CONNECT WITH US  

ಪುಣೆ ತುಳುಕೂಟ ಯುವ ವಿಭಾಗದಿಂದ ಬ್ಯಾಡ್ಮಿಂಟನ್‌ ಪಂದ್ಯಾಟಕ್ಕೆ ಚಾಲನೆ

ಪುಣೆ: ಪುಣೆ ತುಳುಕೂಟದ ಯುವ ವಿಭಾಗ ಆರಂಭಗೊಂಡ ದಿನದಿಂದಲೂ ರೋಹನ್‌ ಪಿ. ಶೆಟ್ಟಿ ಅವರ ನೇತೃತ್ವದಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಾ ಯುವ ಸಮೂಹ ವನ್ನು ದೊಡ್ಡ ಪ್ರಮಾಣದಲ್ಲಿ ಸಂಘಟಿ ಸುವ ಮೂಲಕ ಉತ್ತಮ ವಾಗಿ  ಕಾರ್ಯ ನಿರ್ವಹಿಸುತ್ತಿರುವುದು ಅಭಿನಂದ ನೀಯವಾಗಿದೆ ಎಂದು ಪುಣೆ ತುಳು ಕೂಟದ ಅಧ್ಯಕ್ಷ ತಾರಾನಾಥ ಕೆ. ರೈ ಮೇಗಿನಗುತ್ತು ನುಡಿದರು.

ಅವರು ನ. 4ರಂದು ನಗರದ ಕಟಾರಿಯಾ ಹೈಸ್ಕೂಲ್‌ ಕ್ಯಾಂಪಸ್‌ ಬ್ಯಾಡ್ಮಿಂಟನ್‌ ಕೋರ್ಟ್‌, ಮುಕುಂದ್‌ ನಗರ  ಇಲ್ಲಿ ಪುಣೆ ತುಳುಕೂಟದ ಯುವ ವಿಭಾಗ ಆಯೋಜಿಸಿದ ಬ್ಯಾಡ್ಮಿಂಟನ್‌ ಪಂದ್ಯಾಟದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,  ಹೊಸ ಹೊಸ ಕಾರ್ಯಕ್ರಮಗಳೊಂದಿಗೆ ಕ್ರಿಯಾಶೀಲತೆಯೊಂದಿಗೆ ಸೃಜನ ಶೀಲತೆಯನ್ನು ಬೆಳೆಸಿಕೊಂಡು ಮುಂದುವರಿಯುತ್ತಿರುವ ಯುವ ವಿಭಾಗದ ಕಾರ್ಯವೈಖರಿ ಮಾದರಿ ಯಾಗಿದೆ. ನಮ್ಮ ನಿರೀಕ್ಷೆಗೂ ಮೀರಿ ಸಂಘದ ಪ್ರಗತಿಯಲ್ಲಿ ಯುವ ವಿಭಾಗ ಕೊಡುಗೆ ನೀಡುತ್ತಿದ್ದು ಇಂದು ಸತತ ದ್ವಿತೀಯ ವರ್ಷ ಬ್ಯಾಡ್ಮಿಂಟನ್‌ ಪಂದ್ಯಾಟವನ್ನು ಬಹಳ ಶಿಸ್ತಿನಿಂದ ಆಯೋಜಿಸಿರುವುದು ಸಮಿತಿಯ ಕಾರ್ಯವೈಖರಿಗೆ ಸಾಕ್ಷಿಯಾಗಿದೆ. ಮುಂದೆಯೂ ಯುವ ವಿಭಾಗಕ್ಕೆ ನಮ್ಮೆಲ್ಲರ ಸಹಕಾರವಿದ್ದು ಮತ್ತಷ್ಟು  ಕಾರ್ಯಕ್ರಮಗಳನ್ನು ಆಯೋಜಿಸು ವಂತಾಗಲಿ ಎಂದರು.

ಅತಿಥಿಗಳಾಗಿ ಉಪಸ್ಥಿತರಿದ್ದ ಬಂಟ್ಸ್‌ ಅಸೋಸಿಯೇಶನ್‌ ಪುಣೆ ಇದರ ಅಧ್ಯಕ್ಷರಾದ ಆನಂದ್‌ ಶೆಟ್ಟಿ ಮಿಯ್ನಾರು ಮಾತನಾಡಿ, ಪುಣೆಯಲ್ಲಿ ತುಳುಕೂಟ ನಾಡು ನುಡಿ ಸಂಸ್ಕೃತಿಯನ್ನು ಉಳಿಸುವಲ್ಲಿ ಪ್ರಾಮಾಣಿಕವಾಗಿ ತೊಡಗಿಸಿ ಕೊಂಡಿದ್ದಲ್ಲದೆ ವೈವಿಧ್ಯಮಯ ಕ್ರೀಡಾ ಸ್ಪರ್ಧೆಗಳನ್ನು ಹಮ್ಮಿಕೊಂಡು ತುಳು ಕನ್ನಡಿಗರನ್ನು ಒಗ್ಗೂಡಿಸುವ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಅದೇ ರೀತಿ ಉತ್ಸಾಹಿ ಯುವ ವಿಭಾಗ ಬ್ಯಾಡ್ಮಿಂಟನ್‌ ಪಂದ್ಯಾಟವನ್ನು ಸಂಘಟಿಸಿ ಯುವ ಸಮೂಹಕ್ಕೆ ಉತ್ತಮ ರೀತಿಯಿಂದ ಪ್ರೋತ್ಸಾಹ ನೀಡುತ್ತಿದೆ. ನಮ್ಮೆಲ್ಲರ ಸಹಕಾರ ನಿಮ್ಮೊಂದಿಗಿದೆ. ಭವಿಷ್ಯದಲ್ಲಿ ಇನ್ನೂ ಉತ್ತಮ ಚಟುವಟಿಕೆಗಳು ನಡೆಯುತ್ತಿರಲಿ ಎಂದರು.

ಸಂಘದ ಸ್ಥಾಪಕಾಧ್ಯಕ್ಷ ಜಯ ಕೆ. ಶೆಟ್ಟಿ ಅವರು ಮಾತನಾಡಿ, ನ್ಯಾಯವಾದಿ ರೋಹನ್‌ ಪಿ.  ಶೆಟ್ಟಿ ಅವರು ಯುವ ಸಮೂಹಕ್ಕೆ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ಅಭಿಮಾನವೆನಿಸುತ್ತಿದೆ. ಅವರಿಗೆ ನಾವೆಲ್ಲರೂ ಇನ್ನಷ್ಟು ಪ್ರೋತ್ಸಾಹ ನೀಡಿ ಬೆಂಬಲಿಸಬೇಕಾಗಿದೆ. ಸಂಘದ ಭವಿಷ್ಯದಲ್ಲಿ ಯುವ ವಿಭಾಗದ ಪಾತ್ರ ಮಹತ್ತರವಾಗಿದೆ ಎಂದರು.

ವೇದಿಕೆಯಲ್ಲಿ ಸಂಘದ ಸಲಹಾ ಸಮಿತಿ ಸದಸ್ಯರಾದ ನಾಟ್ಯಗುರು ಮದಂಗಲ್ಲು ಆನಂದ್‌ ಭಟ್‌, ತುಳುಕೂಟದ ಕೋಶಾಧಿಕಾರಿ ಸಂತೋಷ್‌ ಶೆಟ್ಟಿ ಎಣ್ಣೆಹೊಳೆ, ಶಿಕ್ಷಣ ಮತ್ತು ಸಾಮಾಜಿಕ ಸಮಿತಿ ಕಾರ್ಯಾಧ್ಯಕ್ಷ ದಿವಾಕರ ಶೆಟ್ಟಿ ಮಾಣಿಬೆಟ್ಟು, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಸುಜಾತಾ ಡಿ. ಶೆಟ್ಟಿ, ಪುಣೆ ಬಂಟರ ಸಂಘದ ಉತ್ತರ ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿ ಗಣೇಶ್‌ ಪೂಂಜಾ, ಬಂಟ್ಸ್‌ ಅಸೋಸಿಯೇಶನ್‌ ಪುಣೆ ಇದರ ಪ್ರಧಾನ ಕಾರ್ಯದರ್ಶಿ ಅರವಿಂದ ರೈ ಉಪಸ್ಥಿತರಿದ್ದರು.

ಈ ಸಂದರ್ಭ ಸಂಘದ ಅಧ್ಯಕ್ಷ ತಾರಾನಾಥ ಕೆ. ರೈ ಮೇಗಿನಗುತ್ತು ಇವರನ್ನು ಯುವ ವಿಭಾಗದ ವತಿಯಿಂದ ಶಾಲು ಹೊದೆಸಿ, ಸ್ಮರಣಿಕೆ, ಸಮ್ಮಾನ ಫಲಕವನ್ನು ನೀಡಿ ಸಮ್ಮಾನಿಸಲಾಯಿತು. ಕಾರ್ಯ ಕ್ರಮದ ಪ್ರಾಯೋಜಕರನ್ನು ನೆನಪಿನ ಕಾಣಿಕೆಗಳನ್ನಿತ್ತು  ಗೌರವಿಸಲಾಯಿತು. ಮೊದಲಿಗೆ ರಾಷ್ಟ್ರೀಯ ಬ್ಯಾಡ್ಮಿಂಟನ್‌ ಆಟಗಾರ್ತಿ  ವಿನಯಾ ಶೆಟ್ಟಿ ರಾಕೆಟ್‌ ಬೀಸುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದರು.
ಬಂಟ್ಸ್‌ ಅಸೋಸಿಯೇಶನ್‌ ಪುಣೆ ಇದರ ಕ್ರೀಡಾ ಕಾರ್ಯಾಧ್ಯಕ್ಷ  ಸತೀಶ್‌ ಶೆಟ್ಟಿ ಎರವಾಡ, ಪಿಂಪ್ರಿ ಚಿಂಚಾÌಡ್‌ ಬಂಟರ ಸಂಘದ ಯುವ ವಿಭಾಗದ ಕಾರ್ಯಾಧ್ಯಕ್ಷ  ಆಕಾಶ್‌ ಜೆ. ಶೆಟ್ಟಿ, ಪುಣೆ ತುಳುಕೂಟದ ಪಿಂಪ್ರಿ ಚಿಂಚಾÌಡ್‌ ಪ್ರಾದೇಶಿಕ ಸಮಿತಿಯ ಯುವ ವಿಭಾಗದ ಕಾರ್ಯಾಧ್ಯಕ್ಷ ಮಿಥುನ್‌ ಶೆಟ್ಟಿ, ಪುರುಷೋತ್ತಮ್‌ ಶೆಟ್ಟಿ, ನಾರಾಯಣ ಹೆಗ್ಡೆ  ಮತ್ತಿತರ ಗಣ್ಯರು, ಸಂಘದ ಪದಾಧಿಕಾರಿಗಳು, ಮಹಿಳಾ ವಿಭಾಗ ಯುವ ವಿಭಾಗದ ಸದಸ್ಯರು ಹಾಗೂ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಯುವ ವಿಭಾಗದ ಸದಸ್ಯರು ಪಂದ್ಯಾಟದ ಯಶಸ್ಸಿಗಾಗಿ ಶ್ರಮಿಸಿದರು. 

ನಮ್ಮ ಸಂಘದ ಮಾತೃ ಸಮಿತಿಯ ಅಧ್ಯಕ್ಷರಾದ ತಾರಾನಾಥ ರೈ ಹಾಗೂ ಪದಾಧಿಕಾರಿಗಳು ನಮ್ಮ ಬೆನ್ನು ತಟ್ಟಿ ಪೋ›ತ್ಸಾಹ  ನೀಡಿರುವುದರಿಂದ ಯುವ ವಿಭಾಗ ಬೆಳೆಯಲು ಸಾಧ್ಯವಾಗಿದೆ. ಅದಕ್ಕಾಗಿ ನಾವು ಅಧ್ಯಕ್ಷರನ್ನು ಕೃತಜ್ಞತಾ ಭಾವದೊಂದಿಗೆ ಇಂದು ಗೌರವಿಸುತ್ತಿದ್ದೇವೆ. ಅದೇ ರೀತಿ ಇಂದಿನ ಪಂದ್ಯಾಟಕ್ಕೆ ನಿರೀಕ್ಷೆಗೂ ಮೀರಿ ತಂಡಗಳು ಬಂದಿದ್ದು ನಮಗೆ ಇನ್ನಷ್ಟು ಉತ್ಸಾಹ ತುಂಬಿದೆ. ಹಲವಾರು ದಾನಿಗಳು ಮುಂದೆ ಬಂದು ಪ್ರಾಯೋಜಕರಾಗಿ ಬೆಂಬಲಿಸಿರುವುದಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ ೆ.
ರೋಹನ್‌ ಪಿ. ಶೆಟ್ಟಿ , 
ಕಾರ್ಯಾಧ್ಯಕ್ಷರು : ಯುವ ವಿಭಾಗ ತುಳುಕೂಟ ಪುಣೆ

ಚಿತ್ರ-ವರದಿ :ಕಿರಣ್‌ ಬಿ.ರೈ ಕರ್ನೂರು

Trending videos

Back to Top