ಆಹಾರ್‌ನ 10ನೇ ಮಾಸಿಕ ಸಭೆ

Team Udayavani, Nov 11, 2018, 5:03 PM IST

0911mum04.jpg

ಮುಂಬಯಿ: ಆಹಾರ್‌ ನಿಯೋಗವು ಅಬಕಾರಿ ವಿಭಾಗದ ಪ್ರಧಾನ ಕಾರ್ಯದರ್ಶಿ ವಲ್ಸ ನಾಮರ್‌ ಸಿಂಗ್‌ ಅವರನ್ನು ಭೇಟಿಯಾಗಿ ಪರ್ಭಾಣಿ ಜಿಲ್ಲೆಯಲ್ಲಿ ಪರ್ಮಿಟ್‌ ರೂಮ್‌ಗಳನ್ನು ಮುಚ್ಚಲು ನೀಡಿದ್ದ ಆದೇಶದ ವಿರುದ್ಧ ಮಾತುಕತೆ ನಡೆಸಿ ಅದನ್ನು  ರದ್ದುಗೊಳಿಸುವಲ್ಲಿ ಯಶಸ್ವಿ ಯಾಗಿದೆ. ಆಹಾರ್‌ ನಿಯೋಗವು ಅಬಕಾರಿ ಮಂತ್ರಿ ಚಂದ್ರಶೇಖರ್‌ ಬಾವನ್‌ಕುಲೆ ಅವರನ್ನು ಭೇಟಿಯಾಗಿ ಕಳೆದ 2 ದಶಕಗಳಿಂದ ಬಾಕಿ ಇರುವ ವಿವಿಧ ಸಮಸ್ಯೆಗಳ ನಿವಾರಣೆಗಾಗಿ ನಮ್ಮ ನಿವೇದನೆಯನ್ನು ಸಲ್ಲಿಸಿ ಸುದೀರ್ಘ‌ವಾಗಿ ಚರ್ಚೆ ನಡೆಸಿತ್ತು. ಸಚಿವರು  ಕಳೆದ ಅ. 31ರಂದು ಈ ವಿಷಯದಲ್ಲಿ ಚರ್ಚಿಸಲು ಹಾಗೂ ನಿರ್ಧಾರ ತೆಗೆದುಕೊಳ್ಳಲು ವಿಶೇಷ ಸಭೆಯನ್ನು ಕರೆದಿದ್ದರು ಎಂದು ಆಹಾರ್‌ ಸಂಸ್ಥೆಯ  ಅಧ್ಯಕ್ಷ ಸಂತೋಷ್‌ ಶೆಟ್ಟಿ ನುಡಿದರು.

ಅ. 22ರಂದು ಚೆಂಬೂರ್‌ನ ಐವಿವೈ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆದ ಆಹಾರ್‌ನ 10ನೇ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಹಾರ್‌ನ ನಿಯೋಗವು ಅಗ್ನಿ ಸುರಕ್ಷೆಯಲ್ಲಿ ನೀಡಬೇಕಾದ ದೃಢೀಕರಣ ಪತ್ರದ ವಿರುದ್ಧ ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತೆ ಐ.ಎ. ಕುಂದನ್‌ ಹಾಗೂ ಅಗ್ನಿಸುರಕ್ಷತೆಯ ಅಧಿಕಾರಿಗಳೊಂದಿಗೆ ಸುದೀರ್ಘ‌ ಮಾತುಕತೆ ನಡೆಸಿ ಫೈಯರ್‌ ಕಂಪ್ಲೀಯನ್ಸ್‌ ಇಲ್ಲದೆ ಮಹಾನಗರ ಪಾಲಿಕೆಯ ಲೈಸೆನ್ಸ್‌ ನವೀಕರಿಸಲು ಯಶಸ್ವಿಯಾಗಿದೆ. ಈ ವಿಷಯದಲ್ಲಿ ಕಾನೂನು ತಜ್ಞರ ಅಭಿಪ್ರಾಯವನ್ನು ಪಡೆದು ಅದನ್ನು ತಮ್ಮ ನಿವೇದನೆಯಲ್ಲಿ ಅಳವಡಿಸಲಾಗಿದೆ. ಫಾಯರ್‌ ಕಂಪ್ಲೀಯನ್ಸ್‌ಗಾಗಿ ನೀಡಬೇಕಾದ ಅಫಿದಾವಿತ್‌ನ ಬದಲಿಗೆ ಸ್ವಯಂ ದೃಢೀಕರಣ ಪತ್ರ ನೀಡಲು ಆಹಾರ್‌ ಪ್ರಯತ್ನಿಸುತ್ತಿದೆ. ಅಗ್ನಿ ಸುರಕ್ಷತೆಯ ನಿಯಮಗಳನ್ನು ಇನ್ನಷ್ಟು ಸರಳೀಕರಣಗೊಳಿಸಲು ಆಹಾರ್‌ ಪ್ರಯತ್ನಿಸುತ್ತಿದ್ದು, ಆದಷ್ಟು ಬೇಗ ಅದು ಫಲಕಾರಿಯಾಗಬಹುದು ಎಂದು ಅವರು ತಿಳಿಸಿದರು.

ಸಂಸ್ಥೆಯ ಗೌರವ ಜತೆ ಕಾರ್ಯದರ್ಶಿ ಅವರು ಮಾತನಾಡಿ,  ಇತ್ತೀಚೆಗೆ ಜರಗಿದ ಟೌನ್‌ ವೆಂಡಿನ್‌ ಕಮಿಟಿಯ ಸಭೆಯಲ್ಲಿ ರೈಲ್ವೆ ನಿಲ್ದಾಣದಿಂದ 150 ಮೀಟರ್‌ ಅನಂತರ ನಿಯೋಜಿತ ಹಾಕರ್‌ ಪಿಟ್‌c ಹಾಗೂ ನಿಯೋಜಿತ ಅರೇ ಹಾಲಿನ ಸ್ಟಾಲ್‌ನ ವಿರುದ್ಧ ತಮ್ಮ ವಿರೋಧವನ್ನು ವ್ಯಕ್ತಪಡಿಸಿದೆ ಎಂದು ನುಡಿದರು.

39ನೇ ವಾರ್ಷಿಕ ಮಹಾಸಭೆಯ ಸಮಿತಿಯ ಅಧ್ಯಕ್ಷ ರಾಜನ್‌ ಶೆಟ್ಟಿ ಮಾತನಾಡಿ, ಇದುವರೆಗೆ 29 ಲಕ್ಷದ ಪ್ರಾಯೋಜಕತ್ವ ಬಂದಿದ್ದು, 32 ಸ್ಟಾಲ್‌ಗ‌ಳು ಬುಕ್‌ ಆಗಿವೆ ಎಂದು ತಿಳಿಸಿ, ಸರ್ವರೂ ಸಹಭಾಗಿಯಾಗಿ ವಾರ್ಷಿಕ ಮಹಾಸಭೆಯ ಯಶಸ್ಸಿಗೆ ಸಹಕರಿ ಸಬೇಕು ಎಂದು ವಿನಂತಿಸಿದರು.

ಉಪಸಮಿತಿಯ ಅಧ್ಯಕ್ಷ ವಿಲಾಸ್‌ ಜವೇರಿ, ಹರಿಶ್ಚಂದ್ರ ಶೆಟ್ಟಿ, ನೀರಜ್‌ ಶೆಟ್ಟಿ, ಭರತ್‌ ಠಾಕೂರ್‌, ಗುರುಪ್ರಸಾದ್‌ ಶೆಟ್ಟಿ ಅವರು ತಮ್ಮ ಸಮಿತಿಗಳ ಕಾರ್ಯಕಲಾಪಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ವ್ಯವಸಾಯ ಕರ ವಿಭಾಗದ ಸಹಾಯಕ ಆಯುಕ್ತ ಸುಭಾಶ್‌ ಶಿಂಧೆ ಅವರು ವ್ಯವಸಾಯ ಕರಗಳ ನಿಯಮಾವಳಿಗಳಲ್ಲಿ ಆದ ಮಹತ್ತರವಾದ ಬದಲಾವಣೆ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ ಸರ್ವರೂ ವ್ಯವಸಾಯ ಕರವನ್ನು ಭರಿಸುವಂತೆ ವಿನಂತಿಸಿದರು.

ಹೊಟೇಲ್‌ ಉದ್ಯಮದ ಸಮಸ್ಯೆಗಳ ನಿವಾರಣೆಗಾಗಿ ಸದಾ ಶ್ರಮಿಸುತ್ತಿರುವ ಲೋಕಸಭಾ ಸದಸ್ಯ ರಾಹುಲ್‌ ಶೇವಾಲೆ ಅವರನ್ನು ಸಮ್ಮಾನಿಸಲಾಯಿತು. 

ಆಹಾರ್‌ನ ಸಲಹೆಗಾರರಾದ ಆದರ್ಶ್‌ ಶೆಟ್ಟಿ, ಚಂದ್ರಹಾಸ್‌ ಶೆಟ್ಟಿ, ನಾರಾಯಣ ಆಳ್ವ ಸಲಹೆ ನೀಡಿದರು. ವಲಯ ಒಂದರ ಉಪಾಧ್ಯಕ್ಷ ಮಹೇಂದ್ರ ಎಸ್‌. ಕರ್ಕೇರ, ವಲಯ ಎರಡರ ಉಪಾಧ್ಯಕ್ಷ ಕೆ.ವಿ. ಶೆಟ್ಟಿ, ವಲಯ ಮೂರರ ಉಪಾಧ್ಯಕ್ಷ ವಿಜಯ್‌ ಕೆ. ಶೆಟ್ಟಿ, ವಲಯ ನಾಲ್ಕರ ಉಪಾಧ್ಯಕ್ಷ ಸುರೇಶ್‌ ಶೆಟ್ಟಿ, ವಲಯ ಐದರ ಉಪಾಧ್ಯಕ್ಷ ವಿಜಯ ಎಸ್‌. ಶೆಟ್ಟಿ, ವಲಯ ಆರರ ಉಪಾಧ್ಯಕ್ಷ ಅಮರ್‌ ಶೆಟ್ಟಿ, ವಲಯ ಏಳರ ಉಪಾಧ್ಯಕ್ಷ ರಾಜನ್‌ ಶೆಟ್ಟಿ, ವಲಯ ಎಂಟರ ಉಪಾಧ್ಯಕ್ಷ ಭುಜಂಗ ಶೆಟ್ಟಿ, ವಲಯ ಹತ್ತರ ಉಪಾಧ್ಯಕ್ಷ ಪ್ರಭಾಕರ ಬಿ. ಶೆಟ್ಟಿ ತಮ್ಮ ವಲಯಗಳ ಕಾರ್ಯಚಟುವಟಿಕೆ ವಿವರಿಸಿದರು. 

ಸಭೆಯಲ್ಲಿ ಭಾಗವಹಿಸಿದ 15 ಪ್ರದರ್ಶನ ಮಳಿಗೆಯವರನ್ನು ಗೌರವ ಜತೆ ಕಾರ್ಯದರ್ಶಿ ಪರಿಚಯಿಸಿದರು. ಅಧ್ಯಕ್ಷರು ಸಂತೋಷ್‌ ಶೆಟ್ಟಿ ಗೌರವಿಸಿದರು.  ಸಭೆಯು ವಲಯ ಐದರ ಉಪಾಧ್ಯಕ್ಷ ವಿಜಯ ಎಸ್‌. ಶೆಟ್ಟಿ ಅವರು ಸ್ವಾಗತಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ವಂದಿಸಿದರು. ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಹೊಟೇಲಿಗರ ಸಮಸ್ಯೆ ಬಗ್ಗೆ  ಸಂಪೂರ್ಣ ಮಾಹಿತಿಯಿದ್ದು, ಅದರ ನಿವಾರಣೆಗಾಗಿ ತಾನು ಮಹಾನಗರ  ಪಾಲಿಕೆ, ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರದೊಂದಿಗೆ ಸಂಪರ್ಕದಲ್ಲಿದ್ದೇನೆ. ಹೊಟೇಲ್‌ ಉದ್ಯಮದ ಜಿಎಸ್‌ಟಿ ಕಡಿಮೆಗೊಳಿಸುವಲ್ಲಿ ಪ್ರಯತ್ನ ನಡೆಯುತ್ತಿದೆ. ಇತರ ಸಮಸ್ಯೆಗಳ ಬಗ್ಗೆ ಶೀಘ್ರ ಮುಖ್ಯಮಂತ್ರಿಯನ್ನು ಭೇಟಿಯಾಗಿ ಚರ್ಚಿಸುತ್ತೇನೆ.
-ರಾಹುಲ್‌ ಶೇವಾಲೆ, ಸಂಸದ

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.