CONNECT WITH US  

ದಹಿಸರ್‌ ಶ್ರೀ ಭಾಟ್ಲಾದೇವಿ ಅಯ್ಯಪ್ಪ ಭಕ್ತವೃಂದ:ಮಹಾಪೂಜೆ,ಧಾರ್ಮಿಕ ಸಭೆ

ಮುಂಬಯಿ: ಧರ್ಮದಲ್ಲಿ ರಾಜಕೀಯ ಬೇಡ. ಹಿರಿಯರ ಸಂಪ್ರದಾಯದೊಂದಿಗೆ ನಮ್ಮ ಭಕ್ತಿ ಮುಂದುವರಿಯಬೇಕು. ಕಠಿನ ಪರಿಶ್ರಮದ ಮೂಲಕ ಒಂದು ಮಂಡಲದ ವ್ರತ ಕೈಗೊಳ್ಳುವ ಅಯ್ಯಪ್ಪ ವ್ರತಧಾರಿಗಳಿಂದ ಸುಸಂಸ್ಕೃತ ಸಮಾಜ ನಿರ್ಮಾಣವಾಗಲಿ. ಇಂತಹ ಕಾರ್ಯಕ್ರಮಗಳಿಗೆ ನನ್ನ ಸಂಪೂರ್ಣ ಸಹಕಾರವಿದೆ  ಎಂದು ಮಹಾರಾಷ್ಟ್ರ ಮಾನವ ಸೇವಾ ಸಂಘದ ಅಧ್ಯಕ್ಷ ಡಾ| ಹರೀಶ್‌ ವಿ. ಶೆಟ್ಟಿ ಅವರು ನುಡಿದರು.

ಡಿ. 1ರಂದು ದಹಿಸರ್‌ ಪೂರ್ವದ ಭರೂಚ ರೋಡ್‌ ಭಾಟ್ಲಾದೇವಿ ಮಂದಿರದ ಆವರಣದಲ್ಲಿ ನಡೆದ ಶ್ರೀ ಭಾಟ್ಲಾದೇವಿ ಅಯ್ಯಪ್ಪ ಭಕ್ತವೃಂದ ದಹಿಸರ್‌ ಇದರ 29ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆಯು ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ನೆರವೇರಿದ್ದು, ಸಂಜೆ ನಡೆದ ಧಾರ್ಮಿಕ, ಸಮ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ   ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು,  ಶ್ರೀ ಭಾಟ್ಲಾದೇವಿ ಅಯ್ಯಪ್ಪ ಭಕ್ತವೃಂದ ದಹಿಸರ್‌ ಸಂಸ್ಥೆಯು ಕಳೆದ 29 ವರ್ಷಗಳಿಂದ ಧಾರ್ಮಿಕ ಸೇವೆಗೈಯುತ್ತಿರುವುದನ್ನು ಕಂಡಾಗ ಸಂತೋಷವಾಗುತ್ತಿದೆ. ಇಂತಹ ಸಂಸ್ಥೆಗಳಿಂದ ಧರ್ಮ, ಧಾರ್ಮಿಕತೆ ಉಳಿಯಲು ಸಾಧ್ಯವಿದೆ ಎಂದು ನುಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ಭಾಟ್ಲಾದೇವಿ ಅಯ್ಯಪ್ಪ ಭಕ್ತವೃಂದದ ಅಧ್ಯಕ್ಷ ಮನ್ಮಥ ಆರ್‌. ಹೆಗ್ಡೆ ಅವರು ಮಾತನಾಡಿ, ದಾನಿಗಳ ನೆರವಿನಿಂದ, ಅಯ್ಯಪ್ಪ ವ್ರತಧಾರಿಗಳ ಸಹಕಾರ, ಕಾರ್ಯಕಾರಿ ಸಮಿತಿ, ಮಹಿಳಾ ಸದಸ್ಯೆಯರು, ಪರಿಸರದ ವಿವಿಧ ಸಂಘ-ಸಂಸ್ಥೆಗಳ ಪ್ರೋತ್ಸಾಹದಿಂದ ಶ್ರೀ ಅಯ್ಯಪ್ಪ ಮಹಾಪೂಜೆಯು ಯಶಸ್ವಿಯಾಗಿದೆ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು.

ಗಣ್ಯರ ಸಮ್ಮುಖದಲ್ಲಿ ಉದ್ಯಮಿ ಶ್ರೀಧರ ಪೂಜಾರಿ ದಂಪತಿಯನ್ನು ಸಮ್ಮಾನಿಸಲಾಯಿತು. ಭಾರತ್‌ ಬ್ಯಾಂಕಿನ ನಿರ್ದೇಶಕ ದಾಮೋದರ ಸಿ. ಕುಂದರ್‌, ಶಿಕ್ಷಣಪ್ರೇಮಿ ಆರ್‌. ಕೆ. ಮೂಲ್ಕಿ ಅವರು ಶುಭಹಾರೈಸಿದರು. ವೇದಿಕೆಯಲ್ಲಿ ಡಾ| ಸತೀಶ್‌ ಶೆಟ್ಟಿ, ರಾಮಚಂದ್ರ ಶೆಟ್ಟಿ, ಕೈಲಾಸ್‌ ರಾವ್‌ ದೇಶು¾ಖ್‌, ವಿ. ಪಿ. ಮುಲ್ಲಾ, ಶ್ರೀ ಅಯ್ಯಪ್ಪ ಭಕ್ತವೃಂದದ ಕೋಶಾಧಿಕಾರಿ ಕೃಷ್ಣ ಎಂ. ಶೆಟ್ಟಿ, ಗೌರವಾಧ್ಯಕ್ಷ ಮರ್ದ ಕೆ. ಶೆಟ್ಟಿ, ಗೌರವ ಕಾರ್ಯದರ್ಶಿ ಟಿ. ಕೆ. ಕೋಟ್ಯಾನ್‌, ಮಹಿಳಾ ವಿಭಾಗದ ಅಧ್ಯಕ್ಷೆ ಸುನಂದಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ವಿಷ್ಣುಮೂರ್ತಿ ಭಟ್‌ ಅವರ ಪೌರೋಹಿತ್ಯದಲ್ಲಿ ರತ್ನಾ ಕರುಣಾಕರ ಶೆಟ್ಟಿ ದಂಪತಿಯ ಸಂಕಲ್ಪದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಸುರೇಂದ್ರ ಗುರುಸ್ವಾಮಿ ಬೆಳಗಾವಿ, ಮೋಹನ್‌ ರೈ ಗುರುಸ್ವಾಮಿ ಹಾಗೂ ರಘುರಾಮ ಹೆಗ್ಡೆ ಅವರ ನೇತೃತ್ವದಲ್ಲಿ ವಿವಿಧ ಪೂಜೆಗಳು ನೆರವೇರಿತು.

ಅನ್ನದಾನ ಸೇವಾರ್ಥಿಗಳಾದ ಉದ್ಯಮಿ ದಯಾನಂದ ಶೆಟ್ಟಿ ಮತ್ತು ಸದಾನಂದ ಶೆಟ್ಟಿ ದಹಿಸರ್‌, ಯಕ್ಷಗಾನ ಪ್ರಾಯೋಜಕ, ಕಲಾಪೋಷಕರಾದ ಶ್ರೀಧರ ಕೆ. ಪೂಜಾರಿ, ರಾಮಚಂದ್ರ ಎಸ್‌. ಶೆಟ್ಟಿ, ಮಹಾದಾನಿಗಳಾದ ರವೀಂದ್ರ ಸಾಧು ಶೆಟ್ಟಿ, ಕರುಣಾಕರ ವಿ. ಶೆಟ್ಟಿ ಬೋಳಿದಗುತ್ತು, ಸುನಂದಾ ಶೇಖರ ಶೆಟ್ಟಿ, ಮೋಹಿನಿ ಮನ್ಮಥ ಹೆಗ್ಡೆ, ಗೋಪಾಲ್‌ ಸಾಲ್ಯಾನ್‌ ಮತ್ತಿತರರನ್ನು ಗೌರವಿಸಲಾಯಿತು.

ಶ್ರೀ ಭಾಟ್ಲಾದೇವಿ ಅಯ್ಯಪ್ಪ ಭಕ್ತವೃಂದದ ಅಧ್ಯಕ್ಷ ಮನ್ಮಥ ಆರ್‌. ಹೆಗ್ಡೆ, ಶ್ರೀ ಅಯ್ಯಪ್ಪ ಭಕ್ತವೃಂದದ ಕೋಶಾಧಿಕಾರಿ ಕೃಷ್ಣ ಎಂ. ಶೆಟ್ಟಿ, ಗೌರವಾಧ್ಯಕ್ಷ ಮರ್ದ ಕೆ. ಶೆಟ್ಟಿ, ಗೌರವ ಕಾರ್ಯದರ್ಶಿ ಟಿ. ಕೆ. ಕೋಟ್ಯಾನ್‌, ಮಹಿಳಾ ವಿಭಾಗದ ಅಧ್ಯಕ್ಷೆ ಸುನಂದಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಸದಾನಂದ ಕೆ. ಶೆಟ್ಟಿ, ಪ್ರಭಾಕರ ಎಂ. ಶೆಟ್ಟಿ, ಲಕ್ಷ್ಮಣ್‌ ಪೂಜಾರಿ, ಪರಮೇಶ್ವರ ಪೂಜಾರಿ, ಲಕ್ಷ್ಮಣ್‌ ಕೋಟ್ಯಾನ್‌, ಎಚ್‌. ಎಂ. ಶೆಟ್ಟಿ, ವಾಸುದೇವ ಕೋಟ್ಯಾನ್‌, ಸಲಹೆಗಾರರುಗಳಾದ ಎಸ್‌. ಕೆ. ಪೂಜಾರಿ, ಗೋಪಾಲ್‌ ಡಿ. ಸಾಲ್ಯಾನ್‌, ಉಡುಪಿ ಗುಣಪಾಲ್‌, ರಾಘವ ಬಿ. ಹೆಗ್ಡೆ, ರುಕ್ಕಯ್ಯ ಎಚ್‌. ಶೆಟ್ಟಿಗಾರ್‌, ರವೀಂದ್ರ ಭಟ್‌, ಮಹಿಳಾ ವಿಭಾಗದ ಸುನಂದಾ ಶೆಟ್ಟಿ, ರಜನಿ ಪಿ. ರಾವ್‌, ವಸಂತಿ ಪಿ. ಶೆಟ್ಟಿ, ಜಯಂತಿ ಕೆ. ಶೆಟ್ಟಿ, ಮೋಹಿನಿ ಎಂ. ಹೆಗ್ಡೆ, ಲಕ್ಷ್ಮೀ ಕೆ. ಪ್ರಭು, ಲಲಿತಾ ಎನ್‌. ಶೆಟ್ಟಿ, ರತ್ನಾ ಕೆ. ಶೆಟ್ಟಿ ಅವರು ಸಹಕರಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸ್ಥಳೀಯ ಪ್ರತಿಭೆಗ ಳಿಂದ ನೃತ್ಯ ವೈವಿಧ್ಯ, ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ ಸಾಂತಾಕ್ರೂಜ್‌ ಇದರ ಕಲಾವಿದರುಗಳಿಂದ ಶಬರಿ ಮಲೆ ಅಯ್ಯಪ್ಪ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. 

ನಗರ ಹಾಗೂ ಉಪನಗರಗಳ ಅಯ್ಯಪ್ಪ ವ್ರತಧಾರಿಗಳು, ರಾಜಕೀಯ ನೇತಾರರು, ತುಳು-ಕನ್ನಡಿಗರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. 

ಚಿತ್ರ-ವರದಿ : ರಮೇಶ್‌ ಅಮೀನ್‌


Trending videos

Back to Top