CONNECT WITH US  

ಮುಲುಂಡ್‌ ಬಂಟ್ಸ್‌  ವಾರ್ಷಿಕೋತ್ಸವ: ನಾಟಕ ಮುಹೂರ್ತ 

ಮುಂಬಯಿ: ಮುಲುಂಡ್‌ ಬಂಟ್ಸ್‌ ವಾರ್ಷಿಕೋತ್ಸವ ಸಂದರ್ಭದಲ್ಲಿ ಇದರ ಸದಸ್ಯರು ಪ್ರದರ್ಶಿಸಲಿರುವ ಮೆಲೆತ್ತ ಮಹಿಮೆ ಪಶ್ಚಿಮದ ಮುಲುಂಡ್‌ ನಾಟಕದ ಮುಹೂರ್ತವು ಮುಲುಂಡ್‌ ಪಶ್ಚಿಮದ ಮುಲುಂಡ್‌ ಬಂಟ್ಸ್‌ನ ಕಚೇರಿಯಲ್ಲಿ ನಡೆಯಿತು.

ಮುಲುಂಡ್‌ ಬಂಟ್ಸ್‌ನ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಅವರು ನಾಟಕದ ಪ್ರತಿಯನ್ನು ನಿರ್ದೇಶಕ ಕೃಷ್ಣರಾಜ್‌ ಶೆಟ್ಟಿ ಅವರಿಗೆ ಹಸ್ತಾಂತರಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಮುಲುಂಡ್‌ ಬಂಟ್ಸ್‌ನ ಉಪಾಧ್ಯಕ್ಷ ಪಲಿಮಾರು ವಸಂತ್‌ ಎನ್‌. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಉದಯ ಎನ್‌. ಶೆಟ್ಟಿ, ಮುಲುಂಡ್‌ ಬಂಟ್ಸ್‌ನ ಪದಾಧಿಕಾರಿಗಳಾದ ಹರ್ಷವರ್ಧನ್‌ ಶೆಟ್ಟಿ, ಹರಿಪ್ರಸಾದ್‌ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿನಿತಾ ಶೇಖರ್‌ ಶೆಟ್ಟಿ, ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ವೇಣುಗೋಪಾಲ್‌ ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳಾದ ಸಿಎ ಕರುಣಾಕರ ಶೆಟ್ಟಿ, ಜಯ ಸೂಡಾ, ಕರುಣಾಕರ ಶೆಟ್ಟಿ, ಸುರೇಶ್‌ ಶೆಟ್ಟಿ, ಯೋಗೇಶ್‌ ಶೆಟ್ಟಿ, ಶಶಿಕಾಂತ್‌ ಶೆಟ್ಟಿ, ಹೇಮಂತ್‌ ಶೆಟ್ಟಿ, ಮನೋಹರ ಶೆಟ್ಟಿ, ಶಶಿಪ್ರಭಾ ಶೆಟ್ಟಿ, ಮಮತಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Trending videos

Back to Top