ಅಹ್ಮದ್‌ ನಗರ ಶ್ರೀ ಗುರುದೇವ  ಸೇವಾ ಬಳಗದ ವತಿಯಿಂದ ಗುರುವಂದನೆ


Team Udayavani, Nov 22, 2018, 3:28 PM IST

2111mum02.jpg

ನಾಸಿಕ್‌: ಆತ್ಮಶುದ್ಧತೆಯ  ಧರ್ಮ ಕಾರ್ಯಗಳು ಭಗವಂತನಿಗೆ ಪ್ರಿಯವಾದುದು.  ಅತೊ¾àನ್ನತಿ ಅನ್ನುವಂಥದ್ದು ಸಮಾಜೋನ್ನತಿಯ ಬೇರುಗಳಿದ್ದಂತೆ. ಅದ್ದರಿಂದ  ಅಧ್ಯಾತ್ಮಿಕತೆಯ ಜತೆಯಲ್ಲಿ  ಅತೊ¾àನ್ನತಿಯನ್ನು ನಾವು ಪಡೆಯ ಬೇಕು. ಇದರಿಂದ ಜೀವನ ಸುಖವನ್ನು  ಪಡೆಯಬಹುದು.  ಅಧ್ಯಾತ್ಮವನ್ನು ನಾವು ಅಂತರಂಗದ ಅನುಭವದೊಂದಿಗೆ  ಕೂಡಿಕೊಂಡಾಗ ಆತ್ಮ ಪರಮಾತ್ಮ  ಸಂಬಂಧ ಬೆಸೆಯು ತ್ತದೆ ಬೆಳೆಯುತ್ತದೆ. ಸುಖದಲ್ಲಿ ಎರಡು ಮುಖಗಳಿವೆ. ಒಂದು  ಅಂತರಂಗದ ಸುಖವಾದರೆ ಇನ್ನೊಂದು ಬಹಿರಂಗದ ಸುಖ. ಪರಿಶುದ್ಧವಾದ ಹೃದಯವಂತಿಕೆಯ, ಸಂಸ್ಕಾರಯುತ ಆಧ್ಯಾತ್ಮಿಕತೆಯ ಪ್ರೀತಿಯಿಂದ  ಕೂಡಿದ ಬದುಕುವ ಶೈಲಿಯಲ್ಲಿ ಈ ಸುಖವನ್ನು   ಪ್ರತಿಯೊಬ್ಬರು  ತಮ್ಮ ಜೀವನದಲ್ಲಿ ಪಡೆಯುತ್ತಾರೆ. ಅದಕ್ಕಾಗಿ ಪ್ರತಿಯೊಬ್ಬರ  ಕಾರ್ಯಕ್ಷೇತ್ರವು  ಧರ್ಮದ ಹಾದಿಯಲ್ಲಿ ಸಾಗಬೇಕಾದ ಅನಿವಾರ್ಯ ಇದೆ. ಎಲ್ಲರೂ ತಮ್ಮ ಆತ್ಮ ಜ್ಯೋತಿಯನ್ನು ಬೆಳಗುವುದರ ಮೂಲಕ ಸಮಾಜದ ಜ್ಯೋತಿಯನ್ನು ಬೆಳಗುವ ಕಾರ್ಯ ಮಾಡಬೇಕು. ನಮ್ಮ ಜೀವನದ ದುಃಖದ ನಾಲ್ಕು ಮುಖಗಳನ್ನು ಸರಿದಾರಿಗೆ ತರುವಂತಹ  ಶಕ್ತಿ ಅಧ್ಯಾತ್ಮಕ್ಕಿದೆ. ಆಧುನಿಕತೆಯ  ಜೀವನ ಶೈಲಿಗೆ ಅಧ್ಯಾ ತ್ಮದೊಂದಿಗೆ ಉತ್ತಮ ಸಂಸ್ಕಾರದ ಸ್ಪರ್ಶವಿರಬೇಕು. ಹೃದಯದಲ್ಲಿರುವ ಚಿಂತನೆಗಳು ಮತ್ತು  ಭಾವನೆಗಳು ಶುದ್ಧವಾಗಿ ತತ್ವಾದರ್ಶವಾಗಿರಬೇಕು. ಇದಕ್ಕೆಲ್ಲ ಆಧ್ಯಾತ್ಮಿಕತೆಯ ಪ್ರೀತಿ ನಮ್ಮಲ್ಲಿದ್ದರೆ ಸಮಾಜಕ್ಕೆ ಒಳಿತಾ ಗಬಹುದು  ಎಂದು ಶ್ರೀ ಕ್ಷೇತ್ರ ಒಡಿಯೂರಿನ ಪರಮಪೂಜ್ಯ  ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ನುಡಿದರು.

ನ. 19ರಂದು ಅಹ್ಮದ್‌ನಗರದ ಸಾವೇಡಿಯ ಪ್ರೇಮ್‌ಧನ್‌ ಚೌಕ್‌ನ ನಮಶ್ರೀ ಬಂಗ್ಲೆಯ ವಠಾರದಲ್ಲಿ ಅಹ್ಮದ್‌ನಗರ ಶ್ರೀ ಗುರುದೇವ ಸೇವಾ ಬಳಗದ ವತಿಯಿಂದ ನಡೆದ ಗುರುವಂದನ ಕಾರ್ಯಕ್ರಮದಲ್ಲಿ  ಆಶೀರ್ವಚನ ನೀಡಿದ ಶ್ರೀಗಳು, ಬದುಕುವ ಶೈಲಿಯಲ್ಲಿ  ಅಧ್ಯಾತ್ಮ ಹಾಗೂ ಧರ್ಮದ ಪಾಲನೆ ಮುಖ್ಯ ವಾಗಿರಬೇಕು. ಮನಸ್ಸು ಶುಚಿ ಯಾಗಿ ಶ್ರದ್ಧೆಯಿಂದ ಯಾವುದೇ ಸತ್ಕಾರ್ಯ ಮಾಡಬೇಕು. ನಂಬಿಕೆಯ ತತ್ವದ ಮೇಲೆ ನಾವು ಮಾಡುವ ಸಮಾಜ  ಕಾರ್ಯಗಳಿರಬೇಕು. ಮನುಷ್ಯ ಜನ್ಮದಲ್ಲಿ ಬಾಳಿದವನು ಬದುಕನ್ನು ಆತ್ಮಜ್ಞಾನದಿಂದ ಸಂಸ್ಕಾರ ಯುತವಾಗಿಸಿಕೊಳ್ಳಬೇಕು.  ಕಾರ್ಯ ಕ್ಷೇತ್ರ ಯಾವುದೇ ಇರಲಿ ನಾವು ಮಾಡುವ ಸೇವೆಯಿಂದ  ಬದುಕು ಸಾರ್ಥಕವಾಗಬಹುದು. ಅದರ ಫಲ ಜನ ಮಾನಸವನ್ನು ತಲುಪಿದಾಗ ಆತ್ಮ ತೃಪ್ತಿ ದೊರಕುತ್ತದೆ  ಎಂದರು.

ಶ್ರೀಗಳನ್ನು  ಆರತಿ ಬೆಳಗಿ ಪೂರ್ಣ ಕುಂಭದೊಂದಿಗೆ ಸ್ವಾಗತಿಸಲಾ ಯಿತು. ಧಾರ್ಮಿಕ ಕಾರ್ಯಕ್ರಮವಾಗಿ  ಪಾದ ಪೂಜೆಯನ್ನು ಅಹ್ಮದ್‌ ನಗರದ ಭಕ್ತರ ಪರವಾಗಿ ಶ್ರೀ ಗುರುದೇವ ಸೇವಾ ಬಳಗ ಅಹ್ಮದ್‌ ನಗರ ಅಧ್ಯಕ್ಷ, ಉದ್ಯಮಿ  ವಿಜಯ್‌ ಹೆಗ್ಡೆ  ದಂಪತಿ ನೆರವೇರಿಸಿ ಗುರು ವಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಾಧ್ವಿ ಶ್ರೀ  ಮಾತಾನಂದಮಯೀ ಅವರಿಗೆ ವಿಜಯ ಹೆಗ್ಡೆ ದಂಪತಿ ಗುರುವಂದನೆ ಸಲ್ಲಿಸಿದರು. ಅಹ್ಮದ್‌ ನಗರ ಶ್ರೀ ಗುರುದೇವ ಸೇವಾ ಬಳಗದ ಪ್ರಮುಖರಾದ ವಿಶ್ವನಾಥ್‌ ಶೆಟ್ಟಿ   ಕಾರ್ಯಕ್ರಮ ಆಯೋಜಿಸುವಲ್ಲಿ ಸಹಕರಿಸಿದರು.

ಈ ಸಂದರ್ಭದಲ್ಲಿ ಅಹ್ಮದ್‌ನಗರದ ಉದ್ಯಮಿಗಳು,  ತುಳು ಕನ್ನಡಿಗರಲ್ಲದೆ ಇತರ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಅಪಾರ ಸಂಖ್ಯೆಯಲ್ಲಿ ಸೇರಿದ ಗುರು ಭಕ್ತರು ಶ್ರೀಗಳಿಂದ ಪ್ರಸಾದ ಸ್ವೀಕರಿಸಿದರು.  ಪುಣೆ ಬಳಗದ ಕಾರ್ಯದರ್ಶಿ ಎನ್‌. ರೋಹಿತ್‌ ಡಿ. ಶೆಟ್ಟಿ,  ಕೋಶಾಧಿಕಾರಿ ರಂಜಿತ್‌ ಶೆಟ್ಟಿ, ಮಾಜಿ ಅಧ್ಯಕ್ಷರು ಮತ್ತು ಸಲಹೆಗಾರರಾದ ಉಷಾ ಕುಮಾರ್‌ ಶೆಟ್ಟಿ,  ನಾರಾಯಣ ಕೆ. ಶೆಟ್ಟಿ, ಪುಣೆ  ಬಳಗದ ಪ್ರಮುಖರಾದ ಉಮೇಶ್‌ ಶೆಟ್ಟಿ, ವಿಟuಲ್‌ ಶೆಟ್ಟಿ,   ಸುರೇಶ್‌ ಶೆಟ್ಟಿ ಅವರು ಉಪಸ್ಥಿತರಿದ್ದರು. 

ಚಿತ್ರ-ವರದಿ: ಹರೀಶ್‌ ಮೂಡಬಿದಿರೆ ಪುಣೆ

ಟಾಪ್ ನ್ಯೂಸ್

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.