CONNECT WITH US  

ಪುಣೆ ತುಳುಕೂಟ ನೂತನ ಅಧ್ಯಕ್ಷ ಮೋಹನ್‌ ಶೆಟ್ಟಿಗೆ ಅಭಿನಂದನೆ

ಪುಣೆ: ಪುಣೆ ತುಳುಕೂಟದ ವಾರ್ಷಿಕ ಮಹಾಸಭೆಯು ಡಿ. 2ರಂದು ವಾರ್ಜೆಯ ಹೊಟೇಲ್‌ ನ್ಯೂ ಸಾಗರ್‌ ಸಭಾಂಗಣದಲ್ಲಿ ಪುಣೆ ತುಳುಕೂಟದ ಅಧ್ಯಕ್ಷ  ತಾರಾನಾಥ ಕೆ. ರೈ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ  ಸಂಘದ ನೂತನ ಅಧ್ಯಕ್ಷರನ್ನಾಗಿ ಮೋಹನ್‌ ಶೆಟ್ಟಿ ಎಣ್ಣೆಹೊಳೆ ಇವರನ್ನು ಆಯ್ಕೆಗೊಳಿ ಸಲಾಯಿತು.  ತುಳುಕೂಟದ ಅಧ್ಯಕ್ಷರಾ ಗಿ ಆಯ್ಕೆಗೊಂಡ ಮೋಹನ್‌ ಶೆಟ್ಟಿ ಎಣ್ಣೆಹೊಳೆ ಇವರಿಗೆ ತುಳುಕೂಟ ಪಿಂಪ್ರಿ-ಚಿಂಚಾÌಡ್‌ ಇದರ ಅಧ್ಯಕ್ಷರಾದ ಹರೀಶ್‌ ಶೆಟ್ಟಿ ಕುರ್ಕಾಲ್‌, ಉಪಾಧ್ಯಕ್ಷ ದಿನೇಶ್‌ ಶೆಟ್ಟಿ ಉಜಿರೆ, ಶಿಕ್ಷಣ  ಮತ್ತು ಸಾಮಾಜಿಕ ಸಮಿತಿ ಕಾರ್ಯಾಧ್ಯಕ್ಷ ನಿತಿನ್‌ ಶೆಟ್ಟಿ ನಿಟ್ಟೆ ಅವರು ಪುಷ್ಪಗುತ್ಛ ವನ್ನಿತ್ತು ಅಭಿನಂದಿಸಿದರು.

ಹಿರಿಯಡಕ ಮಹತೋಭಾರ ಶ್ರೀ ವೀರಭದ್ರ ದೇವಸ್ಥಾನದ ಜೀರ್ಣೋ ದ್ಧಾರ ಸಮಿತಿಯ ಪುಣೆ ಘಟಕದ ಅಧ್ಯಕ್ಷರಾಗಿದ್ದ ಹರಿಪ್ರಸಾದ್‌ ಶೆಟ್ಟಿ ಅಂಜಾರುಬೀಡು ಇವರು ಮೋಹನ್‌ ಶೆಟ್ಟಿ ಅವರನ್ನು ಪುಷ್ಪಗುತ್ಛ ನೀಡಿ ಅಭಿನಂದಿಸಿದರು. ಅದೇ ರೀತಿ ಸ್ವತಂತ್ರ ಸಮಿತಿಯಾಗಿ ಆಯ್ಕೆಗೊಂಡ ತುಳುಕೂಟ ಪಿಂಪ್ರಿ ಚಿಂಚಾÌಡ್‌ ಇದರ ಅಧ್ಯಕ್ಷ ಹರೀಶ್‌ ಶೆಟ್ಟಿ ಕುರ್ಕಾಲ್‌ ಇವರನ್ನು ಪುಣೆ ತುಳುಕೂಟದ ವತಿಯಿಂದ  ಗೌರವಾಧ್ಯಕ್ಷರಾದ ತಾರಾ ನಾಥ ಕೆ. ರೈ ಮೇಗಿನಗುತ್ತು ಅವರು   ಪುಷ್ಪಗುತ್ಛವನ್ನಿತ್ತು ಅಭಿನಂದಿಸಿ ಶುಭಹಾರೈಸಿದರು.ಸಭೆಯಲ್ಲಿ ಸಂಘದ ಸ್ಥಾಪಕಾಧ್ಯಕ್ಷ ಜಯ ಕೆ. ಶೆಟ್ಟಿ, ಮಾಜಿ ಅಧ್ಯಕ್ಷರಾದ ಮಿಯ್ನಾರು  ರಾಜ್‌ ಕುಮಾರ್‌ ಎಂ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ರೋಹನ್‌ ಪಿ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ  ಸುಜಾತಾ ಪಿ. ಶೆಟ್ಟಿ, ಸಲಹಾ ಸಮಿತಿ ಸದಸ್ಯರಾದ ಮದಂಗಲ್ಲು ಆನಂದ ಭಟ್‌, ಪಾಂಗಾಳ ವಿಶ್ವನಾಥ ಶೆಟ್ಟಿ  ಮತ್ತಿತರ ಸದಸ್ಯರು ಉಪಸ್ಥಿತರಿದ್ದರು. 

ಚಿತ್ರ -ವರದಿ : ಕಿರಣ್‌ ಬಿ. ರೈ ಕರ್ನೂರು


Trending videos

Back to Top