ಘೋಡ್‌ಬಂದರ್‌ ಶ್ರೀ ಸ್ವಾಮಿ ಅಯ್ಯಪ್ಪ ಸೇವಾ ಟ್ರಸ್ಟ್‌ ದಶಮಾನೋತ್ಸವ


Team Udayavani, Dec 11, 2018, 4:55 PM IST

1012mum03a.jpg

ಥಾಣೆ: ಘೋಡ್‌ಬಂದರ್‌ ರೋಡ್‌ ಶ್ರೀ ಸ್ವಾಮಿ ಅಯ್ಯಪ್ಪ ಸೇವಾ ಟ್ರಸ್ಟ್‌ ಇದರ ದಶಮಾನೋತ್ಸವ ಸಂಭ್ರಮದ ಮಹಾ ಪೂಜೆಯು ಡಿ. 6ರಂದು ಪ್ರಾರಂಭಗೊಂಡು,  ಡಿ. 9ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಥಾಣೆ  ಪಶ್ಚಿಮದ ಘೋಡ್‌ಬಂದರ್‌ ರೋಡ್‌ ಆನಂದ ನಗರದ, ಮುಚ್ಚಲಾ ಕಾಲೇಜಿನ ಸಮೀಪದಲ್ಲಿರುವ ಟಿ. ಎಂ. ಸಿ. ಮೈದಾನದಲ್ಲಿ ನಾಲ್ಕು ದಿನಗಳ ಕಾಲ ಅದ್ದೂರಿಯಾಗಿ ನಡೆಯಿತು.

ಡಿ. 9ರಂದು ಶ್ರೀ ಸ್ವಾಮಿ ಅಯ್ಯಪ್ಪ ಸೇವಾ ಟ್ರಸ್ಟ್‌ ಇದರ 10ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆಯು ನೆರವೇರಿತು. ಧಾರ್ಮಿಕ ಕಾರ್ಯಕ್ರಮವಾಗಿ  ಬೆಳಗ್ಗೆ 5ರಿಂದ ಶರಣು ಘೋಷ, ಗಣಹೋಮ, ಬೆಳಗ್ಗೆ 8ರಿಂದ ಶ್ರೀ ಸತ್ಯನಾರಾಯಣ ಮಹಾಪೂಜೆ, ಪೂರ್ವಾಹ್ನ 10ರಿಂದ  ಶ್ರೀ ಅಯ್ಯಪ್ಪ ಭಜನಾ ಮಂಡಳಿ ಘೋಡ್‌ಬಂದರ್‌ ರೋಡ್‌ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಮಧ್ಯಾಹ್ನ 1ರಿಂದ ಪ್ರಭಾಕರ ಗುರುಸ್ವಾಮಿ, ಅಶೋಕ್‌ ಗುರುಸ್ವಾಮಿ, ಶಿಬಿರದ ಸುರೇಂದ್ರ ಕೋಟ್ಯಾನ್‌ ಮತ್ತು ಶಿಬಿರದ ಮುಂದಾಳು ಪ್ರಶಾಂತ್‌ ನಾಯಕ್‌ ಗುರುಸ್ವಾಮಿ ಮಾಣಿಪಾಡಿ ಅವರು ಮಹಾಕರ್ಪೂರಾರತಿಗೈದರು.  ಹೂವು ಗಳಿಂದ ಅಲಂಕೃತಗೊಂಡ ಅಯ್ಯಪ್ಪ ಸ್ವಾಮಿಯ ಪ್ರತಿಬಿಂಬದ ಬಲಬದಿಯಲ್ಲಿ ಶ್ರೀ ಕಟೀಲು ಭ್ರಮರಾಂಬಿಕೆ, ಎಡಬದಿಯಲ್ಲಿ ಶ್ರೀ ಗಣಪತಿ ದೇವರ ಪ್ರತಿಬಿಂಬಕ್ಕೆ ಅಯ್ಯಪ್ಪ  ವ್ರತಧಾರಿಗಳಿಂದ ವಿಶೇಷ ಪೂಜೆ ನಡೆಯಿತು.

ಪೂಜಾ ಕಾರ್ಯಕ್ರಮಗಳಲ್ಲಿ ಥಾಣೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂದೀಪ್‌ ಲೆಲೆ, ಘೋಡ್‌ಬಂದರ್‌ರೋಡ್‌ ಕನ್ನಡ ಅಸೋಸಿಯೇಶನ್‌ ಅಧ್ಯಕ್ಷ ವಿಕ್ರಮಾನಂದ ಶೆಟ್ಟಿ ಮತ್ತು ಇತರ ಪದಾಧಿಕಾರಿಗಳು, ಥಾಣೆ ಬಂಟ್ಸ್‌ ಅಸೋಸಿಯೇಶನ್‌ನ ಅಧ್ಯಕ್ಷ ಕುಶಲ್‌ ಭಂಡಾರಿ ಮತ್ತು ಇತರ ಪದಾಧಿಕಾರಿಗಳು, ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಥಾಣೆ, ಕನ್ನಡ ಸಂಘ ಬಾಲ್ಕೂಮ್‌, ಯಕ್ಷವೈಭವ ಮೀರಾರೋಡ್‌, ಕಲ್ವಾ ಫ್ರೆಂಡ್ಸ್‌, ಬಿಲ್ಲವರ ಅಸೋಸಿಯೇಶನ್‌ ಥಾಣೆ ಸ್ಥಳೀಯ ಸಮಿತಿ, ಶ್ರೀ ಶಕ್ತಿ ಮಹಿಳಾ ಮಂಡಳಿ ಥಾಣೆ, ನವೋದಯ ಕನ್ನಡ ಸೇವಾ ಸಂಘ ಥಾಣೆ, ಕನ್ನಡ ಸಂಘ ವರ್ತಕ್‌ನಗರ, ಹೊಟೇಲ್‌ ಓನರ್ ಅಸೋಸಿಯೇಶನ್‌ ಥಾಣೆ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು, ತುಳು-ಕನ್ನಡಿಗರು ಶ್ರೀ ಅಯ್ಯಪ್ಪ ದೇವರ ದರ್ಶನ ಪಡೆದು ಮಹಾಪ್ರಸಾದ ಸ್ವೀಕರಿಸಿದರು.

ಶಿಬಿರದ ಹರೀಶ್‌ ಸಾಲ್ಯಾನ್‌, ರವಿ ಕೋಟ್ಯಾನ್‌ ಅವರ ಸೇವಾರ್ಥಕವಾಗಿ ನಡೆದ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತಾಭಿಮಾನಿಗಳು ಪಾಲ್ಗೊಂಡಿದ್ದರು. ಅಪರಾಹ್ನ 2ರಿಂದ ಭಕ್ತಿ ಶೃಂಗಾರ ಭಜನಾ ಕಾರ್ಯಕ್ರಮ ನಡೆಯಿತು. ಸಂಜೆ 5 ರಿಂದ ರಾತ್ರಿ 7ರ ವರೆಗೆ ನೃತ್ಯ ಕಲಾವಿದೆ ಅನುಪಮಾ ರಾವ್‌ ಅವರ ನಿರ್ದೇಶನದಲ್ಲಿ ಮಣಿಕಂಠ ಮಹಿಮೆ ನೃತ್ಯ ರೂಪಕ, ರಾತ್ರಿ 7.30ರಿಂದ ರಾತ್ರಿ 9.30 ರವರೆಗೆ ರಾಜೇಶ್‌ ಆಚಾರ್ಯ ರಚಿಸಿ, ಮನೋಹರ ಶೆಟ್ಟಿ ನಂದಳಿಕೆ ನಿರ್ದೇಶನದಲ್ಲಿ ಶ್ರೀ ಸ್ವಾಮಿ ಅಯ್ಯಪ್ಪ ಸೇವಾ ಟ್ರಸ್ಟ್‌ ಥಾಣೆ ಇದರ ಕಲಾವಿದರುಗಳಿಂದ ಆಲ್‌ ಎನ್ನಾಲ್‌ ತುಳು ನಾಟಕ ಪ್ರದರ್ಶನಗೊಂಡಿತು.

ದಶಮಾನೋತ್ಸವದ ಅಂಗವಾಗಿ ಡಿ. 6 ರಂದು ಸಂಜೆ 6ರಿಂದ ರಾತ್ರಿ 9ರ ವರೆಗೆ ಮರಾಠಿ ಹಾಗೂ ಹಿಂದಿ ಭಜನಾ ಕಾರ್ಯಕ್ರಮವು ಗಾಯಕ ಗಣೇಶ್‌ ಎರ್ಮಾಳ್‌ ಮತ್ತು ತಂಡದವರಿಂದ ನಡೆಯಿತು.  ಡಿ. 7 ರಂದು ಸಂಜೆ 6 ರಿಂದ ರಾತ್ರಿ 10ರ ವರೆಗೆ ಜೈ ಅಂಬಾ ಮಾ ಪೂಜೆ ಮತ್ತು ಗರ್ಭಾ ನೃತ್ಯವನ್ನು ಆಯೋಜಿಸಲಾಗಿತ್ತು.  ಡಿ. 8ರಂದು ಸಂಜೆ 6.30ರಿಂದ ರಾತ್ರಿ 10ರ ವರೆಗೆ ಮಹಾವೀರ ಪ್ರಸಾದ್‌ ಅಗರ್‌ವಾಲ್‌ ಅವರ ಮುಂದಾಳತ್ವದಲ್ಲಿ ಮಾತಾಕೀ ಚೌಕಿ ಕಾರ್ಯಕ್ರಮ ನೆರವೇರಿತು.

ಗುರುಸ್ವಾಮಿ ಪ್ರಶಾಂತ್‌ ನಾಯಕ್‌ ಮಾಣಿಪ್ಪಾಡಿ ಅವರ ಮುಂದಾಳತ್ವದಲ್ಲಿ  ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳು ನೆರವೇರಿದ್ದು, ಅಯ್ಯಪ್ಪ ಭಕ್ತರು ಹರೀಶ್‌ ಸಾಲ್ಯಾನ್‌, ವಸಂತ್‌ ಸಾಲ್ಯಾನ್‌, ರವಿ ಕೋಟ್ಯಾನ್‌, ಸೀತಾರಾಮ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಕರುಣಾಕರ ಶೆಟ್ಟಿ, ಜಯರಾಮ ನಾಯಕ್‌ ಗುರುಸ್ವಾಮಿ, ಸುರೇಂದ್ರ ಕೋಟ್ಯಾನ್‌ ಗುರುಸ್ವಾಮಿ, ಅಶೋಕ್‌ ಸ್ವಾಮಿ, ವಿಶ್ವನಾಥ ಸ್ವಾಮಿ ಅವರು ವಿಶೇಷವಾಗಿ ಸಹಕರಿಸಿದರು. 

ಚಿತ್ರ-ವರದಿ:ರಮೇಶ್‌ ಉದ್ಯಾವರ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.