ನೂರು

Trending videos

Back to Top